ಮಡಿಕೇರಿ, ಜೂ. ೧೦: ಹವಾಮಾನ ಬೆಳೆ ವಿಮಾ ಯೋಜನೆಯ ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
೨೦೨೨-೨೩ನೇ ಸಾಲಿನಲ್ಲಿ ಮುಂಗಾರು ಹವಾಮಾನ ಮರು ವಿನ್ಯಾಸಗೊಳಗಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಮುಖ್ಯ ಬಹುವಾರ್ಷಿಕ ಬೆಳೆಗಳಾದ ಕಾಳುಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಅನುಷ್ಠಾನ ಮಾಡಲಾಗುತ್ತಿದ್ದು, ಈ ಯೋಜನೆಯಡಿ ವಿಮಾ ನೋಂದಣಿಗೆ ತಾ. ೩೦ ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಿ.ಎಂ. ಪ್ರಮೋದ್ ಅವರು ಮಾಹಿತಿ ನೀಡಿದರು.
ಹವಾಮಾನ ಆಧಾರಿತ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ, ಆರ್ದತೆ ಮತ್ತಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
೨೦೨೨-೨೩ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತವು ಕಾಳುಮೆಣಸು ಬೆಳೆಗೆ ಒಟ್ಟು ರೂ. ೪೭ ಸಾವಿರ ಹಾಗೂ ಅಡಿಕೆ ಬೆಳೆಗೆ ರೂ. ೧.೨೮ ಲಕ್ಷ ರೂ ಆಗಿದೆ. ಇನ್ಸೂರೆನ್ಸ್ ಕಂಪೆನಿಯವರು ಒಟ್ಟು ವಿಮಾ ಮೊತ್ತಕ್ಕೆ ಶೇ. ೩೦ ರಷ್ಟು ಮೊತ್ತವನ್ನು ಬಿಡ್ಡ್ ಮಾಡಿರುತ್ತಾರೆ. ಅದರಲ್ಲಿ ರೈತರು ಕಾಳುಮೆಣಸು ಬೆಳೆಗೆ ಶೇ. ೫ರ ವಿಮಾ ಮೊತ್ತ ರೂ.೨,೩೫೦ ಹಾಗೂ ಅಡಿಕೆ ಬೆಳೆಗೆ ರೂ.೬,೪೦೦ ಪ್ರತಿ ಹೆಕ್ಟೇರ್ಗೆ ಪಾವತಿಸಬೇಕಾಗಿದೆ. ಇದರಲ್ಲಿ ಶೇ. ೨೫ರ ಮೊತ್ತವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭರಿಸಲಾಗುತ್ತದೆ ಎಂದು ಪ್ರಮೋದ್ ಅವರು ಮಾಹಿತಿ ನೀಡಿದರು.
೨೦೨೦-೨೧ನೇ ಸಾಲಿನಲ್ಲಿ ರೂಪಿಸಿದ ಟರ್ಮ್ಶೀಟ್, ೨೦೨೨-೨೩ನೇ ಸಾಲಿನವರೆಗೆ ಅನುಮೋದನೆಯಾಗಿದ್ದು, ಅದರ ಆಧಾರದಲ್ಲಿ ವಿಮಾ ಮೊತ್ತ ನಿರ್ಧರಿಸಲಾಗುತ್ತದೆ. ಅದರಂತೆ ಕೊಡಗು ಜಿಲ್ಲೆಗೆ ಎಸ್ಬಿಐ ಜನರಲ್ ಇನ್ಶೂರೆನ್ಸ್ ವಿಮಾ ಕಂಪೆನಿಯನ್ನು ನಿರ್ದೇಶನಾಲಯದಿಂದ ಆಯ್ಕೆ ಮಾಡಲಾಗಿದೆ.
ಕಾಳುಮೆಣಸು ಬೆಳೆಗೆ ವಿಮೆ ಪಡೆಯಲು ವಿವಿಧ ಹಂತಗಳಲ್ಲಿ, ಮಳೆ ಕೊರತೆ ಹಾಗೂ ಹೆಚ್ಚು ಮಳೆಯ ಪ್ರಮಾಣವನ್ನು ಆಧಾರಿಸಿ ವಿಮೆಯನ್ನು ಯಾವ ರೀತಿ ಪಡೆಯಬಹುದು ಹಾಗೂ ಅಡಿಕೆ ಬೆಳೆಯಲ್ಲಿ ಹೆಚ್ಚು ಮಳೆ, ನಿರಂತರ ಮಳೆ, ಹೆಚ್ಚು ಉಷ್ಣಾಂಶ, ನಿರಂತರ ಒಣ ಹವೆಯಿಂದಾಗಿ ಅಡಿಕೆ ಬೆಳೆಯ ಮೇಲೆ ಆಗುವ ಹಾನಿಯಿಂದಾಗಿ ವಿಮೆ ಪಡೆಯುವ ಬಗ್ಗೆ ಪ್ರಮೋದ್ ಅವರು ವಿವರಿಸಿದರು.
೨೦೧೮-೧೯ನೇ ಸಾಲಿನಲ್ಲಿ ಒಟ್ಟು ೨,೩೯೩ ರೈತರು ಹೆಸರು ನೋಂದಾಯಿಸಿದ್ದು, ರೂ. ೨೫೧.೩೯೩೮೩ ಲಕ್ಷ ೨೩೦೪ ರೈತರಿಗೆ ವಿಮಾ ಪಾವತಿ ಆಗಿದೆ. ೨೦೧೯-೨೦ನೇ ಸಾಲಿನಲ್ಲಿ ಒಟ್ಟು ೧೨೧೮ ರೈತರು ನೋಂದಾಯಿಸಿದ್ದು, ರೂ. ೧೧೪.೧೧ ಲಕ್ಷ ೧,೧೩೦ ರೈತರಿಗೆ ವಿಮಾ ಪಾವತಿಯಾಗಿದೆ. ೨೦೨೦-೨೧ನೇ ಸಾಲಿನಲ್ಲಿ ಒಟ್ಟು ೨,೩೧೮ ರೈತರು ನೋಂದಾಯಿಸಿದ್ದು, ರೂ. ೨೩೭.೫೬೨೦೮ ಲಕ್ಷ ೨೧೭೧ ರೈತರಿಗೆ ವಿಮಾ ಪಾವತಿಯಾಗಿರುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ನುಡಿದರು.
ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಮಾತನಾಡಿ, ವಿಮೆ ಪಡೆಯಲು ಅನುಮೋದಿತ ಟರ್ಮ್ಶೀಟ್ಗಳಲ್ಲಿ ವಿಮೆಯು ಯಾವ ರೀತಿ ಪಾವತಿಯಾಗುತ್ತದೆ ಎಂಬ ವಿವಿಧ ಹಂತದ ನಿಖರ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೂಡಲೇ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಬ್ಯಾಂಕ್ಗಳಿಗೆ ಮಾಹಿತಿಯನ್ನು ಒದಗಿಸಿ ಇಚ್ಚಿಸುವ ರೈತರನ್ನು ನೋಂದಣಿ ಮಾಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಹಕಾರ ಇಲಾಖೆ ಉಪ ನಿಬಂಧಕರು ತಮ್ಮ ಅಧೀನದಲ್ಲಿ ಬರುವ ಡಿಸಿಸಿ ಬ್ಯಾಂಕ್ ಹಾಗೂ ಇತರೆ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಹೆಚ್ಚಿನ ಸಂಖ್ಯೆ ರೈತರನ್ನು ನೋಂದಾಯಿಸಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.
ಬೆಳೆ ವಿಮೆ ಮಾಡಿಸಲು ಬ್ಯಾಂಕಿಗೆ ಬರುವ ಯಾವುದೇ ರೈತರನ್ನು ವಾಪಸ್ಸು ಕಳುಹಿಸದೆ ಬೆಳೆ ವಿಮೆ ಮಾಡಿಸಲು ಕ್ರಮವಹಿಸಬೇಕು. ತೋಟಗಾರಿಕೆ ಉಪ ನಿರ್ದೇಶಕರು ಬೆಳೆ ವಿಮಾ ಯೋಜನೆಯ ನೋಂದಾಣಿಯಿAದಾಗಿ ರೈತರಿಗೆ ಆಗುವ ಲಾಭಗಳ ಬಗ್ಗೆ ಮಾಹಿತಿಯನ್ನು ನೀಡಿ ೩ ಸಾವಿರಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸುವ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಬ್ಯಾಂಕಿನ ವ್ಯವಸ್ಥಾಪಕರು ಕೂಡಲೇ ತಮ್ಮ ಬ್ಯಾಂಕಿನ ಶಾಖೆಯಲ್ಲಿ ಬೆಳೆ ವಿಮೆ ಮಾಡಿಸಲು ಭೇಟಿ ನೀಡುವ ಎಲ್ಲಾ ರೈತರಿಗೆ ಬೆಳೆ ವಿಮೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಸೂಚಿಸಿದರು.
ಎಸ್ಬಿಐ ಜನರಲ್ ಇನ್ಶೂರೆನ್ಸ್ ಕಂಪೆನಿಯ ವ್ಯವಸ್ಥಾಪಕರಿಗೆ ಸಾಮಾಜಿಕ ಜಾಲತಾಣ, ಸಭೆ ಸಮಾರಂಭ, ತಾಲೂಕು ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಿ ರೈತರಿಗೆ ವಿಮಾ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ಮಾಡಿದರು.
ಹಾಗೆಯೇ ಪ್ರತಿ ಬ್ಯಾಂಕಿಗೆ ಭೇಟಿ ನೀಡಿ ವಿಮಾ ಮಾಹಿತಿಯನ್ನು ನೀಡಲು ಕ್ರಮ ಕೈಗೊಳ್ಳಲು ಸೂಚಿಸಿದರು ಹಾಗೂ ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ವಿಮಾ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರಪಡಿಸಿ ರೈತರನ್ನು ವಿಮೆ ಯೋಜನೆಯಲ್ಲಿ ನೋಂದಾಯಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
ಗರಿಷ್ಠ ಪ್ರಮಾಣದ ರೈತರನ್ನು ಬೆಳೆ ವಿಮೆಯಲ್ಲಿ ನೋಂದಣಿ ಮಾಡಿಸಲು ಇಲಾಖೆ, ಬ್ಯಾಂಕ್ ಹಾಗೂ ವಿಮಾ ಕಂಪೆನಿಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕರ್ನಾಟಕ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿ (ಕೆಎಸ್ಡಿಎಂಎ) ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಮಳೆಯ ಪ್ರಮಾಣ, ತಾಪಮಾನ, ಉಷ್ಠಾಂಶ, ಆದ್ರತೆ ಮತ್ತಿತರ ಅಂಶಗಳ ಆಧಾರದಲ್ಲಿ ವಿಮಾ ಮೊತ್ತ ಪಾವತಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಕಾಳುಮೆಣಸು ಮತ್ತು ಅಡಿಕೆ ಬೆಳೆಯ ವಿಮಾ ಅವಧಿಯು ೨೦೨೨ರ ಜುಲೈ ೧ ರಿಂದ ೨೦೨೩ರ ಜೂನ್ ೩೦ ರವರೆಗೆ ಇರುತ್ತದೆ. ಆದರೆ ಯಾವುದೇ ಹಂತದಲ್ಲಿ ಬೆಳೆ ವಿಮೆಗೆ ಅರ್ಹರಾದಲ್ಲಿ ವಿಮಾ ಹಣದ ಪಾವತಿಯು ವಿಮಾ ಅವಧಿಯು ಮುಗಿದ ನಂತರ ಅಂದರೆ ೨೦೨೩ರ ಜೂನ್ ೩೦ರ ನಂತರದಲ್ಲಿ ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಆರ್. ಶಿವಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ರೆಡ್ಡಿ, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಇತರರು ಇದ್ದರು.
ಮತ್ತಷ್ಟು ಮಾಹಿತಿ: ಮೊದಲನೇ ಹಂತದಲ್ಲಿ ೨೦೨೨ ಜುಲೈ ೧ ರಿಂದ ೩೦ ಸಪ್ಟೆಂಬರ್-೨೦೨೨ ರವರೆಗೆ ೯೦೦ ಮೀ.ಮೀ ನಿಂದ ೮೦೦ ಎಂ.ಎA ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎA ಮಳೆಗೆ ರೂ. ೨೫ ರಂತೆ ಮತ್ತು ೮೦೦ ಎಂ.ಎA ಯಿಂದ ೭೦೦ ಎಂ.ಎA ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎA.ಗೆ ರೂ. ೫೫ ಹಾಗೂ ೭೦೦ ಎಂ.ಎA. ಗಿಂತ ಕಡಿಮೆ ಮಳೆಯಾದರೆ ರೂ. ೮ ಸಾವಿರ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಎರಡನೇ ಹಂತದಲ್ಲಿ ೧ ಏಪ್ರಿಲ್ ೨೦೨೩ ರಿಂದ ೩೦ ಏಪ್ರಿಲ್ ೨೦೨೩ ವರೆಗೆ ೧೦೦ ಎಂ.ಎA ನಿಂದ ೫೦ ಎಂ.ಎA ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎA ಮಳೆಗೆ ರೂ. ೨೫ ರಂತೆ ಹಾಗೂ ಮತ್ತು ೫೦ ಎಂ.ಎA ಯಿಂದ ೨೫ ಎಂ.ಎA ವರೆಗೆ ಮಳೆಯಾದರೆ ಪ್ರತಿ ಎಂ.ಎA. ರೂ. ೧೪೦ ಹಾಗೂ ೨೫ ಎಂ.ಎA.ಗಿAತ ಕಡಿಮೆ ಮಳೆಯಾದರೆ ರೂ. ೬ ಸಾವಿರ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಮೂರನೇ ಹಂತದಲ್ಲಿ ೧ ಮೇ ೨೦೨೩ ರಿಂದ ೩೧ ಮೇ ೨೦೨೩ ವರೆಗೆ ೨೦೦ ಎಂ.ಎA ನಿಂದ ೧೫೦ ಎಂ.ಎA ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎA ರೂ. ೫೦ರಂತೆ ಮತ್ತು ೧೫೦ ಎಂ.ಎA ನಿಂದ ೧೦೦ ಎಂ.ಎA ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎA.ಗೆ ರೂ. ೭೦ ಮತ್ತು ೧೦೦ ಎಂ.ಎA.ಗಿAತ ಕಡಿಮೆ ಮಳೆಯಾದರೆ ರೂ. ೬ ಸಾವಿರ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ನಾಲ್ಕನೇ ಹಂತದಲ್ಲಿ ೧ ಜೂನ್ ೨೦೨೩ ರಿಂದ ೩೦ ಜೂನ್ ೨೦೨೩ ರವರೆಗೆ ೫೦೦ ಎಂ.ಎA ನಿಂದ ೪೦೦ ಎಂ.ಎA ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎA ರೂ. ೨೫ ರಂತೆ ಮತ್ತು ೪೦೦ ಎಂ.ಎA ನಿಂದ ೩೦೦ ಎಂ.ಎA ವರೆಗೆ ಪ್ರತಿ ಎಂ.ಎA.ಗೆ ರೂ. ೩೫ ಮತ್ತು ೩೦೦ ಎಂ.ಎA.ಗಿAತ ಕಡಿಮೆ ಮಳೆಯಾದರೆ ರೂ. ೬೦೦೦ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಐದನೇ ಹಂತದಲ್ಲಿ ೧ ಜುಲೈ ೨೦೨೨ ರಿಂದ ೩೧ ಜುಲೈ ೨೦೨೨ ರವರೆಗೆ ೨೭೫ ಎಂ.ಎA ನಿಂದ ೩೫೦ ಎಂ.ಎA ಹೆಚ್ಚು ಸರಾಸರಿ ಮಳೆಯು ೩ ದಿವಸದಲ್ಲಿ ಬಂದರೆ ಪ್ರತಿ ಹೆಚ್ಚುವರಿ ಎಂಎAಗೆ ರೂ. ೧೪೦ ಮತ್ತು ೩೫೦ ಎಂ.ಎA ನಿಂದ ೪೨೫ ಎಂ.ಎA. ಅಧಿಕ ಸರಾಸರಿ ಮಳೆಯು ೩ ದಿವಸದಲ್ಲಿ ಬಂದರೆ ಪ್ರತಿ ಹೆಚ್ಚುವರಿ ಎಂ.ಎA ಗೆ ರೂ. ೨೮೦ ಹಾಗೂ ೩ ದಿವಸದಲ್ಲಿ ಸರಾಸರಿ ೪೨೫ ಎಂಎA ಗಿಂತ ಹೆಚ್ಚು ಮಳೆ ಆದರೆ ರೂ. ೧೦,೫೦೦ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಆರನೇ ಹಂತದಲ್ಲಿ ೧-ಆಗಸ್ಟ್ ೨೦೨೨ ರಿಂದ ೩೧ ಆಗಸ್ಟ್ ೨೦೨೨ ರವರೆಗೆ ೨೦೦ ಎಂ.ಎA ನಿಂದ ೨೭೫ ಎಂ.ಎA ಹೆಚ್ಚು ಸರಾಸರಿ ಮಳೆಯು ೩ ದಿವಸದಲ್ಲಿ ಬಂದರೆ ಪ್ರತಿ ಹೆಚ್ಚುವರಿ ಎಂಎAಗೆ ರೂ. ೧೪೦ ಮತ್ತು ೨೭೫ ಎಂ.ಎA ನಿಂದ ೩೫೦ ಎಂ.ಎA. ಅಧಿಕ ಸರಾಸರಿ ಮಳೆಯು ೩ ದಿನ ಬಂದರೆ ಪ್ರತಿ ಹೆಚ್ಚುವರಿ ಎಂ.ಎA ಗೆ ರೂ. ೨೮೦ ಹಾಗೂ ೩ ದಿವಸದಲ್ಲಿ ಸರಾಸರಿ ೩೫೦ ಎಂಎA ಗಿಂತ ಹೆಚ್ಚು ಮಳೆ ಆದರೆ ರೂ. ೧೦,೫೦೦ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಅಡಿಕೆ ಬೆಳೆಗೆ ಒಟ್ಟು ವಿಮಾ ಮೊತ್ತವು ಪ್ರತಿ ಹೆಕ್ಟೇರ್ಗೆ ರೂ. ೧.೨೮ ಲಕ್ಷ ಇದ್ದು, ವಿಮಾ ಮೊತ್ತವನ್ನು ಪಾವತಿಸುವಾಗ ಹೆಚ್ಚು ಮಳೆ, ಕಡಿಮೆ ಮಳೆ, ಅಧಿಕ ಉಷ್ಠಾಂಶ, ಒಣದಿನದ ಪ್ರಮಾಣದ ಆಧಾರದ ಮೇಲೆ ಒಟ್ಟು ೬ ಹಂತಗಳಾಗಿ ವಿಂಗಡಿಸಿ ವಿಮಾ ಮೊತ್ತ ನಿರ್ಧರಿಸಿ ಪಾವತಿಸಲಾಗುವುದು.
ಮೊದಲನೇ ಹಂತದಲ್ಲಿ ೧ ಜುಲೈ ೨೦೨೨ ರಿಂದ ೩೧ ಆಗಸ್ಟ್ ೨೦೨೨ ರ ಮಾಹೆಯಲ್ಲಿ ೫೦ ಎಂ.ಎA ಗಿಂತ ಹೆಚ್ಚು ಮಳೆ ಮತ್ತು ಆದ್ರತೆ ಶೇ. ೮೦ಕ್ಕಿಂತ ಹೆಚ್ಚು ೮ ರಿಂದ ೧೦ ದಿವಸ ದವರೆಗೆ ಸತತವಾಗಿ ಇದ್ದಲ್ಲಿ ರೂ. ೪ ಸಾವಿರ ಮತ್ತು ೧೦ ರಿಂದ ೧೨ ದಿವಸದವರೆಗೆ ಸತತವಾಗಿ ಇದ್ದಲ್ಲಿ ರೂ. ೬ ಸಾವಿರ ಹಾಗೂ ೧೨ ದಿವಸಕ್ಕಿಂತ ಹೆಚ್ಚು ಇದ್ದಲ್ಲಿ ರೂ. ೨೦ ಸಾವಿರ ವಿಮಾ ಮೊತ್ತವು ಪ್ರತಿ ಹೆಕ್ಟೇರಿಗೆ ಪಾವತಿಯಾಗುತ್ತದೆ.
ಎರಡನೇ ಹಂತದಲ್ಲಿ ೧ನೇ ಸೆಪ್ಟೆಂಬರ್ ೨೦೨೨ ರಿಂದ ೩೧ನೇ ಅಕ್ಟೋಬರ್ ೨೦೨೨ ರವರೆಗೆ ೫೦ ಎಂ.ಎA ಗಿಂತ ಹೆಚ್ಚು ಮಳೆ ಮತ್ತು ಆದ್ರತೆ ಶೇ. ೮೦ಕ್ಕಿಂತ ಹೆಚ್ಚು ೬ ರಿಂದ ೮ ದಿವಸದವರೆಗೆ ಸತತವಾಗಿ ಇದ್ದಲ್ಲಿ ರೂ. ೪ ಸಾವಿರ ಮತ್ತು ೮ ರಿಂದ ೧೦ ದಿವಸದವರೆಗೆ ಸತತವಾಗಿ ಇದ್ದಲ್ಲಿ ರೂ. ೬ ಸಾವಿರ ಹಾಗೂ ೧೦ ದಿವಸಕ್ಕಿಂತ ಹೆಚ್ಚು ಇದ್ದಲ್ಲಿ ರೂ. ೨೦ ಸಾವಿರ ವಿಮಾ ಮೊತ್ತವು ಪ್ರತಿ ಹೆಕ್ಟೇರಿಗೆ ಪಾವತಿಯಾಗುತ್ತದೆ.
ಮೂರನೇ ಹಂತದಲ್ಲಿ ೧ ನೇ ಜುಲೈ ೨೦೨೨ ರಿಂದ ೧೫ನೇ ಆಗಸ್ಟ್ -೨೦೨೨ ರವರೆಗೆ ಪ್ರತಿ ದಿನ ೨೦ ಎಂ.ಎA ಗಿಂತ ಹೆಚ್ಚು ಮಳೆ ಸತತವಾಗಿ ೧೩ ರಿಂದ ೧೯ ದಿನದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ ೧೨೫೦ ರಂತೆ ಮತ್ತು ೧೯ ದಿನದಿಂದ ೨೫ ದಿವಸದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ ರೂ. ೨೫೦೦ ಹಾಗೂ ೨೫ ದಿವಸದ ನಂತರ ಸತತವಾಗಿ ಪ್ರತಿ ದಿನ ೨೫ ಎಂ.ಎA. ಮಳೆಯಾದಲ್ಲಿ ರೂ. ೨೨,೫೦೦ ವಿಮಾ ಮೊತ್ತ ಹೆಕ್ಟೇರ್ಗೆ ಪಾವತಿಯಾಗುತ್ತದೆ.
ನಾಲ್ಕನೇ ಹಂತದಲ್ಲಿ ೧೬ನೇ ಆಗಸ್ಟ್ ೨೦೨೨ ರಿಂದ ೩೦ನೇ ಸೆಪ್ಟೆಂಬರ್-೨೦೨೨ ರವರೆಗೆ ಪ್ರತಿ ದಿನ ೨೦ ಎಂ.ಎA.ಗಿAತ ಹೆಚ್ಚು ಮಳೆ ಸತತವಾಗಿ ೮ ರಿಂದ ೧೪ ದಿನದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ ರೂ. ೧,೨೫೦ ರಂತೆ ಮತ್ತು ೧೪ ದಿನದಿಂದ ೨೦ ದಿನದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ ರೂ. ೨೫೦೦ ಹಾಗೂ ೨೦ ದಿವಸದ ನಂತರ ಸತತವಾಗಿ ಪ್ರತಿ ದಿನ ೨೫ ಎಂ.ಎA ಮಳೆಯಾದಲ್ಲಿ ರೂ. ೨೨,೫೦೦ ವಿಮಾ ಮೊತ್ತ ಹೆಕ್ಟೇರ್ಗೆ ಪಾವತಿಯಾಗುತ್ತದೆ.
ಐದನೇ ಹಂತದಲ್ಲಿ ಏಪ್ರಿಲ್ -೧ ರಿಂದ ೨೦೨೩ ರಿಂದ ೩೧ ಮೇ ೨೦೨೩ ರವರೆಗೆ ದಿನದ ಉಷ್ಣಾಂಶವು ೩೪ ಸೆಂಟಿ ಗ್ರೇಡ್ ಗಿಂತ ಹೆಚ್ಚು ನಿರಂತರವಾಗಿ ೧ ದಿವಸದಿಂದ ೩ ದಿವಸದವರೆಗೆ ಸತತವಾಗಿ ಇದ್ದಲ್ಲಿ ರೂ. ೫ ಸಾವಿರ ಮತ್ತು ೩ ರಿಂದ ೫ ದಿವಸದವರೆಗೆ ನಿರಂತರವಾಗಿ ಉಷ್ಣಾಂಶ ೩೪ ಡಿಗ್ರಿಗಿಂತ ಹೆಚ್ಚಿಗೆ ಇದ್ದಲ್ಲಿ ರೂ. ೬,೫೦೦ ಹಾಗೂ ೫ ದಿವಸಗಿಂತ ಹೆಚ್ಚು ನಿರಂತರವಾಗಿ ೩೪ ಡಿಗ್ರಿ ಸೆಂಟಿ ಗ್ರೇಡ್ ಉಷ್ಣಾಂಶ ಇದ್ದಲ್ಲಿ ರೂ. ೨೩,೦೦೦ ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ ಪಾವತಿಯಾಗುತ್ತದೆ.
ಆರನೇ ಹಂತದಲ್ಲಿ ೧೫ನೇ ಏಪ್ರಿಲ್- ೨೦೨೩ ರಿಂದ ೩೧ ಮೇ ೨೦೨೩ ರವರೆಗೆ ೨.೫೦ ಎಂ.ಎA ಗಿಂತ ಕಡಿಮೆ ಮಳೆಯಾಗಿ ನಿರಂತರ ಒಣ ದಿನವು ೧೫ ರಿಂದ ೨೦ ದಿವಸ ಇದ್ದಲ್ಲಿ ಪ್ರತಿ ದಿನಕ್ಕೆ ರೂ.೧೬೦೦ ಮತ್ತು ೨೦ ರಿಂದ ೨೫ ದಿವಸದವರೆಗೆ ನಿರಂತರ ಒಣ ದಿನವು ಇದ್ದಲ್ಲಿ ಪ್ರತಿ ದಿನಕ್ಕೆ ರೂ. ೨,೪೦೦ ಹಾಗೂ ಒಣ ದಿನವು ೨೫ ದಿವಸಕ್ಕಿಂತ ನಿರಂತವಾಗಿ ಇದ್ದಲ್ಲಿ ಒಟ್ಟು ರೂ. ೨೦ ಸಾವಿರ ವಿಮಾ ಮೊತ್ತವು ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಅವರು ವಿವರಿಸಿದ್ದಾರೆ.