ಸೋಮವಾರಪೇಟೆ, ಜೂ. ೧೨: ಏಷ್ಯಾ ಕಪ್ ಪುರುಷರ ಹಾಕಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕಕ್ಕೆ ಭಾಜನರಾದ ಅಂರ‍್ರಾಷ್ಟಿçÃಯ ಹಾಕಿ ಆಟಗಾರ, ಸೋಮವಾರಪೇಟೆಯ ಆಭರಣ್ ಸುದೇವ್ ಮತ್ತು ಹಾಸನದ ಶೇಷೇಗೌಡ ಅವರನ್ನು ಇಲ್ಲಿನ ಓಎಲ್‌ವಿ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಓಎಲ್‌ವಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಆಭರಣ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಪಠ್ಯ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ವ್ಯವಸ್ಥಾಪಕರಾದ ಸಿಸ್ಟರ್ ಮಮತ ವಹಿಸಿದ್ದರು. ಸಂಚಾಲಕಿ ಸಿಸ್ಟರ್ ಫ್ಲೋರೆಟ್, ಪ್ರೌಢಶಾಲಾ ಮುಖ್ಯಸ್ಥರಾದ ಸಿಸ್ಟರ್ ರಕ್ಷಿತಾ, ಲವಿನಾ, ಹಿರಿಯ ಹಾಕಿ ಪಟು ಅಭಿಷೇಕ್ ಗೋವಿಂದಪ್ಪ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಮೋಹನ್, ಶಿಕ್ಷಕರಾದ ಛಾಯಾ, ಜೂಲಿಯಾನ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.