ಮಡಿಕೇರಿ, ಜೂ. ೧೦: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭದ ಸಮಯವಾಗಿದ್ದರೂ ಈತನಕ ಮಳೆ ಬಿರುಸುಗೊಂಡಿಲ್ಲ. ಆಗಾಗ್ಗೆ ಅಲ್ಲಲ್ಲಿ ಮೋಡ ಆವರಿಸುವದರೊಂದಿಗೆ ಮಳೆಯ ಸಿಂಚನ ಮಾತ್ರ ಆಗುತ್ತಿದೆ. ಆದರೆ ಇಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಪರಾಹ್ನದ ನಂತರ ತುಸು ಮಳೆಯಾಗುವುದರೊಂದಿಗೆ ಮುಂಗಾರು ಮಳೆ ಪ್ರಾರಂಭದ ಮನ್ಸೂಚನೆ ನೀಡಿದಂತೆ ಗೋಚರಿಸಿತು.