ಮಡಿಕೇರಿ, ಜೂ. ೧೦ : ಪರಿಸರವಾದಿ ಕರ್ನಲ್ ಸಿ.ಪಿ. ಮುತ್ತಣ್ಣ ಅವರ ವಿರುದ್ಧ ಮರಕಡಿತಲೆ ಆರೋಪ ಮಾಡಿದ ಹಿನ್ನೆಲೆ ತನ್ನ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಹೊರಿಸಿದ್ದಾರೆ. ಈ ಸಂಬAಧ ಸಾಕ್ಷಾö್ಯಧಾರಗಳು ನೀಡಿದ್ದಲ್ಲಿ ತಾನು ಚರ್ಚೆಗೆ ಸಿದ್ಧ ಎಂದು ಬೆಳೆಗಾರ ಚೇರಂಡ ನಂದಾ ಸುಬ್ಬಯ್ಯ ಸವಾಲೆಸೆದಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತ್ತಣ್ಣ ಅವರ ತೋಟದಲ್ಲಿ ಮರಗಳ ಹನನವಾಗಿವೆ ಎಂಬ ಆರೋಪವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ನಿಯಮಬದ್ಧವಾಗಿ ಮರ ಕಡಿದಿದ್ದೇನೆ ಎಂದು ಹೇಳಿರುವ ಅವರ ಮಾತಿಗೆ ಆಕ್ಷೇಪವಿಲ್ಲ. ಆದರೆ, ಬೇರೆಯವರ ತೋಟದಲ್ಲಿ ಮರ ಕಡಿದರೆ ಅದಕ್ಕೆ ಆಕ್ಷೇಪ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಪರಿಸರವಾದಿಗಳ ದ್ವಂದ್ವ ನಿಲುವಿಗೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.
೪೦೦ ಕೆವಿ ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ತಾನು ಪವರ್ ಗ್ರೀಡ್ ಕಾರ್ಪೋರೇಷನ್ ಏಜೆಂಟನAತೆ ಕೆಲಸ ಮಾಡಿದ್ದೇನೆ ಎಂದು ದೂರಿದ್ದು, ಈ ಬಗ್ಗೆ ದಾಖಲೆಗಳಿದ್ದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ. ಜೊತೆಗೆ ಬರಪೊಳೆ ಯೋಜನೆಗೆ ತಾನು ಬೆಂಬಲ ನೀಡಿರುವ ಆರೋಪ ಹಾಸ್ಯಸ್ಪದವಾಗಿದ್ದು, ಕೊಡಗು ‘ಸಿ’ ರಾಜ್ಯವಾಗಿದ್ದ ಸಂದರ್ಭವೇ ಯೋಜನೆಗೆ ಅಣೆಕಟ್ಟು ಕಟ್ಟಲು ಕೊಂಗಣ ಪ್ರದೇಶದಲ್ಲಿ ಸ್ಥಳವನ್ನು ಗುರುತಿಸಲಾಗಿತ್ತು. ಅಲ್ಲಿ ಶಿಲಾಫಲಕ ಕೂಡ ಅಳವಡಿಸಲಾಗಿದೆ. ಕೊಡಗು ರೈಲು ಮಾರ್ಗ ನಮ್ಮ ಬೇಡಿಕೆಯಲ್ಲ, ಕಾಫಿ ಕೃಷಿ ಮಾರುಕಟ್ಟೆಗೆ ಅನುಕೂಲವಾಗುವ ಉದ್ದೇಶದಲ್ಲಿ ೧೮೯೦ರಲ್ಲಿಯೇ ಕೂರ್ಗ್ ಪ್ಲಾಂರ್ಸ್ ಅಸೋಸಿಯೇಷನ್ ಮನವಿ ಮಾಡಿತ್ತು ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಕೀಪಾಡಂಡ ಮಧು ಬೋಪಣ್ಣ ಮಾತನಾಡಿ, ಪರಿಸರವಾದಿಗಳಿಗೆ ಪರಿಸರ ಪ್ರಜ್ಞೆ ಇಲ್ಲ. ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡುವುದು ಇದೆಷ್ಟು ಸರಿ?. ರಚನಾತ್ಮಕ ಚರ್ಚೆಗೆ ಪರಿಸರವಾದಿಗಳು ಸಿದ್ಧವಿಲ್ಲ. ಇವರದ್ದೆ ಸಹಚರರು ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಕೂಟಿಯಾಲ ಸೇತುವೆಗೆ ಅಡ್ಡಗಾಲು ಹಾಕಿದ್ದಾರೆ. ಇವರದ್ದು ವಿಕೃತ ಮನಸ್ಥಿತಿ ಎಂದು ಕಿಡಿಕಾರಿದರು.
ಬೆಳೆಗಾರ ರಮೇಶ್ ಮುದ್ದಯ್ಯ ಮಾತನಾಡಿ, ಉಳ್ಳವರಿಗೆ ಹಸಿದವರ ಸಂಕಷ್ಟ ತಿಳಿಯುವುದಿಲ್ಲ ಎಂದು ಪರಿಸರವಾದಿಗಳನ್ನು ಕುಟುಕಿದರು.
ಸಹಕಾರಿ ನಾಪಂಡ ರ್ಯಾಲಿ ಮಾತನಾಡಿ, ಕೊಡಗಿನಲ್ಲಿ ಪರಿಸರ ಸಂರಕ್ಷಣೆಗೆ ಯಾರ ನಾಯಕತ್ವವೂ ಬೇಕಿಲ್ಲ. ಪರಿಸರವಾದಿಗಳ ವಿರುದ್ಧ ಕೊಡಗಿನ ಜನ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಬೆಳೆಗಾರರಾದ ಪೊನ್ನಚ್ಚಂಡ ಬೆಳ್ಯಪ್ಪ, ಮುಕ್ಕಾಟೀರ ನಂಜಪ್ಪ ಹಾಜರಿದ್ದರು.