ಮಡಿಕೇರಿ, ಜೂ. ೧೨: ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿದೆ. ಆದರೆ ಪ್ರಸ್ತುತ ಅಕಾಡೆಮಿಯು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರಾಗಿರುವ ಲಕ್ಷಿö್ಮನಾರಾಯಣ ಕಜೆಗದ್ದೆ ಅವರನ್ನು ಸರ್ಕಾರ ವಜಾಗೊಳಿಸಬೇಕೆಂದು ಅಕಾಡೆಮಿಯ ಮಾಜಿ ಸದಸ್ಯ ಎ.ಕೆ. ಹಿಮಕರ್ ಆಗ್ರಹಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಪೂರಕವಾದ ಅಧ್ಯಯನ ಮತ್ತು ಪ್ರಕಟಣೆ ಹೊರತರುವುದು ಅರೆಭಾಷೆ ಅಕಾಡೆಮಿ ಮುಖ್ಯ ಕೆಲಸವಾಗಿದೆ. ಆದರೆ ಪ್ರಸ್ತುತ ಅಕಾಡೆಮಿಯಿಂದ ಯಕ್ಷಗಾನ, ನಾಟಕ, ತಾಳಮದ್ದಳೆಯಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಯಕ್ಷಗಾನ, ನಾಟಕಗಳನ್ನು ಪ್ರೋತ್ಸಾಹಿಸಲು ಅವುಗಳಿಗೆ ಆದಂತಹ ಪ್ರತ್ಯೇಕ ಅಕಾಡೆಮಿಗಳಿವೆ. ಹೀಗಿರುವಾಗ ಅರೆಭಾಷೆ ಅಕಾಡೆಮಿಯಿಂದ ಅಧ್ಯಯನ ಮತ್ತು ಪುಸ್ತಕ ಪ್ರಕಟಣೆಗಳಿಗಾಗಿ ಬಳಸಬೇಕಿದ್ದ ಸುಮಾರು ೧೦ ಲಕ್ಷಕ್ಕೂ ಅಧಿಕ ಹಣವನ್ನು ‘ಸಾಹೇಬ್ರು ಬಂದವೆ’ ಎಂಬ ಒಂದು ನಾಟಕಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದ ಹಿಮಕರ್ ಅವರು ಪಿ.ಸಿ. ಜಯರಾಮ ಅವರು ಅಧ್ಯಕ್ಷರಾಗಿದ್ದ ವೇಳೆ ಕೇವಲ ೧೮ ತಿಂಗಳಲ್ಲಿ ೧೮ ಕೃತಿಗಳನ್ನು ಪ್ರಕಟಿಸಲಾಗುತ್ತು; ಆದರೆ ಇಂತಹ ಕಾರ್ಯಗಳು ಲಕ್ಷಿö್ಮನಾರಾಯಣ ಕಜೆಗದ್ದೆ ಅವರ ಅವಧಿಯಲ್ಲಿ ನಡೆದಿಲ್ಲ ಎಂದು ದೂರಿದರು.
ಪ್ರಬುದ್ಧ ಸಂಶೋಧಕರಿಗೆ ಫೆಲೊಶಿಪ್ ನೀಡಿ
(ಮೊದಲ ಪುಟದಿಂದ) ೧೦ ಮೌಖಿಕ ಗ್ರಂಥಗಳನ್ನು ಸಿದ್ಧಪಡಿಸಲಾಗಿದ್ದರೂ ಅವುಗಳನ್ನು ಪ್ರಕಟಿಸಿಲ್ಲ. ಅವುಗಳ ಅಧ್ಯಯನಕ್ಕಾಗಿ ಏಳೂವರೆ ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಆ ಹಣ ವ್ಯರ್ಥವಾದಂತಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷಿö್ಮ ನಾರಾಯಣ ಕಜೆಗದ್ದೆಯವರನ್ನು ಸರ್ಕಾರ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು. ಪ್ರಕಟವಾಗದೆ ಇರುವ ಮೌಖಿಕ ಸಂಶೋಧನಾ ಕೃತಿಗಳನ್ನು ತಕ್ಷಣವೇ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಕೆ.ಆರ್. ತೇಜಕುಮಾರ್ ಮಾತನಾಡಿ, ‘ಸಾಹೇಬ್ರು ಬಂದವೆ’ ನಾಟಕವನ್ನು ಶಿವಮೊಗ್ಗ, ತೀರ್ಥಹಳ್ಳಿಯಲ್ಲಿ ಪ್ರದರ್ಶಿಸಲಾಗಿದೆ. ಅಲ್ಲಿ ಅರೆಭಾಷಿಕರಿದ್ದಾರೆಯೆ ಎಂದು ಪ್ರಶ್ನಿಸಿದರಲ್ಲದೆ ಅರೆಭಾಷೆ ಅಕಾಡೆಮಿಗೆ ಸಂಬAಧವಿಲ್ಲದ ನಾಟಕ, ಯಕ್ಷಗಾನದಂತಹ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿರುವ ರಿಜಿಸ್ಟಾçರ್ ಅವರ ನಿರ್ಧಾರಗಳು ಕೂಡ ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ವಕೀಲ ಕೆ.ಆರ್. ವಿದ್ಯಾಧರ್, ಸ್ಥಳೀಯರಾದ ಹರೀಶ್ ಉಪಸ್ಥಿತರಿದ್ದರು.