ವೀರಾಜಪೇಟೆ, ಜೂ. ೧೫: ದಿಢೀರ್ ಹಣಗಳಿಸಿ, ಶ್ರೀಮಂತರಾಗುವ ಉದ್ದೇಶದೊಂದಿಗೆ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾದಕ ವಸ್ತುಗಳ ಅಕ್ರಮ ಮಾರಾಟ ಸಂಬAಧ ವೀರಾಜಪೇಟೆಯಲ್ಲಿ ೪೮ ಗಂಟೆಗಳ ಅವಧಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಕಕ್ಕಬ್ಬೆ ಗ್ರಾಮದ ನಿವಾಸಿ, ಆಟೋ ಚಾಲಕ ಅಶ್ರಫ್ (೩೪), ಅಸ್ಸಾಂ ರಾಜ್ಯದ ನಿವಾಸಿ, ಪ್ರಸ್ತುತ ಕುಕ್ಲೂರು ಗ್ರಾಮದ ತೋಟ ಒಂದರÀಲ್ಲಿ ಕೂಲಿ ಕಾರ್ಮಿಕನಾಗಿರುವ ಹಕೀಂ ಆಲಿ (೨೭), ಕೊಂಡAಗೇರಿ ಗ್ರಾಮದ ನಿವಾಸಿ ಅಸ್ಗರ್ (೨೭) ಮತ್ತು ಕೆದಮುಳ್ಳೂರು ಚೂರಿಯಾಲ ಗ್ರಾಮದ ನಾಲ್ಕನೇ ಮೈಲಿ ನಿವಾಸಿ ಅಜಿತ್ ಪೊನ್ನಪ್ಪ (೨೫) ಅಕ್ರಮ ಗಾಂಜಾ

(ಮೊದಲ ಪುಟದಿಂದ) ಮಾರಾಟದಲ್ಲಿ ತೊಡಗಿ ಬಂಧಿತರಾದ ಆರೋಪಿಗಳು.

ಘಟನೆ ವಿವರ: ತಾ. ೧೪ ರಂದು ವೀರಾಜಪೇಟೆ ನಗರ ಹೊರ ವಲಯದ ಆರ್ಜಿ ಕಂಡಿಮಕ್ಕಿ ಗ್ರಾಮಕ್ಕೆ ತೆರಳುವ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಸನಿಹದಲ್ಲಿ ಬಿಳಿ ಕಾರು, ಬೈಕ್ ಹಾಗೂ ಸ್ಕೂಟರ್ ನಿಲ್ಲಿಸಿಕೊಂಡು ಕಾರಿನಲ್ಲಿ ಅಪರಿಚಿತರು ಮಾತನಾಡುತ್ತಿರುವದನ್ನು ಗಮನಿಸಿದ ಸಾರ್ವಜನಿಕರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾಳಿ ನಡೆಸಿದ್ದಾರೆ. ಅಶ್ರಫ್ ಹೊಂದಿರುವ ಮಾರುತಿ ಬಿಳಿ ಬಣ್ಣದ ಆಲ್ಟೋ ಕಾರಿನಲ್ಲಿ (ಕೆಎ-೦೩ ಎಂಎA -೭೮೧೭) ೧ ಕೆ.ಜಿ. ತೂಕದ, ಪೊಟ್ಟಣದಲ್ಲಿರಿಸಲಾದ ಓಣ ಗಾಂಜಾ ಪತ್ತೆಯಾಗಿದೆ. ಕಾರಿನಲ್ಲಿದ್ದ ಮೂವರ ಬಳಿ ೨೨೮ ಗ್ರಾಂ ಗಾಂಜಾ ಸಿಕ್ಕಿದೆ. ಒಟ್ಟು ೧ ಕೆ.ಜಿ. ೨೨೮ ಗ್ರಾಂ ಗಾಂಜಾ ಹಾಗೂ ನಾಲ್ವರ ಮೊಬೈಲ್, ಬೈಕ್ ಮತ್ತು ಸ್ಕೂಟರ್, ರೂ.೨೧೦೦ ನಗದು ವಶಕ್ಕೆ ಪಡೆದಿದ್ದಾರೆ. ಬಂಧಿತರ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಶ್ರಫ್ ಮೇಲೆ ವಿವಿಧ ಠಾಣೆಗಳಲ್ಲಿ ಗಾಂಜಾ ಮತ್ತು ಇತರ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಅಜಿತ್ ಪೊನ್ನಪ್ಪ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಅಸ್ಸಾಂ ಮೂಲದ ಹಕೀಂ ಆಲಿ ಸುಮಾರು ಏಳು ವರ್ಷಗಳಿಂದ ಕೊಡಗಿನ ವಿವಿಧ ಸ್ಥಳಗಳಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ವಶಕ್ಕೆ ಪಡೆದಿರುವ ಗಾಂಜಾಗೆ ಮಾರುಕಟ್ಟೆಯಲ್ಲಿ ರೂ. ೫೦ ಸಾವಿರ ಬೆಲೆಯಿದೆ. ಕಾರಿನ ಮೌಲ್ಯ ೧.೫೦ ಲಕ್ಷ ಮತ್ತು ಬೈಕ್ ಹಾಗೂ ಸ್ಕೂಟರ್ ಕ್ರಮವಾಗಿ ರೂ. ೫೦ ಸಾವಿರ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಮತ್ತು ವೀರಾಜಪೇಟೆ ಉಪ ವಿಭಾಗ ಉಪಾಧೀಕ್ಷಕ ನಿರಂಜನ್ ರಾಜೇ ಅರಸ್ ಅವರುಗಳ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಅವರುಗಳ ನಿರ್ದೇಶನದ ಮೇರೆಗೆ ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಸಿ.ವಿ. ಶ್ರೀಧರ, ಸಹಾಯಕ ಠಾಣಾಧಿಕಾರಿಗಳಾದ ಬಿ.ಎಂ. ಮಹಮ್ಮದ್, ಎಂ.ಎA. ಮಹಮ್ಮದ್, ಸಿಬ್ಬಂದಿಗಳಾದ ಖಾದರ್, ಬಿ.ವಿ.ಸತೀಶ್, ಶೆಟ್ಟಪ್ಪ ಬಾಗೇವಾಡಿ, ಸಂತೋಷ್ ದೊಡ್ಡಮನಿ, ಸಂಗಮೇಶ ಶಿವಪುರ, ಗಿರೀಶ್, ಮುಸ್ತಾಫ, ಕೆ.ಎಂ. ಧರ್ಮ, ಸಾಗರ್, ಕಿರಣ್ ಕುಮಾರ್, ರಜನ್ ಕುಮಾರ್, ಮಹಂತೇಶ್ ಪೂಜಾರಿ, ಚಾಲಕರುಗಳಾದ ವಿ.ಪಿ.ರಮೇಶ್, ಅಭಿಷೇಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ, ಉಷಾ ಪ್ರೀತಂ