ಗೋಣಿಕೊಪ್ಪಲು, ಜೂ. ೧೫: ಬಡ ಕೃಷಿಕನು ಕಳೆದ ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬರುತ್ತಿದ್ದ ಫಸಲು ಭರಿತ ಕಾಫಿ, ಕರಿಮೆಣಸು, ಅಡಿಕೆ ಹಾಗೂ ಕಿತ್ತಳೆ ಗಿಡಗಳನ್ನು ಬುಡದಿಂದಲೇ ಕತ್ತರಿಸಿ ಅನ್ಯಾಯ ಮಾಡಿರುವುದಾಗಿ ಆರೋಪಿಸಿ ಕುಟ್ಟ ಪೊಲೀಸ್ ಠಾಣೆಯಲ್ಲಿ ಖಾಸಗಿ ಸ್ಪೋರ್ಟ್ಸ್ ಅಸೋಷಿಯೇಶನ್ ಪದಾಧಿಕಾರಿಗಳ ಮೇಲೆ ದೂರು ನೀಡಲಾಗಿದೆ.
ಕಾನೂರು ಗ್ರಾ.ಪಂ. ವ್ಯಾಪ್ತಿಯ ಲಕ್ಕುಂದ ಗ್ರಾಮದ ನಿವಾಸಿ ಮಾಚಿಮಾಡ ಅರಸು ಅವರು ತಮಗೆ ಆದ ಅನ್ಯಾಯದ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರನ್ನು ಸ್ವೀಕರಿಸಿದ ಕುಟ್ಟ ಪೊಲೀಸ್ ಠಾಣಾಧಿಕಾರಿ ಸ್ಥಳೀಯ ಸ್ಪೋರ್ಟ್ಸ್ ಅಸೋಷಿಯೇಶನ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸೇರಿದಂತೆ ೧೦ ಮಂದಿಯ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಲಕ್ಕುAದ ಗ್ರಾಮದಲ್ಲಿರುವ ಕ್ಲಬ್ನ ಹಿಂಬದಿಯಲ್ಲಿರುವ ಸರ್ಕಾರಿ ಜಾಗದಲ್ಲಿ ದೂರುದಾರ ಅರಸು ಅವರು ಕಳೆದ ಹಲವಾರು ವರ್ಷಗಳಿಂದ ೫೦ ಸೆಂಟ್ ಜಾಗದಲ್ಲಿ ಕೃಷಿ ಮಾಡಿಕೊಂಡು ಹಾಗೂ ವಾಸಿಸಲು ಶೀಟ್ ಮನೆಯನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು.
ಮನೆಯ ಕಂದಾಯ ಹಾಗೂ ವಿದ್ಯುತ್ ಬಿಲ್ ಎರಡನ್ನು ಅರಸು ಹೆಸರಿನಲ್ಲೇ ಪಾವತಿಯಾಗುತ್ತಿದ್ದವು, ಕಳೆದ ಕೆಲವು ದಿನಗಳ ಹಿಂದೆ ಇರುವ ಜಾಗಕ್ಕೆ ಫಾರಂ ನಂ. ೫೭ನ್ನು ಸಲ್ಲಿಸಿ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಯಲ್ಲಿ ಅರಸು ಲಿಖಿತ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯಕ್ಕೆ ಆಗಮಿಸಿದ್ದರು.
ಈ ವೇಳೆ ಅಲ್ಲಿಗೆ ಬಂದ ಕ್ಲಬ್ನ ಆಡಳಿತ ಮಂಡಳಿಯ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಸರ್ವೆ ಕಾರ್ಯ ನಡೆಸದಂತೆ ವಾಪಸು ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿ ಸರ್ವೆ ಕಾರ್ಯ ನಡೆದಿರಲಿಲ್ಲ.
ಅರಸು ಅನಾರೋಗ್ಯದ ನಿಮಿತ್ತ ಗೋಣಿಕೊಪ್ಪ ಆಸ್ಪತ್ರೆಗೆ ತೆರಳಿದ ಸಂದರ್ಭ ಇವರ ಸ್ವಾಧೀನದಲ್ಲಿದ್ದ ಫಸಲು ಭರಿv ಹಲವಾರು ಗಿಡಗ ಳನ್ನು ದುಷ್ಕರ್ಮಿಗಳು ಯಂತ್ರಗಳ ಮೂಲಕ ಕತ್ತರಿಸಿ ನಾಶ ಮಾಡಿದ್ದಾರೆ.
ಇದರಿಂದ ನಮಗೆ ತುಂಬಾ ನಷ್ಟವಾಗಿದೆ ಎಂದು ಅರಸು ಅವರ ಪುತ್ರ ಸಂತೋಷ್ ಹೇಳಿದ್ದಾರೆ. ಈ ಬಗ್ಗೆ ನ್ಯಾಯ ಒದಗಿಸಲು ಕುಟ್ಟ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಲಾಗಿದೆ.