ಮಡಿಕೇರಿ, ಜೂ. ೯: ಉದಯೋನ್ಮುಖ ಕ್ರೀಡಾತಾರೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಬಾಲಕಿಯರ ೧೦೦ ಮೀಟರ್ಸ್ ಹರ್ಡಲ್ಸ್ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

ಹರಿಯಾಣದ ಪಂಚಕುಲದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಉನ್ನತಿ ಈ ಸಾಧನೆ ಮಾಡಿದ್ದಾರೆ. ೧೦೦ ಮೀಟರ್ ಹರ್ಡಲ್ಸ್ನಲ್ಲಿ ೧೪ ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಉನ್ನತಿ ಗಮನ ಸೆಳೆದಿದ್ದಾರೆ.

ಉನ್ನತಿ ಅಯ್ಯಪ್ಪ ಚಿನ್ನದ ಸಾಧನೆ

(ಮೊದಲ ಪುಟದಿಂದ) ಅಂರ‍್ರಾಷ್ಟಿçÃಯ ಅಥ್ಲೆಟ್ ಹಾಗೂ ತರಬೇತುದಾರರಾಗಿರುವ ಮಡಿಕೇರಿಯ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿ ಉನ್ನತಿ ವಿವಿಧ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ಭವಿಷ್ಯದ ತಾರೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ಸ್ವತಃ ಪೋಷಕರೇ ಈಕೆಯ ತರಬೇತುದಾರರೂ ಆಗಿದ್ದಾರೆ.