ಶನಿವಾರಸಂತೆ, ಜೂ. ೮: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್ ವಾರ್ಷಿಕೋತ್ಸವ ೪ ದಿನಗಳ ಕಾಲ ವಿವಿಧ ಪೂಜೆಗಳೊಂದಿಗೆ ನೆರವೇರಿತು.
ಧ್ವಜಾರೋಹಣದ ನಂತರ ಬಲಿಪೂಜೆಯೊಂದಿಗೆ ಉತ್ಸವ ಪ್ರಾರಂಭವಾಯಿತು. ಧರ್ಮಗುರುಗಳಾದ ವಿನ್ಸೆಂಟ್ ಮಾರ್ಸೆಲ್ ಪಿಂಟೊ, ಅನಿಲ್ ಲೋಬೊ ಹಾಗೂ ಜಾನ್ ಪೌಲ್ ಅವರು ಬಲಿಪೂಜೆ ಹಾಗೂ ಪ್ರಬೋಧನೆ ನೆರವೇರಿಸಿದರು.
ರಾತ್ರಿ ಏಸುಕ್ರಿಸ್ತ ಮತ್ತು ಮೇರಿಯಮ್ಮನ ಆರಾಧನೆ ಮಾಡಿ, ಗ್ರಾಮದ ಮುಖ್ಯಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಚರ್ಚ್ ಸಭಾಂಗಣದಲ್ಲಿ ಧರ್ಮಾಧ್ಯಕ್ಷ ರೊಜಾರಿಯೊ ಮೆನೆಜಸ್ ನೇತೃತ್ವದಲ್ಲಿ ಮೈಸೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಚಿಕ್ಕಮಗಳೂರು ಧರ್ಮಪ್ರಾಂತ್ಯದ ಮಹಾ ಧರ್ಮಗುರುಗಳು ಹಾಗೂ ಕೊಡಗು ಜಿಲ್ಲೆಯ ವಿವಿಧೆಡೆಯ ಚರ್ಚ್ಗಳ ಧರ್ಮಗುರುಗಳೊಂದಿಗೆ ಸ್ಥಳೀಯ ಸಂತ ಅಂತೋಣಿ ಚರ್ಚ್ ಧರ್ಮಗುರು ಜೇಕಬ್ ಕೊಳನೂರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.