ಕಣಿವೆ, ಜೂ. ೧೪: ಕುಶಾಲನಗರದ ಫಾತಿಮ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಈ ಬಾರಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ಗಣನೀಯ ಸಾಧನೆ ತೋರಿದ ವಿದ್ಯಾರ್ಥಿನಿ ಹೆಚ್. ವಿಜೇತಳಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

೬೨೫ ಕ್ಕೆ ೬೨೧ ಅಂಕಗಳನ್ನು ಗಳಿಸಿದ್ದು, ಕನ್ನಡದಲ್ಲಿ ೧೨೫ ಕ್ಕೆ ೧೨೪, ಇಂಗ್ಲೀಷ್‌ನಲ್ಲಿ ೧೦೦ ಕ್ಕೆ ೯೯, ಹಿಂದಿಯಲ್ಲಿ ೧೦೦ ಕ್ಕೆ ೧೦೦, ಗಣಿತದಲ್ಲಿ ೧೦೦ ಕ್ಕೆ ೧೦೦, ಸಮಾಜದಲ್ಲಿ ೧೦೦ ಕ್ಕೆ ೯೯ ಹಾಗೂ ವಿಜ್ಞಾನದಲ್ಲಿ ೧೦೦ ಕ್ಕೆ ೯೯ ಅಂಕಗಳನ್ನು ಗಳಿಸಿದ್ದಾರೆ.

ಈ ಸಂದರ್ಭ ಶಾಲೆಯ ಸಿಸ್ಟರ್ ಥೆರೇಸಾ ಆ್ಯನಿ, ಶಿಕ್ಷಕರಾದ ಉಷಾ, ಭಾರತಿ, ಕಾರ್ಲೋಸ್, ಸಂತೋಷ್, ಪ್ರಮೀಳಾ ಹಾಗೂ ವಿಜೇತಳ ಪೋಷಕರಾದ ಸುಧಾ ಹಾಗೂ ಹರೀಶ್ ಇದ್ದರು.