ಚೆಟ್ಟಳ್ಳಿ, ಜೂ. ೧೦: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ಇವರ ಆಶ್ರಯದಲ್ಲಿ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆಯುತ್ತಿರುವ ೧೮ ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಆರನೇ ದಿನದ ಪಂದ್ಯದಲ್ಲಿ ಕೆವೈಸಿಸಿ ಕಡಂಗ ಹಾಗೂ ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಸಿ ಗುಂಪಿನ ಮೂರನೇ ಸುತ್ತಿನ ಪಂದ್ಯವು ಬ್ರದರ್ಸ್ ನಲ್ವತ್ತೇಕರೆ ಹಾಗೂ ವಾಯಾಂಬೋ ಸಿಕ್ಸರ್ಸ್ ವೀರಾಜಪೇಟೆ ತಂಡಗಳ ನಡುವೆ ನಡೆದು ಬ್ರದರ್ಸ್ ನಲ್ವತ್ತೇಕರೆ ತಂಡವು ೧ ರನ್‌ಗಳಿಂದ ವೀರೋಚಿತ ಸೋಲು ಕಂಡಿತು.

ವಾಯಾAಬೋ ಸಿಕ್ಸರ್ಸ್ ತಂಡವು ಪ್ರಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

ಸುಡು ಕ್ರಿಕೆಟರ್ಸ್ ಸಿದ್ದಾಪುರ ಹಾಗೂ ಯುನೈಟೆಡ್ ಕೊಯನಾಡು ತಂಡಗಳ ನಡುವಿನ ಪಂದ್ಯದಲ್ಲಿ ಕೊಯನಾಡು ತಂಡವು ಗೆದ್ದಿತು.

ಲಿಮ್ರಾ ಮೇಕೇರಿ ಹಾಗೂ ಟೀಮ್ ೯೬ ಕಲ್ಕಂದೂರು ತಂಡಗಳ ನಡುವಿನ ಪಂದ್ಯದಲ್ಲಿ ಟೀಮ್ ೯೬ ಕಲ್ಕಂದೂರು ಗೆಲುವು ಸಾಧಿಸಿತು .

ಸ್ಮಾö್ಯಶರ್ಸ್ ಮೂರ್ನಾಡು ಹಾಗೂ ಗ್ರೀನ್ ಫೋರ್ಟ್ ಅಯ್ಯಂಗೇರಿ ತಂಡಗಳ ನಡುವಿನ ಪಂದ್ಯದಲ್ಲಿ ಗ್ರೀನ್ ಫೋರ್ಟ್ ಅಯ್ಯಂಗೇರಿ ಜಯ ಗಳಿಸಿತು.

ಕೆವೈಸಿಸಿ ಕಡಂಗ ಹಾಗೂ ಆ್ಯಶಸ್ ಗೋಣಿಕೊಪ್ಪ ತಂಡಗಳ ನಡುವಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆ್ಯಶಸ್ ಗೋಣಿಕೊಪ್ಪ ತಂಡವು ಸೋಲು ಕಂಡಿತು. ಕೆವೈಸಿಸಿ ಕಡಂಗ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಬ್ಲ್ಯಾಕ್ ಕ್ಯಾಟ್ ಮಡಿಕೇರಿ ಹಾಗೂ ತಾಜ್ ಕುಶಾಲನಗರ ನಡುವಿನ ಪಂದ್ಯದಲ್ಲಿ ಕುಶಾಲನಗರ ಗೆದ್ದು ಪ್ರಿ ಕ್ವಾರ್ಟರ್ ಪ್ರವೇಶಿಸಿತು.

ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ಹಾಗೂ ಓಯಸಿಸ್ ಹೊದವಾಡ ನಡುವಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಓಯಸಿಸ್ ಹೊದವಾಡ ತಂಡ ಸೋಲು ಕಂಡಿತು. ಬ್ರದರ್ಸ್ ನೆಲ್ಲಿಹುದಿಕೇರಿ ತಂಡ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಿತು.

ಟೀಮ್ ೯೬ ಕಲ್ಕಂದೂರು ಹಾಗೂ ಯುನೈಟೆಡ್ ಕೊಯನಾಡು ತಂಡಗಳ ನಡುವಿನ ಪಂದ್ಯದಲ್ಲಿ ಟೀಮ್ ೯೬ ಕಲ್ಕಂದೂರು ತಂಡ ಗೆಲುವು ಪಡೆದು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಗ್ರೀನ್ ಫೋರ್ಟ್ ಅಯ್ಯಂಗೇರಿ ಹಾಗೂ ವಾಯಾಂಬೋ ಸಿಕ್ಸರ್ಸ್ ವೀರಾಜಪೇಟೆ ತಂಡಗಳ ನಡುವಿನ ಪಂದ್ಯದಲ್ಲಿ ವಾಯಾಂಬೋ ಸಿಕ್ಸರ್ಸ್ ವೀರಾಜಪೇಟೆ ಪರಾಭವಗೊಂಡಿತು. ಗ್ರೀನ್ ಫೋರ್ಟ್ ಅಯ್ಯಂಗೇರಿ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ತಾಜ್ ಕುಶಾಲನಗರ ಹಾಗೂ ಟೀಮ್ ೯೬ ಕಲ್ಕಂದೂರು ತಂಡಗಳ ನಡುವಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಾಜ್ ಕುಶಾಲನಗರ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಸಿ ಗುಂಪಿನ ಕ್ವಾರ್ಟರ್ ಫೈನಲ್ ಪಂದ್ಯವು ಕೆವೈಸಿಸಿ ಕಡಂಗ ಹಾಗೂ ಗ್ರೀನ್ ಫೋರ್ಟ್ ಅಯ್ಯಂಗೇರಿ ತಂಡಗಳ ನಡುವೆ ನಡೆದು ಕೆವೈಸಿಸಿ ಕಡಂಗ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಿತು.

ತಾಜ್ ಕುಶಾಲನಗರ ಹಾಗೂ ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಯಲ್ ಬ್ರದರ್ಸ್ ಗೆದ್ದು ಸೆಮಿಫೈನಲ್ ಪ್ರವೇಶಿಸಿತು.

ಸಮಾರೋಪ

ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್. ಕ್ರಿಕೆಟರ್ಸ್ ಮೂರ್ನಾಡು ಇವರ ಆಶ್ರಯದಲ್ಲಿ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆಯುತ್ತಿರುವ ೧೮ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ತಾ. ೧೧ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಆರ್.ಎಸ್. ಮೂರ್ನಾಡು ಇದರ ಅಧ್ಯಕ್ಷ ಜಾಸೀರ್ ಕೆ.ಜಿ. ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಅಬ್ದುಲ್ ರಶೀದ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ವಕೀಲ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ಕಾಂಗ್ರೆಸ್ ಯುವ ಮುಖಂಡ ಮಂಥರ್ ಗೌಡ, ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ನಾಪಂಡ ಮುತ್ತಪ್ಪ, ಸಮಾಜ ಸೇವಕಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್, ಕಾಂಗ್ರೆಸ್ ಮುಖಂಡ ಹರೀಶ್ ಬೋಪಣ್ಣ, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಖಲೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ಲತೀಫ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.

-ಕೆ.ಎಂ ಇಸ್ಮಾಯಿಲ್ ಕಂಡಕೆರೆ