ಮಡಿಕೇರಿ, ಜೂ. ೧೦: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ೨೦೨೧- ೨೨ ನೇ ಸಾಲಿನ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕೊಡಗಿನ ಥ್ರೋಬಾಲ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿ.ಕೆ. ಲಲಿತಾ ನಾಯಕತ್ವದಲ್ಲಿ, ತಂಡವು ಫೈನಲ್ ಪಂದ್ಯದಲ್ಲಿ ಚಿಕ್ಕಬಳ್ಳಾಪುರ ತಂಡದ ವಿರುದ್ಧ ಆಟವಾಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ತಂಡದಲ್ಲಿ ಸುಮಿ, ಪದ್ಮ, ಜಾಜಿ, ಜ್ಯೋತಿ, ರೇವತಿ, ಮಹಾನಂದ, ಅಮೃತ, ಸೌಮ್ಯ, ಸೆಲಿನಾ, ಭಾಗ್ಯಲಕ್ಷ್ಮಿ ಮತ್ತು ಅಶ್ವಿನಿ ಭಾಗವಹಿಸಿದ್ದರು.