ಮಡಿಕೇರಿ, ಜೂ. ೧೧ : ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೧೭ ಅಂಕಪಡೆದ ಕೊಡಗರಹಳ್ಳಿ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಉಜ್ವಲ ಟಿ.ಎನ್. ಮರು ಮೌಲ್ಯಮಾಪನದಲ್ಲಿ ೬೨೧ ಅಂಕಗಳನ್ನು ಗಳಿಸಿದ್ದಾಳೆ.
ಉಜ್ವಲ ಟಿ.ಎನ್. ಕುಶಾಲನಗರದ ನಂದ ಟಿ.ಎನ್. (ಮಾಜಿ ಸೈನಿಕರು) ಸೋಮವಾರಪೇಟೆ SಃIನ ಉದ್ಯೋಗಿ ಹಾಗೂ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಜಾತ ಬಿ.ಎನ್. ದಂಪತಿಯ ಪುತ್ರಿ.