ಸುಂಟಿಕೊಪ್ಪ, ಜೂ. ೯: ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆಯ ೪.೫ ಕಿ.ಮೀ. ರಸ್ತೆ ಲೋಕಾರ್ಪಣೆಯನ್ನು ಶಾಸಕ ಅಪ್ಪಚ್ಚು ರಂಜನ್ ನೇರವೇರಿಸಿದರು.
ಕಾವೇರಿ ನೀರಾವರಿ ನಿಗಮದ ವತಿಯಿಂದ ನಿರ್ಮಿಸಲಾದ ರೂ. ೨ ಕೋಟಿ ವೆಚ್ಚದ ರಸ್ತೆಗೆ ಭೂಮಿಪೂಜೆಯನ್ನು ನೇರವೇರಿಸಿದ ೩ ತಿಂಗಳಿನಲ್ಲಿ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಪೂರ್ಣಗೊಳಿಸಿದ್ದು, ೫ ವರ್ಷದವರೆಗೆ ಗುತ್ತಿಗೆದಾರರೇ ಈ ರಸ್ತೆ ನಿರ್ವಹಣೆ ಮಾಡಬೇಕೆಂದು ಶಾಸಕ ರಂಜನ್ ಹೇಳಿದರು.
ಹೆಚ್ಚುವರಿ ಕಾಮಗಾರಿಗೆ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದ್ದು ೨.೫ ಕೋಟಿ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.
ಈ ಸಂದರ್ಭ ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಸುನಿತ್, ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಕೊಡಗರಹಳ್ಳಿ ಗ್ರಾ.ಪಂ. ಸದಸ್ಯ ಅಬ್ಬಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಬಿಜೆಪಿ ಮುಖಂಡ ಎಂ.ಎನ್. ಕೊಮಾರಪ್ಪ ಮತ್ತಿತರರು ಇದ್ದರು.