ಸುಂಟಿಕೊಪ್ಪ, ಜೂ. ೧೪: ಸರಕಾರ ಶ್ರೀಸಾಮಾನ್ಯರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದು ಸುಲಲಿತವಾಗಿ ಅನುಷ್ಠಾನಗೊಳ್ಳಲು ಸರಳೀಕರಣ ಆಡಳಿತ ವ್ಯವಸ್ಥೆಗೆ ಮುನ್ನಡಿ ಇಟ್ಟಿದೆ. ಆದರೆ ಫಲಾನುಭವಿಗಳಿಗೆ ತಲುಪದೆ ನಿರಾಶೆ ಮೂಡಿಸಿದ ಉದಾಹರಣೆ ಕಾಣಬಹುದಾಗಿದೆ.

ಸಂಧ್ಯಾ ಸುರಕ್ಷಾ ಯೋಜನೆ, ವಿಧವಾವೇತನ, ವಿಕಲಚೇತನ ಮಾಸಾಶÀನಗಳು ಸರಕಾರ ಮನೆ ಮನೆಗೆ ತಲುಪಿಸಲು ಯೋಜನೆಯನ್ನು ೧ ವರ್ಷಗಳ ಹಿಂದೆಯೇ ಜಾರಿಗೆ ತಂದಿತ್ತು. ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ’ ಎಂಬ ಸ್ಪಂದನ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಗ್ರಾಮ ೧ ಕೇಂದ್ರ ಸ್ಥಾಪಿಸಿ ಜನರು ನಾಡ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೆೆÃರಿಗೆ ಅಲೆದಾಡುವುದನ್ನು ತಪ್ಪಿಸಲು ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸರಕಾರದ ಈ ಜನಪ್ರಿಯ ಯೋಜನೆಗೆ ಮಾರುಹೋದ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿ ಸರಕಾರ ಯೋಜನೆಯ ಫಲ ಪಡೆಯಲು ಕಾದು ಕುಳಿತರೂ ಫಲಾನುಭವಿಗಳಿಗೆ ೫ ರಿಂದ ೬ ತಿಂಗಳು ಕಳೆದರೂ ಸಂಧ್ಯಾ ಸುರಕ್ಷಾ, ವಿಧವಾವೇತನ, ವಿಕಲಚೇತನರ ಮಾಸಾಶÀನ ಮಾತ್ರ ಇನ್ನೂ ಕೈಸೇರಿಲ್ಲ ಯಾವಾಗ ನಮಗೆ ಸರಕಾರದ ಮಾಸಾಶನದಿಂದ ಜೀವನದ ಸಂಧ್ಯಾ ಕಾಲವನ್ನು ಸುಧಾರಿತ ಜೀವನದಿಂದ ಕಳೆಯಬಹುದೆಂದು ಹಿರಿಯ ಜೀವಗಳು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಸುಂಟಿಕೊಪ್ಪ, ಜೂ. ೧೪: ಸರಕಾರ ಶ್ರೀಸಾಮಾನ್ಯರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದು ಸುಲಲಿತವಾಗಿ ಅನುಷ್ಠಾನಗೊಳ್ಳಲು ಸರಳೀಕರಣ ಆಡಳಿತ ವ್ಯವಸ್ಥೆಗೆ ಮುನ್ನಡಿ ಇಟ್ಟಿದೆ. ಆದರೆ ಫಲಾನುಭವಿಗಳಿಗೆ ತಲುಪದೆ ನಿರಾಶೆ ಮೂಡಿಸಿದ ಉದಾಹರಣೆ ಕಾಣಬಹುದಾಗಿದೆ.

ಸಂಧ್ಯಾ ಸುರಕ್ಷಾ ಯೋಜನೆ, ವಿಧವಾವೇತನ, ವಿಕಲಚೇತನ ಮಾಸಾಶÀನಗಳು ಸರಕಾರ ಮನೆ ಮನೆಗೆ ತಲುಪಿಸಲು ಯೋಜನೆಯನ್ನು ೧ ವರ್ಷಗಳ ಹಿಂದೆಯೇ ಜಾರಿಗೆ ತಂದಿತ್ತು. ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ’ ಎಂಬ ಸ್ಪಂದನ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಗ್ರಾಮ ೧ ಕೇಂದ್ರ ಸ್ಥಾಪಿಸಿ ಜನರು ನಾಡ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೆÉÃರಿಗೆ ಅಲೆದಾಡುವುದನ್ನು ತಪ್ಪಿಸಲು ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸರಕಾರದ ಈ ಜನಪ್ರಿಯ ಯೋಜನೆಗೆ ಮಾರುಹೋದ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿ ಸರಕಾರ ಯೋಜನೆಯ ಫಲ ಪಡೆಯಲು ಕಾದು ಕುಳಿತರೂ ಫಲಾನುಭವಿಗಳಿಗೆ ೫ ರಿಂದ ೬ ತಿಂಗಳು ಕಳೆದರೂ ಸಂಧ್ಯಾ ಸುರಕ್ಷಾ, ವಿಧವಾವೇತನ, ವಿಕಲಚೇತನರ ಮಾಸಾಶÀನ ಮಾತ್ರ ಇನ್ನೂ ಕೈಸೇರಿಲ್ಲ ಯಾವಾಗ ನಮಗೆ ಸರಕಾರದ ಮಾಸಾಶನದಿಂದ ಜೀವನದ ಸಂಧ್ಯಾ ಕಾಲವನ್ನು ಸುಧಾರಿತ ಜೀವನದಿಂದ ಕಳೆಯಬಹುದೆಂದು ಹಿರಿಯ ಜೀವಗಳು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.