*ಗೋಣಿಕೊಪ್ಪ, ಜೂ. ೯: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಬಾಳುಗೋಡಿ ನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ತೆಂಗಿನಕಾಯಿ ಹಾಗೂ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪಟ್ಟಡ ಬೋಪಣ್ಣ, ಪೆಮ್ಮಂಡ ನೇಹಾ ಪೂವಮ್ಮ ಹಾಗೂ ಕೆಚ್ಚೀರ ಶಬ್ದ್ ಬೆಳ್ಯಪ್ಪ ವಿಶೇಷ ಬಹುಮಾನ ದೊಂದಿಗೆ ಪಾಯಿಂಟ್ ೨೨ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.
ಕಿರಿಯ ಸ್ಪರ್ಧಿಗಳಿಗೆ ವಿಶೇಷ ವಾಗಿ ಬಹುಮಾನ ನೀಡಲಾಯಿತು. ಏರ್‌ಗನ್ ಮೂಲಕ ಮೊಟ್ಟೆಗೆ ಗುಂಡು ಹೊಡೆಯುವ ವಿಭಾಗದ ಕಿರಿಯ ಶೂಟರ್ ಬಹುಮಾನವನ್ನು ಅಮ್ಮತ್ತಿ ಗ್ರಾಮದ ಪಟ್ಟಡ ಬೋಪಣ್ಣ, ೧೨ನೇ ಬೋರ್ ವಿಭಾಗದಲ್ಲಿ ಕಿರುಗೂರು ಗ್ರಾಮದ ಪೆಮ್ಮಂಡ ನೇಹಾ ಪೂವಮ್ಮ, ಪಾಯಿಂಟ್ ೨೨ ವಿಭಾಗದಲ್ಲಿ ಅಂದಗೋವೆ ಗ್ರಾಮದ ಕೆಚ್ಚೀರ ಶಬ್ದ್ ಬೆಳ್ಯಪ್ಪ ಪಡೆದುಕೊಂಡರು.
ಕಿರಿಯರು ಕೂಡ ಹಿರಿಯರಿಗೆ ಸರಿಸಾಟಿಯಾಗುವಂತೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಮೊಟ್ಟೆ, ತೆಂಗಿನ ಕಾಯಿಗೆ ಗುರಿ ಇಟ್ಟು ಭವಿಷ್ಯದ ಶೂಟರ್ ಎಂದು ಬಿಂಬಿಸಿಕೊAಡರು. ಪಾಲಕರು ಮಕ್ಕಳೊಂದಿಗೆ ಆಗಮಿಸಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕೌಶಲ್ಯಕ್ಕೆ ಪ್ರೋತ್ಸಾಹ ನೀಡಿದರು. ಬೆಟ್ಟದ ತಪ್ಪಲಿನಲ್ಲಿರುವ ಅಪಾಯವಲ್ಲದ ಮೈದಾನದಲ್ಲಿ ಸ್ಪರ್ಧೆ ನಡೆಯಿತು. ಏರ್‌ಗನ್ ರೈಫಲ್‌ನಲ್ಲಿ ಮೊಟ್ಟೆಗೆ ಗುಂಡು ಹೊಡೆಯುವುದು ಸವಾಲಾಗಿ ಪರಿಣಮಿಸಿತು. ಬೆಂಬಿಡದ ಗುರಿಕಾರರು ಗುಂಡು ಹೊಡೆಯುವುದರಲ್ಲಿ ಸಫಲರಾದರು.
ಫಲಿತಾಂಶ: ಏರ್‌ಗನ್ ರೈಫಲ್ ವಿಭಾಗದಲ್ಲಿ ಮಡಿಕೇರಿಯ ಕನ್ನಂಡ ಯತೀಶ್ (ಪ್ರ), ಚೆಟ್ಟಳ್ಳಿ ಗ್ರಾಮದ ಪುತ್ತರೀರ ನಂಜಪ್ಪ (ದ್ವಿ), ಅಂಧಗೋವೆಯ ಕೆಚ್ಚೀರ ಶಬ್ದ್ ಬೆಳ್ಯಪ್ಪ (ತೃ), ೧೨ನೇ ಬೋರ್ ರೈಫಲ್ ವಿಭಾಗದಲ್ಲಿ ಬಿ. ಶೆಟ್ಟಿಗೇರಿಯ ನಾಮೇರ ನವೀನ್ (ಪ್ರ), ಬಾಡಗರ ಕೇರಿ ಗ್ರಾಮದ ಕುಪ್ಪುಡೀರ ಪ್ರಖ್ಯಾತ್ ಚಿಣ್ಣಪ್ಪ (ದ್ವಿ), ಕುರ್ಚಿ ಗ್ರಾಮದ ವೇದಪಂಡ ಶೆರಿನ್ ಗಣಪತಿ (ತೃ), ಪಾಯಿಂಟ್ ೨೨ ರೈಫಲ್ ವಿಭಾಗದಲ್ಲಿ ನಾಪೋಕ್ಲು ಗ್ರಾಮದ ಅಜ್ಜೇಟೀರ ಗೌತಂ (ಪ್ರ), ಕೆದಮುಳ್ಳೂರು ಗ್ರಾಮದ ಕರವಟ್ಟೀರ ಚಿಂತೇಶ್ ಭೀಮಯ್ಯ (ದ್ವಿ), ಪೂಕೊಳ ಗ್ರಾಮದ ಕಾಳಿಮಾಡ ಶರತ್ ತೃತೀಯ ಸ್ಥಾನ ಪಡೆದುಕೊಂಡರು.
ಘಟಕದ ಅಧ್ಯಕ್ಷ ಅಪ್ಪಂಡೇರAಡ ಪಿ. ದಿನೇಶ್, ಯೋಜನಾ ನಿರ್ದೇಶಕ ಟಾಟು ಮೊಣ್ಣಪ್ಪ, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಖಜಾಂಚಿ ಕುಪ್ಪಂಡ ದಿಲನ್, ರಾಷ್ಟಿçÃಯ ಸಂಯೋಜಕ ರಫಿಕ್ ತೂಚಮಕೇರಿ, ನಿಕಟಪೂರ್ವ ಅಧ್ಯಕ್ಷ ಮಂದೇಯAಡ ವನೀತ್ ಸಂಜು, ವಲಯ ಸಂಯೋಜಕ ಬಿ. ಇ. ಕಿರಣ್ ಬಹುಮಾನ ವಿತರಿಸಿದರು. ಕಿರಿಯ ಸ್ಪರ್ಧಿ ದೇವ್ ಬೋಪಣ್ಣ ತೆಂಗಿನ ಕಾಯಿಗೆ ಗುಂಡು ಹೊಡೆದು ಉದ್ಘಾಟಿಸಿದರು.