ಮಡಿಕೇರಿ, ಜೂ. ೧೧: ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಕೊಡಗು ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ನಿಮಾ ಕೊಡಗು ವತಿಯಿಂದ ‘ಆರೋಗ್ಯದಲ್ಲಿ ಯೋಗದ ಪಾತ್ರ’ ಎಂಬ ವಿಷಯವಾಗಿ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ.
ಕಿರುಚಿತ್ರವನ್ನು ತಾ.೧೮ರೊಳಗೆ ವಾಟ್ಸಾö್ಯಪ್ ಮೂಲಕ ೯೮೮೬೨೬೬೧೨೦ ಸಂಖ್ಯೆಗೆ ರವಾನಿಸಬೇಕಾಗಿದೆ. ಕಿರುಚಿತ್ರದ ಸಮಯ ಪರಿಮಿತಿ ೨ ನಿಮಿಷಗಳು, ಒಬ್ಬರಿಂದ ಒಂದು ಕಿರುಚಿತ್ರಕ್ಕೆ ಮಾತ್ರ ಅವಕಾಶವಿದ್ದು ಬೇರೆಡೆ ಪ್ರಸಾರವಾಗಿರಬಾರದು. ತಾ.೨೧ ರಂದು ತೀರ್ಪು ಪ್ರಕಟವಾಗಲಿದ್ದು ಪ್ರಥಮ ಬಹುಮಾನ ರೂ.೫,೦೦೦ ಹಾಗೂ ದ್ವಿತೀಯ ಬಹುಮಾನ ರೂ.೩,೦೦೦ ನಗದು ನೀಡಲಾಗುವುದು.