ಮಡಿಕೇರಿ, ಜೂ. ೧೧: ರಾಜ್ಯ ಸರಕಾರದ ಕಾರ್ಮಿಕ ಇಲಾಖೆ ೨.೧.೨೦೨೧ ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ೧೦ ಮಂದಿ ಹಾಗೂ ಅಧಿಕ ಕಾರ್ಮಿಕರನ್ನು ಅಂಗಡಿಗಳಲ್ಲಿ ನಿಯೋಜಿಸಿದ್ದರೆ, ಅಂತಹ ಅಂಗಡಿಗಳು ದಿನದ ೨೪ ಗಂಟೆ, ವಾರದ ಎಲ್ಲಾ ದಿನಗಳಲ್ಲಿ ಕಾರ್ಯಾಚರಿಸಲು ಅನುಮತಿಸಲಾಗಿದ್ದು, ಅಧಿಸೂಚನೆ ಹೊರಡಿಸಿದ ದಿನದಿಂದ ೩ ವರ್ಷಗಳ ತನಕ ಈ ನಿಯಮ ಜಾರಿಯಲ್ಲಿರಲಿದೆ.

ಆದರೆ ಇಂತಹ ಅಂಗಡಿಗಳು ರಾತ್ರಿವೇಳೆ ಕಾರ್ಯನಿರ್ವಹಿಸುವಾಗ ಅಧಿಸೂಚನೆಯ ಬಗ್ಗೆ ಅರಿವಿಲ್ಲದೆ ರಾಜ್ಯದ ಹಲವೆಡೆ ಸ್ಥಳೀಯ ಪೊಲೀಸರು ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದು, ಈ ಸಮಸ್ಯೆ ಬಗೆಹರಿಸಲೆಂದು ತಾ. ೧೪ ರಂದು ಸಭೆ ನಡೆಯಲಿದೆ. ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತಾ. ೧೪ ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಎಮ್.ಎಸ್. ಬಿಲ್ಡಿಂಗ್‌ನ ಐ.ಟಿ.ಬಿ.ಟಿ. ಕಾನ್ಫರೆನ್ಸ್ ಹಾಲ್‌ನಲ್ಲಿ ಸಭೆ ನಡೆಯಲಿದೆ.