ಸುಂಟಿಕೊಪ್ಪ, ಜೂ. ೯: ಸುಂಟಿಕೊಪ್ಪ ಮಾದಾಪುರ ರಸ್ತೆಯಲ್ಲಿರುವ ವೃಕ್ಷೆÆÃದ್ಭವ ಶ್ರೀ ಮಹಾಗಣಪತಿ ಮತ್ತು ಪರಿವಾರ ದೇವತೆಗಳ ೧೮ನೇ ವಾರ್ಷಿಕೋತ್ಸವವು ತಾ. ೧೧ ರಂದು ನಡೆಯಲಿದೆ.

ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಪೂರ್ವಾಹ್ನ ೮ ಗಂಟೆಗೆ ಪ್ರಾರ್ಥನೆ, ೯ ಗಂಟೆಗೆ ಹರದೂರು ಹೊಳೆಯಿಂದ ಪಂಚಾಮೃತ ಅಭಿಷೇಕ, ಕಲಶ ಜಲಾನಯನ ಸರ್ವ ಕಲಶಾಭಿಷೇಕ, ಪುಣ್ಯಾಹ ವಾಚನ, ಗಣಪತಿ ಹೋಮ, ನವಗ್ರಹ ಹೋಮ, ಅಪರಾಹ್ನ ೧೨.೩೦ಕ್ಕೆ ಪೂರ್ಣಾಹುತಿ, ಅಪರಾಹ್ನ ೧ ಗಂಟೆಗೆ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಹಾಗೂ ಉತ್ಸವ ಸಮಿತಿ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.