ಮಡಿಕೇರಿ, ಜೂ. ೧೧: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನಿಮಾ)ದ ೭೫ನೇ ವರ್ಷದ ಸ್ಥಾಪಕ ಸಂಭ್ರಮಾಚರಣೆಯ ಅಂಗವಾಗಿ ಕೊಡಗು ನಿಮಾ ವತಿಯಿಂದ ತಾ.೧೩ ರಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಮೂಳೆಸಾಂದ್ರತೆ ಪರೀಕ್ಷೆ, ಸಕ್ಕರೆ ಅಂಶ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಹಾಗೂ ಪ್ರಕೃತಿ ನಿರ್ಣಯವನ್ನು ಮಡಿಕೇರಿ ಅಪ್ಪಚ್ಚಕವಿ ರಸ್ತೆಯಲ್ಲಿರುವ ಶ್ರೀ ಅಖಿಲರವಿ ಆಯುರ್ಶಾಲದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೩ ಗಂಟೆಯ ವರೆಗೆ ಶಿಬಿರ ನಡೆಯಲಿದೆ.