ಮಡಿಕೇರಿ, ಜೂ. ೧೦: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ನಾಗರಿಕರಿಗೆ ಗೋಣಿಕೊಪ್ಪದಲ್ಲಿ ನಾಗರಿಕ ಬಂದೂಕು ತರಬೇತಿಯು ತಾ. ೧೫ ರಿಂದ ಒಂದು ವಾರಗಳ ಕಾಲ ನಡೆಯಲಿದೆ. ಈ ಸಂಬAಧ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಬಂದೂಕು ತರಬೇತಿಗೆ ಇಚ್ಚೆಯುಳ್ಳ ನಾಗರಿಕರು ತಮ್ಮ ಅರ್ಜಿಯನ್ನು ವೀರಾಜಪೇಟೆ ಉಪ ಅಧೀಕ್ಷಕರ ಕಚೇರಿಯಲ್ಲಿ ತಾ. ೧೩ ರ ಸಂಜೆ ೬ ಗಂಟೆಯೊಳಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ವಿವರಗಳಿಗೆ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕರು ೯೪೮೦೮೦೪೯೨೨, ಕಚೇರಿ ಸಂಖ್ಯೆ ೦೮೨೭೪-೨೫೭೪೮೮, ಪೊಲೀಸ್ ನಿರೀಕ್ಷಕರು, ಸಶಸ್ತç ದಳ, ಮಡಿಕೇರಿ ೯೪೮೦೮೦೪೯೦೬, ಸಹಾಯಕ ಪೊಲೀಸ್ ಉಪ ನಿರೀಕ್ಷಕರು ೯೪೪೮೩೨೫೭೬೮ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ. ಅಯ್ಯಪ್ಪ ಅವರು ಹೇಳಿದ್ದಾರೆ.