ಜುಲೈ ೧೮ಕ್ಕೆ ರಾಷ್ಟçಪತಿ ಚುನಾವಣೆ; ಜುಲೈ ೨೧ಕ್ಕೆ ಫಲಿತಾಂಶ

ನವದೆಹಲಿ, ಜೂ. ೯: ರಾಷ್ಟçಪತಿ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಇಂದು ಪ್ರಕಟಿಸಿದ್ದು, ಜುಲೈ ೧೮ಕ್ಕೆ ಚುನಾವಣೆ ನಡೆಯಲಿದೆ. ಜುಲೈ ೧೮ ರಂದು ರಾಷ್ಟçಪತಿ ಚುನಾವಣೆಗೆ ಮತದಾನ ನಡೆಯಲಿದ್ದು, ಜುಲೈ ೨೧ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ೨೦೨೨ ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಒಟ್ಟು ೪,೮೦೯ ಮತದಾರರು ಮತ ಚಲಾಯಿಸುತ್ತಾರೆ. ಅಂದಹಾಗೆ ಈ ಚುನಾವಣೆಯಲ್ಲಿ ರಾಜ್ಯಸಭಾ ಚುನಾವಣೆಗಳಲ್ಲಿರುವಂತೆ ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸುವಂತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ದೇಶದ ಹಾಲಿ ರಾಷ್ಟçಪತಿ ರಾಮ್‌ನಾಥ್ ಕೋವಿಂದ್ ಅವರ ಅವಧಿ ಜುಲೈ ೨೪ ರಂದು ಮುಕ್ತಾಯವಾಗಲಿದೆ. ಕೊನೆಯ ಅಧ್ಯಕ್ಷೀಯ ಚುನಾವಣೆಯು ೧೭ ಜುಲೈ ೨೦೧೭ ರಂದು ನಡೆದಿತ್ತು. ೨೦೧೭ ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು ಶೇ. ೫೦ ರಷ್ಟು ಮತಗಳು ಎನ್‌ಡಿಎ ಪರವಾಗಿ ಇದ್ದವು. ಒಟ್ಟು ೪,೮೮೦ ಮತದಾರರಲ್ಲಿ ೪,೧೦೯ ಶಾಸಕರು ಮತ್ತು ೭೭೧ ಸಂಸದರು ಮತ ಚಲಾಯಿಸಿದ್ದರು.

ದೆಹಲಿ ಪೊಲೀಸರು ಸಮತೋಲನವಾದದಿಂದ ಬಳಲುತ್ತಿದ್ದಾರೆ: ಓವೈಸಿ

ಹೈದರಾಬಾದ್, ಜೂ. ೯: ದೆಹಲಿ ಪೊಲೀಸರು ಉಭಯ ಪಕ್ಷೀಯ ಹಾಗೂ ಸಮತೋಲನವಾದದಿಂದ ಬಳಲುತ್ತಿದ್ದಾರೆ ಎಂದು ಎಐಎಂಐಎAನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ತಮ್ಮ ವಿರುದ್ಧ ದೆಹಲಿ ಪೊಲೀಸರು ದ್ವೇಷ ಭಾಷಣದ ಪ್ರಕರಣ ದಾಖಲಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓವೈಸಿ, ತಮ್ಮ ವಿರುದ್ಧದ ಎಫ್‌ಐಆರ್ ದಾಖಲಾಗಿರುವ ವಿಷಯವಾಗಿ ತಮ್ಮ ಅಡ್ವೊಕೇಟ್‌ಗಳನ್ನು ಸಂಪರ್ಕಿಸುವುದಾಗಿ ಹೇಳಿದ್ದು ತಾವು ಇಂತಹ ಕೃತ್ಯಗಳಿಂದ ಬೆದರುವುದಿಲ್ಲ ಎಂದೂ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದರ ವಿರುದ್ಧವಾದ ಮತ್ತು ಜನರನ್ನು ವಿಭಜಿಸುವ ಮಾರ್ಗಗಳಲ್ಲಿ ಪ್ರಚೋದಿಸುವ ಅಂಶಗಳನ್ನು ಹರಡುತ್ತಿದ್ದ ಆರೋಪದಲ್ಲಿ ದೆಹಲಿ ಪೊಲೀಸರು ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ, ಎಐಎಂಐಎA ಮುಖ್ಯಸ್ಥ ಓವೈಸಿ, ವಿವಾದಾತ್ಮಕ ಅರ್ಚಕ ಯತಿ ನರಸಿಂಗಾನAದ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ದ್ವೇಷ ಭಾಷಣಗಳನ್ನು ಮಾಡುವುದು ಹಾಗೂ ದ್ವೇಷ ಭಾಷಣಗಳನ್ನು ಟೀಕಿಸುವುದು ಇವೆರಡನ್ನೂ ಸಮೀಕರಿಸಲಾಗುವುದಿಲ್ಲ ಎಂದು ಸರಣಿ ಟ್ವೀಟ್ ಮೂಲಕ ಓವೈಸಿ ಹೇಳಿದ್ದಾರೆ. ಓರ್ವರು ನಮ್ಮ ಪ್ರವಾದಿಯನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ, ಮತ್ತೊಬ್ಬರನ್ನು ಬಿಜೆಪಿ ಬೆಂಬಲಿಗರನ್ನು ಸಮಾಧಾನಪಡಿಸುವುದಕ್ಕಾಗಿ ಹಾಗೂ ಎರಡೂ ಕಡೆ ದ್ವೇಷ ಭಾಷಣಗಳಿತ್ತು ಎಂಬAತೆ ತೋರಿಸಲು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಆಡಳಿತಾರೂಢ ಪಕ್ಷದ ವಕ್ತಾರರು ಹಾಗೂ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಧರ್ಮಗುರುಗಳ ದ್ವೇಷ ಭಾಷಣವನ್ನು, ರಾಜಕೀಯ ಅಥವಾ ಸಾಮಾಜಿಕ ನಿಲುವೇ ಇರದ ಸಾಮಾಜಿಕ ಜಾಲತಾಣದ ಯಾವುದೋ ಪೋಸ್ಟ್ಗಳನ್ನೂ ಸಮೀಕರಿಸಲಾಗುತ್ತಿದೆ. ನನ್ನ ಪ್ರಕರಣದಲ್ಲಿ ಏನು ಆಕ್ಷೇಪಾರ್ಹವಾಗಿತ್ತು ಎಂಬುದನ್ನೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿಲ್ಲ ಎಂದು ಓವೈಸಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ವಿವಾದ: ವಸ್ತç ಸಂಹಿತೆ ಪಾಲಿಸಲು ಒಪ್ಪಿದ ವಿದ್ಯಾರ್ಥಿನಿಯರು

ಉಡುಪಿ, ಜೂ. ೯: ಹಿಜಾಬ್ ವಿವಾದದ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆರು ವಿದ್ಯಾರ್ಥಿನಿಯರ ಅಮಾನತು ಆದೇಶವನ್ನು ಕಾಲೇಜು ಆಡಳಿತ ಮಂಡಳಿ ಹಿಂಪಡೆದಿದ್ದು, ವಿವಾದ ಸುಖಾಂತ್ಯ ಕಂಡಿದೆ. ಕಾಲೇಜಿನ ವಸ್ತç ಸಂಹಿತೆ ಅನುಸರಿಸುವುದಾಗಿ ಆರು ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ಭರವಸೆ ನೀಡಿದ ಬಳಿಕ ಕಾಲೇಜು ಆಡಳಿತ ಮಂಡಳಿ ಅಮಾನತು ಹಿಂಪಡೆದಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಹಿಜಾಬ್ ಧರಿಸಿ ತರಗತಿಗೆ ಬಂದ ಈ ಆರು ವಿದ್ಯಾರ್ಥಿನಿಯರನ್ನು ಉಪ್ಪಿನಂಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಮಾನತುಗೊಳಿಸಿತ್ತು. ಈ ಪ್ರಕರಣದಲ್ಲಿ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಅಂಗವಲ್ಲ ಎಂದು ಹೈಕೋರ್ಟ್ ಹೇಳಿತ್ತು. ಅಲ್ಲದೆ ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್‌ಕೋಡ್ ಅಳವಡಿಸಿಕೊಳ್ಳಬಹುದು ಎಂದು ಕೋರ್ಟ್ ತಿಳಿಸಿತ್ತು. ಕಳೆದ ವಾರ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಬೇಕೆಂದು ಪ್ರತಿಭಟಿಸಿದ್ದರಿಂದ ೨೩ ವಿದ್ಯಾರ್ಥಿಗಳನ್ನು ಕಾಲೇಜು ಅಮಾನತುಗೊಳಿಸಿತ್ತು.

ನಿವೃತ್ತಿ ವಯಸ್ಸು ಏರಿಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

ಬೆಂಗಳೂರು, ಜೂ. ೯: ನಿವೃತ್ತಿಯ ವಯಸ್ಸನ್ನು ೬೨ ರಿಂದ ೬೫ಕ್ಕೆ ಏರಿಕೆ ಕೋರಿ ರಾಜ್ಯ ವಿವಿಯ ಡೀನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ಪಿ. ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠ, ಡಾ. ಚಿದಾನಂದ ಪಿ. ಮನ್ಸೂರ್ ಹನುಮನಮಟ್ಟಿ, ಧಾರವಾಡ ಜಿಲ್ಲೆಯ ಕೃಷಿ ವಿಜ್ಞಾನದ ಡೀನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಮನವಿಯನ್ನು ಪುರಸ್ಕರಿಸಿದರೆ ಹೊಸ ನೇಮಕಾತಿಗಳಿಗೆ ಯಾವುದೇ ಖಾಲಿ ಹುದ್ದೆಗಳಿರುವುದಿಲ್ಲ ಎಂದು ಹೇಳಿದೆ. ಸಾರ್ವಜನಿಕ ಸೇವೆಯಲ್ಲಿರುವವರ ನಿವೃತ್ತಿ ಸರ್ಕಾರದ ಬೊಕ್ಕಸಕ್ಕೆ ಹಾಗೂ ಇತರರ ಉದ್ಯೋಗ ಅವಕಾಶಗಳಿಗೆ ಸಂಬAಧ ಹೊಂದಿರುತ್ತದೆ. ಮನವಿಯನ್ನು ಪುರಸ್ಕರಿಸಿದ್ದೇ ಆದಲ್ಲಿ ವಿವಿಧ ವಿವಿ, ಅದರೊಂದಿಗೆ ಸೇರಿರುವ ಕಾಲೇಜುಗಳಲ್ಲಿ ಈಗಿರುವ ಸಾವಿರಾರು ಮಂದಿ ಇನ್ನೂ ಮೂರು ವರ್ಷಗಳ ಹೆಚ್ಚಿನ ಸೇವಾವಧಿಯನ್ನು ಹೊಂದಿರುತ್ತಾರೆ. ಆಗ ಹೊಸ ನೇಮಕಾತಿಗಳಿಗೆ ಅವಕಾಶವಿರುವುದಿಲ್ಲ ಆದ್ದರಿಂದ ಇದು ಅಪೇಕ್ಷಣೀಯವಲ್ಲ ಎಂದು ಕೋರ್ಟ್ ಹೇಳಿದೆ.

ಮಲ್ಪೆ ಬೀಚ್‌ನಲ್ಲಿ ಮುಳುಗಡೆ ತಡೆಗೆ ಬಲೆ

ಉಡುಪಿ, ಜೂ. ೯: ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ನೀರಿನಲ್ಲಿ ಮುಳುಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮಲ್ಪೆ ಬಂದರು ಅಭಿವೃದ್ಧಿ ಸಮಿತಿಯು ಬೀಚ್‌ನ ಪ್ರಮುಖ ಪ್ರದೇಶದಲ್ಲಿ ಸುರಕ್ಷತಾ ಬಲೆ ಎಳೆಯಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ತಡೆಯಲು ಬಲೆಗಳನ್ನು ಹಾಕಲಾಗುತ್ತಿದೆ. ಕಡಲತೀರದ ಪ್ರಮುಖ ಪ್ರದೇಶಗಳಲ್ಲಿ ಒಂದು ಕಿ.ಮೀ. ಉದ್ದದ ಆರು ಅಡಿ ಎತ್ತರದ ಬಲೆಯನ್ನು ಎಳೆಯಲಾಗಿದೆ. ಮುಂಬರುವ ಅಪಾಯದ ಬಗ್ಗೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಕೆಂಪು ಧ್ವಜಗಳನ್ನು ಸಹ ಹಾಕಲಾಗಿದೆ. ಬಲೆ ದಾಟಿ ನೀರಿಗೆ ಕಾಲಿಟ್ಟವರು ೫೦೦ ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ಸಮಿತಿ ಮೂಲಗಳು ತಿಳಿಸಿವೆ. ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಸಾರ್ವಜನಿಕ ವಿಳಾಸ ವ್ಯವಸ್ಥೆ ಕೂಡ ಜಾರಿಯಲ್ಲಿದೆ. ಪ್ರವಾಸಿಗರಿಗೆ ಸುರಕ್ಷಿತ ಸ್ಥಳ ಎಂದು ಸೂಚಿಸುವ ಹಳದಿ ಧ್ವಜಗಳನ್ನು ಕೆಲವು ಸ್ಥಳಗಳಲ್ಲಿ ಇರಿಸಲಾಗಿದೆ.