ಗೋಣಿಕೊಪ್ಪಲು, ಜೂ.೧೧: ಮುಂಜಾನೆಯ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಕಾರ್ಮಿಕನ ಮೇಲೆ ಸಲಗ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲಿಯೇ ಯುವಕ ಮೃತಪಟ್ಟ ಘಟನೆ ಕೋಣನಕಟ್ಟೆ, ತಿತಿಮತಿ ಮುಖ್ಯ ರಸ್ತೆಯ ಮರಪಾಲ ಬಳಿ ನಡೆದಿದೆ. ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ ಧನುಗಾಲ ಗ್ರಾಮದ ಮಾರಿಯಮ್ಮ ಕಾಲೋನಿಯ ಯರವರ ಚಾಮ (೪೮) ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ೫ ಗಂಟೆ ವೇಳೆ ದೈನಂದಿನ ಕೂಲಿ ಕೆಲಸ ಮುಗಿಸಿ ಮೃತ ಚಾಮ ಹಾಗೂ ಅದೇ ಊರಿನ ಸಿದ್ದಪ್ಪ ಪಿರಿಯಾಪಟ್ಟಣ ಸಮೀಪದ ಮಾವತ್ತೂರು ಮಾರಿಯಮ್ಮ ದೇವಸ್ಥಾನಕ್ಕೆ ಪೂಜಾ ಕಾರ್ಯಕ್ಕೆ ತೆರಳಿದ್ದರು. ರಾತ್ರಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದ ಇವರಿಬ್ಬರು ಮುಂಜಾನೆ ೫.೩೦ರ ಸಮೀಪದ ಮಾವತ್ತೂರು ಮಾರಿಯಮ್ಮ ದೇವಸ್ಥಾನಕ್ಕೆ ಪೂಜಾ ಕಾರ್ಯಕ್ಕೆ ತೆರಳಿದ್ದರು. ರಾತ್ರಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದ ಇವರಿಬ್ಬರು ಮುಂಜಾನೆ ೫.೩೦ರ ಹೆಲ್ಮೆಟ್ ಅನ್ನು ಆನೆಯ ಬಳಿ ಎಸೆದು ಓಡಿದ್ದಾನೆ. ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಚಾಮ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ಕಾಡಾನೆಯು ಈತನ ಮೇಲೆ ದಾಳಿ ನಡೆಸಿದ ಪರಿಣಾಮ, ಎದೆ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಚಾಮ ಮೃತಪಟ್ಟಿದ್ದಾರೆ. ಅನತಿ ದೂರದಲ್ಲಿ ಕಾಡಾನೆಯಿಂದ ತಪ್ಪಿಸಿಕೊಂಡು ನಿಂತಿದ್ದ ಸಿದ್ದಪ್ಪ ನಂತರ ಚಾಮನ ಬಳಿ ಬಂದು ನೋಡಿದಾಗ ಸಾವನ್ನಪ್ಪಿರುವುದು ಕಂಡು ಕೂಡಲೇ ಸಂಬAಧಿಕರಿಗೆ ವಿಷಯ ತಿಳಿಸಿದ್ದಾರೆ.

ಪ್ರಾಮಾಣಿಕ ಕಾರ್ಮಿಕನಾಗಿ ದಿನನಿತ್ಯ

(ಮೊದಲ ಪುಟದಿಂದ) ಕರ್ತವ್ಯಕ್ಕೆ ತೆರಳುತ್ತಿದ್ದ ಚಾಮ, ಶನಿವಾರವೂ ಕೂಡ ಮುಂಜಾನೆಯ ಕೆಲಸಕ್ಕೆ ಗೈರು ಹಾಜರಾಗಬಾರದೆಂಬ ಉದ್ದೇಶದಿಂದ ಧಾವಂತದಿAದ ಊರಿನತ್ತ ಬಂದಿದ್ದರು ಎನ್ನಲಾಗಿದೆ. ಆದರೆ, ರಸ್ತೆಯಲ್ಲಿಯೇ ಒಂಟಿ ಸಲಗದ ದಾಳಿಗೆ ಸಿಲುಕಿ ಮೃತಪಟ್ಟಿದ್ದು, ಪತ್ನಿ ಸುಬ್ಬಿ, ಮಗ ಸತೀಶ್, ಮಗಳು ಬೇಬಿಯನ್ನು ಅಗಲಿದ್ದಾರೆ.

ರೈತ ಸಂಘ ಆಕ್ರೋಶ

ಮಾಹಿತಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರು ಸ್ಥಳಕ್ಕೆ ತೆರಳಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳ ಮೇಲೆ ಆಕ್ರೋಶಗೊಂಡು ಅಮಾಯಕರ ಸಾವಿಗೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಈ ಭಾಗದಲ್ಲಿ ನಿರಂತರ ಕಾಡಾನೆಯ ಹಾವಳಿ ಇದ್ದರೂ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸದ ಹಿನೆÀ್ನಲೆ ಅಮಾಯಕರು ಬಲಿ ಆಗುತ್ತಿದ್ದಾರೆಂದು ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳ ಮುಂದೆ ತಮ್ಮ ಅಸಮಾಧಾನ ಹೊರ ಹಾಕಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ಕೊಡಗಿನಲ್ಲಿ ಕಾರ್ಮಿಕರ ಮೇಲೆ ಕಾಡಾನೆಗಳು ದಾಳಿ ನಡೆಸುತ್ತಿವೆ. ಈ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರೂ ಕಾಡಾನೆ ತಡೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಹಿಂದೇಟು ಹಾಕುತ್ತಿದೆ. ಈ ಭಾಗದಲ್ಲಿರುವ ಕಾಡಾನೆಗಳನ್ನು ಸೆರೆ ಹಿಡಿಯಬೇಕು ಹಾಗೂ ಕೂಡಲೇ ನೊಂದ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಬ್ಬಯ್ಯ, ವೃತ್ತ ನಿರೀಕ್ಷಕ ಗೋವಿಂದರಾಜು, ಸ್ಥಳ ಮಹಜರು ನಡೆಸಿ ಮೃತನ ಪತ್ನಿ ಸುಬ್ಬಿಯಿಂದ ಲಿಖಿತ ದೂರು ಸ್ವೀಕರಿಸಿದರು. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯಾದ ಹಿನ್ನೆಲೆಯಲ್ಲಿ ಹಲವು ವಾಹನಗಳನ್ನು ಬದಲಿ ರಸ್ತೆಯ ಮಾರ್ಗವಾಗಿ ಸಂಚರಿಸಲು ಪೊಲೀಸರು ವ್ಯವಸ್ಥೆ ಕಲ್ಪಿಸಿದರು. ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಗೋಪಾಲ್, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಸತೀಶ್ ಕುಮಾರ್, ತಿತಿಮತಿ ಅರಣ್ಯ ಇಲಾಖೆಯ ಆರ್‌ಎಫ್‌ಓ ಅಶೋಕ್ ಹುನಗುಂದ, ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದರು.

ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಸ, ಲೆಹರ್ ಬಿದ್ದಪ್ಪ, ತೀತರಮಾಡ ರಾಜ, ಪುಚ್ಚಿಮಾಡ ಸಂತೋಷ್, ತಿತಿಮತಿ ಭಾಗದ ರೈತ ಮುಖಂಡರಾದ ವಿಲ್ಸನ್, ಪುಚ್ಚಿಮಾಡ ಅಶೋಕ್, ಶಂಕರ, ದಿನೇಶ್, ಗಿರಿಜನ ಮುಖಂಡರಾದ ಚುಬ್ರು, ವಿಜಯ್ ಸೇರಿದಂತೆ ಮತ್ತಿತರರು ಹಾಜರಿದ್ದರು.

(ಚಿತ್ರವರದಿ : ಹೆಚ್.ಕೆ.ಜಗದೀಶ್)

ಮಧ್ಯಾಹ್ನದ ವೇಳೆ ಘಟನಾ ಸ್ಥಳಕ್ಕೆ ಮಾಜಿ ವಿಧಾನಪರಿಷತ್ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಭೇಟಿ ನೀಡಿ ಅವೈಜ್ಞಾನಿಕ ಬ್ಯಾರಿಕೇಡ್ ನಿರ್ಮಾಣದಿಂದ ಇಂತಹ ಸಮಸ್ಯೆ ಎದುರಾಗಿದೆ. ಸ್ಥಳೀಯ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಡಾನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಮುಂದಾಗಿದ್ದಲ್ಲಿ ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪರಿಸರವಾದಿ ಎಂದು ಬಿಂಬಿಸಿಕೊAಡಿರುವ ವ್ಯಕ್ತಿ ಮಧ್ಯೆ ಪ್ರವೇಶಿಸಿ ನಾಗರಹೊಳೆ ವನ್ಯಜೀವಿ ವಿಭಾಗ ಹುಲಿ ಯೋಜನೆಯ ನಿರ್ದೇಶಕ ಮನೋಜ್ ಕುಮಾರ್‌ರವರಿಗೆ ಸಮಜಾಯಿಷಿಕೆ ಕೊಡಲು ಮುಂದಾದರು. ಈ ವೇಳೆ ಅವರÀ ಮಾತಿನಿಂದ ಕೆಂಡಾಮAಡಲರಾದ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅಮಾಯಕರ ಸಾವಿಗೆ ಇಂತಹ ಪರಿಸರವಾದಿಗಳೇ ನೇರ ಕಾರಣ. ಇವರಿಗೆ ಅಧಿಕಾರ ಕೊಟ್ಟರ‍್ಯಾರು? ನಾವು ಪ್ರಶ್ನಿಸುತ್ತಿರುವುದು ಅಧಿಕಾರಿಗಳನ್ನು ಉತ್ತರಿಸಲು ಇರ‍್ಯಾರು.? ಎಂದು ಪರಿಸರವಾದಿಯ ವಿರುದ್ಧ ಹರಿಹಾಯ್ದರು. ಈ ವೇಳೆ ಸ್ಥಳದಲ್ಲಿದ್ದ ರೈತ ಮುಖಂಡರುಗಳು ಹಾಗೂ ಗ್ರಾಮಸ್ಥರು ಸ್ಥಳೀಯ ಪರಿಸರವಾದಿಯ ಮೇಲೆ ಮುಗಿ ಬೀಳುವ ಪ್ರಯತ್ನ ನಡೆಸಿದರು. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಇದರಿಂದ ಎಚ್ಚೆತ್ತುಕೊಂಡ ಸ್ಥಳದಲ್ಲಿದ್ದ ಪೊಲೀಸರು ಅಲ್ಲಿದ್ದ ಪರಿಸರವಾದಿಯನ್ನು ಕರೆದೊಯ್ದರು. ನಂತರ ಪರಿಸ್ಥಿತಿ ತಿಳಿಯಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.

ನಂತರ ಮಾಧÀ್ಯಮದ ಜೊತೆ ಮಾತನಾಡಿದ ಅರುಣ್ ಮಾಚಯ್ಯ, ಇಂದಿನ ಈ ಪರಿಸ್ಥಿತಿಗೆ ಪರಿಸರವಾದಿಗಳು ನೇರ ಕಾರಣ. ಅರಣ್ಯ ಇಲಾಖೆಗೆ ತಪ್ಪು ಮಾಹಿತಿಗಳನ್ನು ನೀಡಿ, ಅರಣ್ಯದಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಜನಾಂಗವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಿಲ್ಲ. ಇದರಿಂದಾಗಿ ಇಂದು ಕಾಡಾನೆಗಳು ಎಲ್ಲೆಡೆ ಸಂಚರಿಸುತ್ತಿವೆ. ಇದರಿಂದ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಇಂದಿನ ಘಟನೆಗೆ ಪರಿಸರವಾದಿಗಳೇ ನೇರ ಕಾರಣ ಎಂದರು.