ಶರದ್ ಪವಾರ್ ಭೇಟಿ ಮಾಡಿದ ಮಮತಾ
ನವದೆಹಲಿ, ಜೂ. ೧೪: ಮುಂದಿನ ತಿಂಗಳು ನಡೆಯಲಿರುವ ರಾಷ್ಟçಪತಿ ಚುನಾವಣೆಗೆ ಸಂಬAಧಿಸಿದAತೆ ಪ್ರತಿಪಕ್ಷಗಳ ಚಟುವಟಿಕೆ ತೀವ್ರಗೊಂಡಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಎಡರಂಗದ ನಾಯಕರು ಮಂಗಳವಾರ ದೆಹಲಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಜುಲೈ ೧೮ ರ ಚುನಾವಣೆಗೆ ರಾಷ್ಟçಪತಿ ಅಭ್ಯರ್ಥಿಯ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲು ಮಮತಾ ಬ್ಯಾನರ್ಜಿ ಕರೆದಿರುವ ಪ್ರತಿಪಕ್ಷಗಳ ಸಭೆಗೆ ಒಂದು ದಿನ ಮೊದಲು ಉಭಯ ನಾಯಕರು ಭೇಟಿಯಾಗಿದ್ದು, ಪ್ರತಿಪಕ್ಷಗಳ ರಾಷ್ಟçಪತಿ ಅಭ್ಯರ್ಥಿಯಾಗುವಂತೆ ಶರದ್ ಪವಾರ್ ಅವರ ಮನವೊಲಿಸಲಾಗುತ್ತಿದೆ. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಮತ್ತು ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್ ಹಾಗೂ ಪಿ.ಸಿ. ಚಾಕೊ ಅವರು ಸಹ ಇಂದು ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ (ಎಂ) ನಾಯಕ ಯೆಚೂರಿ ಅವರು, ರಾಷ್ಟçಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಶರದ್ ಪವಾರ್ ಅವರು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ. ರಾಷ್ಟçಪತಿ ಚುನಾವಣೆಗೆ ಪವಾರ್ ಅವರು ಪ್ರತಿಪಕ್ಷಗಳ ಅಭ್ಯರ್ಥಿಯಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ಇತರ ಹೆಸರುಗಳು ಪರಿಗಣನೆಯಲ್ಲಿವೆ ಎಂದು ಯೆಚೂರಿ ತಿಳಿಸಿದ್ದಾರೆ.
ಐಪಿಎಲ್ ಮಾಧ್ಯಮ ಹಕ್ಕು ರೂ. ೪೮,೩೯೦ ಕೋಟಿಗೆ ಮಾರಾಟ
ನವದೆಹಲಿ, ಜೂ. ೧೪: ಐದು ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೋಬ್ಬರಿ ೪೮,೩೯೦ ಕೋಟಿ(೬.೨೦ ಶತಕೋಟಿ ಡಾಲರ್)ಗೆ ಮಾರಾಟ ಮಾಡುವ ಮೂಲಕ ಐಪಿಎಲ್ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಸ್ಟಾರ್ ಇಂಡಿಯಾ ಟಿವಿ ಹಕ್ಕುಗಳನ್ನು ರೂ. ೨೩,೫೭೫ ಕೋಟಿ(ಪ್ರತಿ ಪಂದ್ಯಕ್ಕೆ ೫೭.೫ ಕೋಟಿ)ಗೆ ಖರೀದಿಸಿದ್ದರೆ ಹೆಚ್ಚು ಬೇಡಿಕೆಯಿರುವ ಭಾರತದ ಡಿಜಿಟಲ್ ಹಕ್ಕುಗಳ ಒಪ್ಪಂದವನ್ನು ರಿಲಯನ್ಸ್ ಬೆಂಬಲಿತ ವಯಾಕಾಮ್ ೧೮,೨೦,೫೦೦ ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ. ೨೯೯೧ ಕೋಟಿ ರೂ.ಗಳನ್ನು ಪಾವತಿಸುವ ಮೂಲಕ ಮಹತ್ವದಲ್ಲದ-ಪ್ಯಾಕೇಜ್ ಸಿ ಅನ್ನು ಪಡೆದುಕೊಂಡಿದೆ. ಪ್ಯಾಕೇಜ್ ಎ ಮತ್ತು ಬಿಗಾಗಿ ಒಪ್ಪಂದವು ಐದು ವರ್ಷಗಳಲ್ಲಿ ಒಟ್ಟಾರೆ ೪೧೦ ಪಂದ್ಯಗಳಿಗೆ ಸೀಮಿತವಾಗಿದೆ. ಇನ್ನು ೨೦೨೩ ಮತ್ತು ೨೦೨೪ ರಲ್ಲಿ ತಲಾ ೭೪ ಪಂದ್ಯ ಹಾಗೂ ೨೦೨೫ ಮತ್ತು ೨೦೨೬ರಲ್ಲಿ ತಲಾ ೮೪ ಪಂದ್ಯಗಳು ನಡೆಯಲಿದ್ದರೆ, ೨೦೨೭ರ ಆವೃತ್ತಿಯಲ್ಲಿ ೯೪ ಪಂದ್ಯಗಳು ನಡೆಯಲಿವೆ. ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥ ಉದಯ್ ಶಂಕರ್(ಬೋಧಿ ಟ್ರೀ) ಮತ್ತು ಜೇಮ್ಸ್ ಮುರ್ಡೋಕ್ (ಲುಪಾ ಸಿಸ್ಟಮ್ಸ್) ಹೊಂದಿರುವ ಒಕ್ಕೂಟದ ಮೂಲಕ ಗಿiಚಿಛಿom೧೮ ಕಣಕ್ಕೆ ಪ್ರವೇಶಿಸಿತು. ಸ್ಟಾರ್ ಇಂಡಿಯಾ ೨೩,೫೭೫ ಕೋಟಿ ರೂಪಾಯಿಗಳ ಬಿಡ್‌ನೊಂದಿಗೆ ಟಿವಿ ಹಕ್ಕುಗಳನ್ನು ಗೆದ್ದಿದೆ ಎಂದು ಘೋಷಿಸಲು ನಾನು ರೋಮಾಂಚನಗೊAಡಿದ್ದೇನೆ. ಎರಡು ಸಾಂಕ್ರಾಮಿಕ ವರ್ಷಗಳ ಹೊರತಾಗಿಯೂ ಬಿಸಿಸಿಐನ ಸಾಂಸ್ಥಿಕ ಸಾಮರ್ಥ್ಯಗಳಿಗೆ ಈ ಬಿಡ್ ನೇರ ಸಾಕ್ಷಿಯಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.
ನೂತನ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇಮಕ
ಬೆಂಗಳೂರು, ಜೂ. ೧೪: ರಾಜ್ಯ ಸರ್ಕಾರ ಕೊನೆಗೂ ಲೋಕಾಯುಕ್ತರನ್ನು ನೇಮಕ ಮಾಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಹಾಲಿ ಉಪ ಲೋಕಾಯುಕ್ತ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ನೂತನ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ. ಬಿ.ಎಸ್. ಪಾಟೀಲ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದ ಶಿಫಾರಸ್ಸಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಬಿಎಸ್ ಪಾಟೀಲ್ ಅವರು ತಾ. ೧೫ ರಂದು (ಇಂದು) ಬೆಳಿಗ್ಗೆ ರಾಜಭವನದಲ್ಲಿ ನೂತನ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ೨೦೨೨ರ ಜನವರಿ ೨೭ ರಂದು ನಿವೃತ್ತರಾಗಿದ್ದರು. ಅಂದಿನಿAದ ಈ ಹುದ್ದೆ ಖಾಲಿ ಇತ್ತು. ಈ ಹುದ್ದೆಗೆ ಈಗ ಬಿ.ಎಸ್. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ಸಂಸದ ಡಿ.ಕೆ. ಸುರೇಶ್ ಸೇರಿ ಕಾಂಗ್ರೆಸ್ ನಾಯಕರ ಬಂಧನ
ನವದೆಹಲಿ, ಜೂ. ೧೪: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಚಾರಣೆ ಎರಡನೇ ದಿನವಾದ ಇಂದು ಕೂಡಾ ಮುಂದುವರೆದಿದ್ದು, ಅವರನ್ನು ಭೇಟಿ ಮಾಡಲು ಹೊರಟ ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ದಿನೇಶ್ ಗುಂಡೂರಾವ್ ಮತ್ತಿತರ ಕಾಂಗ್ರೆಸ್ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಕಚೇರಿಗೆ ಹೊರಟ ಈ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಡಿ.ಕೆ. ಸುರೇಶ್ ಹಾಗೂ ಪೊಲೀಸರೊಂದಿಗೆ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ. ಪೊಲೀಸರೊಬ್ಬರು ಹಿಂಬದಿಯಿAದ ತಳ್ಳಿದ್ದಾರೆ. ಬಳಿಕ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮತ್ತೊಮ್ಮೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವನ್ನು ನೆನಪಿಸುತ್ತಿದೆ. ದೇಶವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸುತ್ತೇವೆ. ಆ ಬದ್ಧತೆ ನಮಗಿದೆ ಎಂದು ಟ್ವೀಟ್‌ನಲ್ಲಿ ಹೇಳಿದೆ.