ಮಡಿಕೇರಿ, ಜೂ. ೧೫: ಸಾಮಾನ್ಯವಾಗಿ ಕಾಡು -ತೋಟಗಳಲ್ಲಿರುವ ನವಿಲು ನಗರಕ್ಕೆ ಬಂದುಬಿಟ್ಟಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ವಿವಿಧ ಬಡಾವಣೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೆಣ್ಣು ನವಿಲನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಿಡಿದು ಆನೆಕಾಡು ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ. ಇಂದು ಹೊಸ ಬಡಾವಣೆಯ ಮನೆಯೊಂದರ ಸೂರಿನ ಮೇಲೆ ಕುಳಿತಿದ್ದ ನವಿಲನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.