ಸೋಮವಾರಪೇಟೆ, ಜೂ.೯: ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನ ಸಮೀಪದ ದುದ್ದುಗಲ್ಲು ಗ್ರಾಮದ ಇಳಿಜಾರು ರಸ್ತೆಯಲ್ಲಿ ಅವಘಡಕ್ಕೀಡಾಗಿ ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಪಟ್ಟಣ ಸಮೀಪದ ಹಾನಗಲ್ಲು, ಕಾನ್ವೆಂಟ್‌ಬಾಣೆ ಹಾಗೂ ಮಹದೇಶ್ವರ ಬಡಾವಣೆಯಿಂದ ಕೂಲಿ ಕಾರ್ಮಿಕರನ್ನು ತಾಕೇರಿ ಗ್ರಾಮದ ಕಾಫಿ ತೋಟಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ವಾಹನ ಬರೆಗೆ ಗುದ್ದಿದೆ. ಪರಿಣಾಮ ಪಿಕ್‌ಅಪ್‌ನ ಹಿಂಬದಿ ಕುಳಿತಿದ್ದ ೧೩ ಕಾರ್ಮಿಕರು ಸೇರಿದಂತೆ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಕೇರಿ ಗ್ರಾಮದ ಮಹೇಶ್ ಎಂಬವರು ತಮ್ಮ ಪಿಕ್‌ಅಪ್ ವಾಹನದಲ್ಲಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದರು. ಇಂದು ಬೆಳಿಗ್ಗೆ ೮.೩೦ರ ಸುಮಾರಿಗೆ ದುದ್ದುಗಲ್ಲು ಗ್ರಾಮದ ಇಳಿಜಾರಿನಲ್ಲಿ ಪಿಕ್‌ಅಪ್ ನಿಯಂತ್ರಣ ತಪ್ಪಿದ್ದು, ಈ ಸಂದರ್ಭ ವಾಹನ ರಸ್ತೆ ಬದಿಯ ಬರೆಗೆ ಗುದ್ದಿದೆ. ಪರಿಣಾಮ ಹಿಂಬದಿ ನಿಂತಿದ್ದ ಕಾರ್ಮಿಕ ಮಹಿಳೆಯರಾದ ದೀಕ್ಷಿತ, ಪವಿತ್ರ, ಯಶೋಧ, ಪೂವಮ್ಮ, ಸುಮತಿ, ಇಂದಿರಾ, ಶಶಿಯಮ್ಮ, ಕಮಲಮ್ಮ, ಪಾಪಮ್ಮ, ಮಂಜುಳಾ, ಶಾಂತಮ್ಮ, ಸುಮಿತ್ರ, ಸುಮಿತ್ರ ಕೃಷ್ಣ ಅವರುಗಳಿಗೆ ಗಾಯಗಳಾಗಿವೆ.

ತಕ್ಷಣ ಗಾಯಾಳುಗಳನ್ನು ಮತ್ತೊಂದು ವಾಹನದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಗಾಯಗಳಾಗಿರುವ ಕಾರ್ಮಿಕ ಮಹಿಳೆಯರನ್ನು ಸ್ಕಾö್ಯನಿಂಗ್ ಮತ್ತು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

೧೪ ಮಂದಿ ಗಾಯಾಳುಗಳಿಗೆ ಆಸ್ಪತ್ರೆಯ ವೈದ್ಯರುಗಳಾದ ಸತೀಶ್‌ಕುಮಾರ್, ಶಿವಪ್ರಸಾದ್, ಕಿರಣ್ ಸೇರಿದಂತೆ ಶುಶ್ರೂಷಕಿಯರು ಚಿಕಿತ್ಸೆ ನೀಡಿದರು.

ನಿನ್ನೆಯೂ ಅವಘಡ: ನಿನ್ನೆ ದಿನವೂ ಸಹ ಪಿಕ್‌ಅಪ್ ವಾಹನ ಅವಘಡಕ್ಕೀಡಾಗಿ ೧೫ ಮಂದಿಗೆ ಚಿಕಿತ್ಸೆ ನೀಡಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮದಲಾಪುರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕಾರ್ಮಿಕರನ್ನು ಸಾಗಿಸುತ್ತಿದ್ದ ಪಿಕ್‌ಅಪ್ ಅವಘಡಕ್ಕೀಡಾಗಿ ೧೫ ಮಂದಿ ಗಾಯಗೊಂಡಿದ್ದರು. ಇಂದು ೧೪ ಮಂದಿ ಗಾಯಗೊಂಡಿದ್ದಾರೆ ಎಂದು ಕಮಲಮ್ಮ, ಪಾಪಮ್ಮ, ಮಂಜುಳಾ, ಶಾಂತಮ್ಮ, ಸುಮಿತ್ರ, ಸುಮಿತ್ರ ಕೃಷ್ಣ ಅವರುಗಳಿಗೆ ಗಾಯಗಳಾಗಿವೆ.

ತಕ್ಷಣ ಗಾಯಾಳುಗಳನ್ನು ಮತ್ತೊಂದು ವಾಹನದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಗಾಯಗಳಾಗಿರುವ ಕಾರ್ಮಿಕ ಮಹಿಳೆಯರನ್ನು ಸ್ಕಾö್ಯನಿಂಗ್ ಮತ್ತು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

೧೪ ಮಂದಿ ಗಾಯಾಳುಗಳಿಗೆ ಆಸ್ಪತ್ರೆಯ ವೈದ್ಯರುಗಳಾದ ಸತೀಶ್‌ಕುಮಾರ್, ಶಿವಪ್ರಸಾದ್, ಕಿರಣ್ ಸೇರಿದಂತೆ ಶುಶ್ರೂಷಕಿಯರು ಚಿಕಿತ್ಸೆ ನೀಡಿದರು.

ನಿನ್ನೆಯೂ ಅವಘಡ: ನಿನ್ನೆ ದಿನವೂ ಸಹ ಪಿಕ್‌ಅಪ್ ವಾಹನ ಅವಘಡಕ್ಕೀಡಾಗಿ ೧೫ ಮಂದಿಗೆ ಚಿಕಿತ್ಸೆ ನೀಡಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮದಲಾಪುರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕಾರ್ಮಿಕರನ್ನು ಸಾಗಿಸುತ್ತಿದ್ದ ಪಿಕ್‌ಅಪ್ ಅವಘಡಕ್ಕೀಡಾಗಿ ೧೫ ಮಂದಿ ಗಾಯಗೊಂಡಿದ್ದರು. ಇಂದು ೧೪ ಮಂದಿ ಗಾಯಗೊಂಡಿದ್ದಾರೆ ಎಂದು