ವೀರಾಜಪೇಟೆ, ಜೂ. ೧೪: ಕೊಡಗು ಜಿಲ್ಲೆಯು ದೇಶ ಸೇವೆಗಾಗಿ, ಕ್ರೀಡಾ ಕ್ಷೇತ್ರಕ್ಕಗಾಗಿ, ಸಾವಿರಾರು ಮಂದಿಯನ್ನು ನೀಡಿದೆ. ರಾಜ್ಯ, ದೇಶ ಮತ್ತು ವಿದೇಶದಲ್ಲಿ ತನ್ನ ಛಾಪು ಮೂಡಿಸಿದೆ. ಆದರೆ ಜಿಲ್ಲೆಯ ತುರ್ತು ಸಂದÀರ್ಭದಲ್ಲಿ ನೆರವಾಗಲು ವಿವಿಧ ±ಸ್ತç ಚಿಕಿತ್ಸೆ ಒದಗಿಸಲು ಸುಸಜ್ಜಿತವಾದ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಕೊರೆತೆಯಿದೆ. ಇದು ಸಾರ್ವಜನಿಕ ಧ್ವನಿಯಾಗಬೇಕು ಎಂದು ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷರ ಮತ್ತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಸ್ಟೀಸ್ ಹಾಗೂ ಕೊಡಗು ವೆಲ್ಫೇರ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಪ್ರೌಢಶಾಲೆ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ ‘ಕೊಡಗು ಜಿಲ್ಲೆಗೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಬೇಡಿಕೆ’ ಎಂಬ ವಿಷಯದ ಕುರಿತು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಭಾಷಣ ಸ್ಪರ್ಧೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಕುಟ್ಟಪ್ಪ ಕಾರ್ಯನಿರ್ವಹಿಸಿದರು.
ವಿದ್ಯಾರ್ಥಿಗಳು ತಮ್ಮ ಭಾಷಣ ದಲ್ಲಿ ಆಸ್ಪತ್ರೆಯ ಅನಿವಾರ್ಯತೆಯ ಬಗ್ಗೆ ತಮ್ಮ ಜೀವನದಲ್ಲಾದ ಘಟನೆಗಳನ್ನು ಮನಕಲಕುವಂತೆ ಅಭಿವ್ಯಕ್ತಗೊಳಿಸಿದ್ದಾರೆ. ಭಾಷಣ ಕಲೆಯಲ್ಲಿ ನೀಡಿರುವ ವಸ್ತು ಅಥವಾ ವಿಷಯ ಆಧರಿತ ಸಂಗತಿಗಳನ್ನು ಪರಿಪೂರ್ಣತೆಯೊಂದಿಗೆ ಅರಿತು ಪ್ರಸ್ತುತ ಮಾಡಿದ್ದಲ್ಲಿ ಒಂದು ಉತ್ತಮ ವಾಗ್ಮಿ ಎನಿಸಬಹುದಾಗಿದೆ. ಕೆಲವು ವಿದ್ಯಾರ್ಥಿಗಳ ಜೀವನದಲ್ಲಿ ಘಟಿಸಿದ ಘಟನೆಗಳನ್ನು ಆಧರಿಸಿ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದು, ತಮಗೆ ಅರಿತಿರುವ ವಿಷಯಗಳು ನಮ್ಮನ್ನು ಆಳುವ ಜನಪ್ರತಿನಿಧಿಗಳು, ಆಡಳಿತ ವರ್ಗಕ್ಕೆ ತಿಳಿಯದೇ ಇರುವುದು ವಿಪರ್ಯಾಸದ ವಿಷಯವಾಗಿದೆ ಎಂದು ಕುಟ್ಟಪ್ಪ ವಿಷಾಧಿಸಿದರು.
ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಮಾದಂಡ ತಿಮ್ಮಯ್ಯ ಅವರು ಮಾತನಾಡಿ ಕೊಡಗು ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿ ದರೂ ಆರೋಗ್ಯದ ದೃಷ್ಟಿಯಲ್ಲಿ ಪ್ರಗತಿಹೊಂದದಿರುವುದು ಬೇಸರದ ಸಂಗತಿಯಾಗಿದೆ. ಜನಪತ್ರಿನಿಧಿಗಳು, ಖಾಸಗಿ ಸಂಸ್ಥೆಗಳ ಮುಂದೆ ಬಂದು ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ನನಸು ಮಾಡುವತ್ತ ಗಮನ ಹರಿಸಿದಲ್ಲಿ ಆರೋಗ್ಯ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಹೇಳಿದರು.
ಕೊಡಗು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆಗಳ ಶಾಲಾ ಕಾಲೇಜುಗಳಿಂದ ಒಟ್ಟು ೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜು ವಿಭಾಗದಲ್ಲಿ ಒಟ್ಟು ೧೮ ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು ೩೨ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜು ವಿಭಾಗದಲ್ಲಿ ಅನುಶಾ ಕೆ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ (ಪ್ರಥಮ), ಸಂತ ಅನ್ನಮ್ಮ ಪದವಿ ಕಾಲೇಜು ವೀರಾಜಪೇಟೆ ಆನ್ ಮೇರಿ (ದ್ವೀತಿಯ), ಯಶೀಕಾ ಸಂತ ಅನ್ನಮ್ಮ ಪದವಿ ಕಾಲೇಜು ವೀರಾಜಪೇಟೆ (ತೃತೀಯ), ರೀಶ್ಮ ಕಾವೇರಿ ಕಾಲೇಜು ವೀರಾಜಪೇಟೆ (ಚುತುರ್ಥ) ಪ್ರಶಸ್ತಿಗಳನ್ನು ಪಡೆದುಕೊಂಡರು.
ಪ್ರೌಢಶಾಲೆ ವಿಭಾಗದಲ್ಲಿ ಕಾವೇರಿ ಆಂಗ್ಲ ಮಾದ್ಯಮ ಶಾಲೆ ವೀರಾಜಪೇಟೆ ಮೋಕ್ಷ (ಪ್ರಥಮ), ಸಫಾನ್ ನೇತಾಜಿ ಆಂಗ್ಲ ಮಾದ್ಯಮ ಶಾಲೆ ಅಮ್ಮತ್ತಿ (ದ್ವಿತೀಯ), ನ್ಯಾಷನಲ್ ಅಕಾಡೆಮಿ ಗೋಣಿಕೊಪ್ಪಲು ಶಾಲೆಯ ಲವೀನಾ (ತೃತೀಯ) ಸ್ಥಾನದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಕಾರ್ಯಕ್ರಮ ಉದ್ದೇಶಿಸಿ ಆಯೂಶ್ ಹೆಲ್ತ್ ಕೇರ್ ಸೆಂಟರ್, ಮೈಸೂರು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಪವನ್ ಕುಮಾರ್, ತೀರ್ಪುಗಾರರಾಗಿ ಆಗಮಿಸಿದ ಶಿಕ್ಷಕಿ ಧರ್ಮಶೀಲಾ ಅವರುಗಳು ಮಾತನಾಡಿದರು. ಶ್ರೀಕೃಷ್ಣ ಮಂದಿರ ಶಾಲೆ ಸಿದ್ದಾಪುರದ ಶಿಕ್ಷಕ ಶ್ರೇಯಸ್ಸ್ ಉಪಸ್ಥಿತರಿದ್ದರು.
ಕೊಡಗು ವೆಲ್ಫೆರ್ ಫೌಂಡೇಶನ್‌ನ ಸದಸ್ಯ ಆಸಿಫ್, ವಿವಿಧ ಶಾಲೆ ಮತ್ತು ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಪ್ರಗತಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.