ಗೋಣಿಕೊಪ್ಪ ವರದಿ, ಜೂ. ೧೩ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕುಟ್ಟ ಶಾಖೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಎಂ ಗಣಪತಿ ಉದ್ಘಾಟಿಸಿ ಮಾತನಾಡಿ, ಒತ್ತಡ ತುಂಬಿದ ಜೀವನದಲ್ಲಿ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಜ್ಞಾನ ಹಾಗೂ ರಾಜಯೋಗ ಶಿಕ್ಷಣ ಅತ್ಯವಶ್ಯಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಖೆ ಆರಂಭಿಸಿರುವುದು ಶ್ಲಾಘನೀಯ. ಸ್ಥಳೀಯರು ಆರೋಗ್ಯ ಕಾಪಾಡಿಕೊಳ್ಳಲು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಬ್ರಹ್ಮಕುಮಾರಿ ಮಡಿಕೇರಿ ಶಾಖೆಯ ಸಂಚಾಲಕಿ ಧನಲಕ್ಷಿö್ಮ ಮಾತನಾಡಿ, ಭಗವಂತನನ್ನು ಅರಿತುಕೊಂಡು ಸತ್ಯವಾದ ಸುಖ-ಶಾಂತಿ ನೆಮ್ಮದಿ ಪಡೆಯಲು ಧ್ಯಾನದಿಂದ ಸಾಧ್ಯವಿದೆ. ಜೀವನವನ್ನು ಸಾರ್ಥಕತೆಯ ಕಡೆಗೆ ಕೊಂಡೊಯ್ಯಲು ಸಹಕಾರಿ ಎಂದರು.
ನೂರೇರ ಬಬಿತ ದೇವಿ ಗೀತೆ ಹಾಡಿದರು. ಕುಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ಎಂ. ದಿವ್ಯ, ಕುಟ್ಟ ಎಸ್.ಎನ್.ಡಿ.ಪಿ. ಶಾಖೆ ಅಧ್ಯಕ್ಷ ಪಿ.ಕೆ. ಅರುಣ್ ಕುಮಾರ್, ವೀರಾಜಪೇಟೆ ಬ್ರಹ್ಮಕುಮಾರೀಸ್ ಶಾಖೆ ಸಂಚಾಲಕಿ ಬಿ.ಕೆ. ಕೋಮಲ, ಗೋಣಿಕೊಪ್ಪ ಶಾಖೆಯ ಸಂಚಾಲಕಿ ಚಂದ್ರಿಕಾ, ಕಾರ್ಯಕರ್ತರಾದ ಶಿಬು, ಬಿ.ಕೆ. ರದೀಶ್, ಬಿ.ಕೆ ಸಂತೋಷ್, ಮಾಚಿಮಾಡ ಕಾಂತಿ, ಬಿ.ಕೆ. ರೇಷ್ಮ ಇದ್ದರು.