ಮಡಿಕೇರಿ, ಜೂ. ೧೧: ಕೊಡಗು ಜಿಲ್ಲೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಡಿ ಸದಸ್ಯತ್ವ ಪಡೆದಿರುವ ಎಲ್ಲಾ ಸದಸ್ಯರುಗಳು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-೨೦೧೭ ರಡಿ ಹಾಗೂ ವೃತ್ತಿ ತೆರಿಗೆ ಕಾಯ್ದೆ-೧೯೭೬ ರಡಿ ನೋಂದಣಿ ಪಡೆದಿದ್ದಾರೆಯೇ ಎಂಬುದಾಗಿ ಪರಿಶೀಲನೆ ಆಗಬೇಕಿದ್ದು, ನೋಂದಣಿ ಪಡೆಯದೇ ಇರುವವರನ್ನು ನೋಂದಣಿಗೆ ಅರ್ಹವಿದ್ದಲ್ಲಿ (ರೂ.೨೦ ಲಕ್ಷಕ್ಕಿಂತ ಅಧಿಕ ವಹಿವಾಟು ಹೊಂದಿದ್ದಲ್ಲಿ) ನೋಂದಣಿ ಮಾಡಿಸುವಂತೆ ಅರಿವು ಮೂಡಿಸುವ ಸಲುವಾಗಿ ಚೇಂಬರ್ ಆಫ್ ಕಾಮರ್ಸ್ನ ಸದಸ್ಯತ್ವ ಪಡೆದವರ ವಿವರಗಳನ್ನು ನೀಡುವಂತೆ ಸೂಚಿಸಲಾಗಿದೆ. ವಿವರ ಸಲ್ಲಿಸಲು ನಮೂನೆಯನ್ನು - ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಕಚೇರಿ, ಸ್ಥಳೀಯ ಸರಕು ಸೇವಾ ತೆರಿಗೆ ಕಚೇರಿ, ಕೆಎಸ್.ಎಫ್.ಸಿ ಕಟ್ಟಡ, ಕೈಗಾರಿಕಾ ಬಡಾವಣೆ - ಮಡಿಕೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ.