ಮುಳ್ಳೂರು, ಜೂ. ೮: ನ್ಯಾಷಿನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಕುಶಾಲನಗರದ ರೈತ ಭವನದಲ್ಲಿ ನಡೆದ ೬ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಯಲ್ಲಿ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಕರಾಟೆ ಪಟುಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿಗಳಿಸಿದ ಕರಾಟೆ ಪಟುಗಳಾದ ದೀಕ್ಷಾ, ಚಂದನ್, ಅಂಕಿತ, ಮಾನ್ಯ, ಯಶಸ್, ಅಕ್ಷಯ್, ಜಯಂತ್, ಗೌತಮ್, ಯಾದವ್, ವರುಣ್, ಪ್ರೀತಮ್, ಮೋಕ್ಷ, ರುಮನ್, ಯಶಸ್, ಶ್ರೇಯ, ಅಶ್ವಿನ್ ಪ್ರಶಸ್ತಿ ಪಡೆದುಕೊಂಡರೆ, ಬ್ಲಾö್ಯಕ್‌ಬೆಲ್ಟ್ ವಿಭಾಗದಲ್ಲಿ ರಶ್ಮಿತ್, ಮನೀಶ್, ವಿಕ್ಯಾತ್, ತೇಜಸ್, ಆಕಾಶ್, ಶರವಣ, ಅಕಿಲೇಶ್ ಪ್ರಶಸ್ತಿ ಪಡೆದುಕೊಂಡರು.

ತರಬೇತುದಾರರಾಗಿ ಭರತ್, ಸಂಜಯ್, ಜಯಕುಮಾರ್, ಸಂಕೇತ್, ಸಚಿನ್ ಮತ್ತು ಪಳನಿ ಕಾರ್ಯನಿರ್ವಹಿಸಿದರು.