ಮಡಿಕೇರಿ, ಜೂ. ೧೩: ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದಿಂದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ‘ಪಿಸಿಬಿ ಡಿಸೈನ್ ಯೂಸಿಂಗ್ ಕೀಕ್ಯಾಡ್’ ಕುರಿತು ಐದು ದಿನಗಳ ಕಾರ್ಯಾಗಾರವನ್ನು ನಡೆಸಲಾಯಿತು. ಎಂಬೆಡೆಡ್ ಸಿಸ್ಟಮ್ ಮತ್ತು ಐಐಓಟಿ ಇಂಜಿನಿಯರ್ ನವದೆಹಲಿಯ ಕಿಶನ್ ಸಿಂಗ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ಡೈರೆಕ್ಟರ್ ಆಫ್ ಆರ್‌ಸಿಪಿಎಲ್ ಮುಕೇಶ್ ಕುಮಾರ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ದಿವಾಕರ ಎಸ್.ಎಸ್. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ‘ಕೀಕ್ಯಾಡ್’ ಎಂಬ ಪಿಸಿಬಿ ಲೇಔಟ್ ಮಾಡುವ ಸಾಧನದ ಬಗ್ಗೆ ಪರಿಚಯ ಹಾಗೂ ಕೀಕ್ಯಾಡ್ ಸಾಫ್ಟ್ವೇರ್‌ನ ಬಗ್ಗೆ ತರಬೇತಿ ನೀಡಲಾಯಿತು.