ನಾಪೋಕ್ಲು, ಜೂ. ೧೧: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪಿಕಪ್ ವಾಹನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಡಿ.ಸಿ.ಆರ್.ಬಿ. ಹಾಗೂ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದು, ಅಂತರರಾಜ್ಯ ಚೋರರನ್ನು ಬಂಧಿಸಿದ್ದಾರೆ.

ಪಟ್ಟಣದಲ್ಲಿ ಕಾಂಪ್ಲೆಕ್ಸ್ವೊAದರ ಎದುರು ನಿಲ್ಲಿಸಿದ್ದ ಮಹೇಂದ್ರ ಬೊಲೆರೊ ಪಿಕಪ್ ವಾಹನ ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೇರಳ ರಾಜ್ಯದ ಕಾಸರಗೋಡಿನ ಚೆಮ್ಮನಾಡಿನ ರಂಷಾನ್ (೨೪), ಕಾಸರಗೋಡಿನ ವಿದ್ಯಾನಗರದ ಮೊಹಮ್ಮದ್ ಸಮೀರ್ (೨೯) ಎಂಬ ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿದ್ದ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ರಂಷಾನ್ ವಾಹನ ಚೋರನಾಗಿದ್ದು, ಈತನ ವಿರುದ್ಧ ಮಡಿಕೇರಿ, ಸುಳ್ಯ, ಉಳ್ಳಾಲ, ಮೂಡುಬಿದ್ರೆ, ಹಾಸನ ಹಾಗೂ ಕೇರಳ ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲಚೀರ ಅಯ್ಯಪ್ಪ, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ

(ಮೊದಲ ಪುಟದಿಂದ) ಕಾರ್ಯಾಚರಣೆಯಲ್ಲಿ ಡಿಸಿಆರ್‌ಬಿ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಠಾಣೆಯ ಪಿಸಿಐ ಸದಾಶಿವ, ಡಿಸಿಆರ್‌ಬಿ ಸಿಬ್ಬಂದಿಗಳಾದ ವೆಂಕಟೇಶ್, ಯೋಗೇಶ್ ಕುಮಾರ್, ನಿರಂಜನ್, ವಸಂತ್, ಅನಿಲ್ ಕುಮಾರ್, ಸುರೇಶ್, ಶರತ್ ರೈ, ಚಾಲಕ ಶಶಿಕುಮಾರ್, ನಾಪೋಕ್ಲು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರವಿಕುಮಾರ್, ಸಾಜನ್, ನವೀನ್ ಮತ್ತು ಸಿಡಿಆರ್ ಸೆಲ್‌ನ ರಾಜೇಶ್, ಗಿರೀಶ್, ಪ್ರವೀಣ್ ಇದ್ದರು.