ಶನಿವಾರಸAತೆ: ಮನೆಮನೆಯಲ್ಲೂ ಮಕ್ಕಳು ಒಂದೊAದು ಹಣ್ಣಿನ ಗಿಡ ನೆಟ್ಟು ಪೋಷಿಸಿದರೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಮಹತ್ವಪೂರ್ಣವೆನಿಸಿ ಯಶಸ್ವಿಯಾಗುತ್ತದೆ ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪಿ.ಯು. ಕಾಲೇಜು ಹಾಗೂ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಮನೆಯಂಗಳದಲ್ಲಿ ನೆಡಲು ಹಣ್ಣಿನ ಗಿಡ ವಿತರಿಸಿ ಅವರು ಮಾತನಾಡಿದರು.
ಈ ಸಂದರ್ಭ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಪೂರ್ವಿ ಜಗದೀಶ್ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಸಿ.ವಿ. ಕೀರ್ತನಾರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ಉಪ ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಫಾದರ್ ಸೆಬಾಸ್ಟಿನ್ ಮೈಕಲ್ ವಹಿಸಿದ್ದರು. ಶಿಕ್ಷಕರಾದ ಯೋಗೇಶ್, ಕುಮಾರ್, ನೇತ್ರಾವತಿ, ಪೂಜ್ಯ, ಸುನೀತಾ ಉಪಸ್ಥಿತರಿದ್ದರು.