ಕುಶಾಲನಗರ, ಜೂ. ೧೦: ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ೩ ಮಂದಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಸೇರಿದ ಕಾರ್ಯಕರ್ತರು ಬಿಜೆಪಿಗೆ ಜಯಘೋಷ ಕೂಗಿ ನಂತರ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಸದಸ್ಯರಾದ ಅಮೃತರಾಜ್, ಎಂ.ವಿ. ನಾರಾಯಣ, ಪುಂಡರೀಕಾಕ್ಷ ಪ್ರಮುಖರಾದ ಸತ್ಯನಾರಾಯಣ, ಮೊಣ್ಣಪ್ಪ, ಸೋಮಶೇಖರ್, ಎಂ.ಡಿ. ಕೃಷ್ಣಪ್ಪ, ಮತ್ತಿತರರಿದ್ದರು.