ಮಡಿಕೇರಿ, ಜೂ. ೮: ಕರ್ನಾಟಕ ಪ್ರದೇಶ ಹಿಂದೂ ಯುವ ವಾಹಿನಿ ಹಾಗೂ ಕೊಡಗು ಯುವ ಸೇನೆ ವತಿಯಿಂದ ಹಿಂದೂ ಯುವ ವಾಹಿನಿ ಸಂಸ್ಥಾಪಕರು ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರ ಜನ್ಮ ದಿನಾಚರಣೆಯನ್ನು ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು.ತಲಕಾವೇರಿ: ಯೋಗಿ ಆದಿತ್ಯನಾಥ್ ಜನ್ಮದಿನದ ಪ್ರಯುಕ್ತ ತಲಕಾವೇರಿಯಲ್ಲಿ ಮಾತೆ ಕಾವೇರಿಗೆ ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭ ಅರುಣ್ ಗೌಡ (ವೇಣು), ಪ್ರತೀಶ್, ಮಚ್ಚಮಾಡ ಈಶ್ವರ್, ಬಿದ್ದಂಡ ಸೃಜನ್, ಭುವನ್ ಗೌಡ ಹಾಜರಿದ್ದರು.

ಮಡಿಕೇರಿಯ ಬನ್ನಿಮಂಟಪದಲ್ಲಿ ಯುವ ಸೇನೆ ಹಾಗೂ ಸ್ವಸ್ತಿಕ್ ಯುವ ವೇದಿಕೆ ಕಾರ್ಯಕರ್ತರು ಸ್ವಚ್ಛತೆ ನೆರವೇರಿಸಿದರು. ಈ ಸಂದರ್ಭ ಬೈರೇಟಿರ ಅಜಿತ್ ಪೂಣಚ್ಚ, ಶಾಂತೆಯAಡ ಕರಣ್ ಉತ್ತಪ್ಪ, ವಿಕ್ರಂ ವಿಜಯಕುಮಾರ್, ಕೊಳುವಂಡ ಪಾಪಿನ್ ಪೂಣಚ್ಚ, ಗಣೇಶ್, ಜಯನ.ಡಿ, ಮನೀಷ್ ಎಸ್, ಪ್ರೀತಮ್ ಹಾಗೂ ಕಾರ್ಯಕರ್ತರು ಹಾಜರಿದ್ದರು.ಕುಶಾಲನಗರ: ಕುಶಾಲನಗರದ ಗಣಪತಿ ದೇವಸ್ಥಾನದಲ್ಲಿ ಯುವಸೇನೆಯ ಕುಶಾಲನಗರ ಸಮಿತಿ ಅಧ್ಯಕ್ಷ ಶರಣ್ ನೇತೃತ್ವದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭ ಮಂಜು ಬೆಳ್ಳುಳ್ಳಿ, ವಿನು ಉಮಾಶಂಕರ್, ಜಯವರ್ಧನ್, ಮಧುಸೂದನ್ ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು.ಸೋಮವಾರಪೇಟೆ: ಸೋಮವಾರಪೇಟೆಯ ಗಣಪತಿ ದೇವಸ್ಥಾನದಲ್ಲಿ ಸೇರಿದ ಕಾರ್ಯಕರ್ತರು ಮಹಾಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಸಿಹಿ ವಿತರಿಸಲಾಯಿತು.

ಈ ಸಂದರ್ಭ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯರಾದ ಬಿ.ಡಿ. ಮಹೇಶ್, ಕಾರ್ಯಕರ್ತರಾದ ಮಂಜುನಾಥ್ ಯತೀಶ್ ಎಂ.ಎA. ರೇಣುಕುಮಾರ್ ಪ್ರೀತಮ್ ಲಿಖಿತ್ ಪ್ರಭಾಕರ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.ಶನಿವಾರಸಂತೆ: ಶನಿವಾರಸಂತೆಯ ವಿಜಯ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಆಸ್ಪತ್ರೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಂದೀಪ್, ದಿನೇಶ್, ರಘು, ಅಶ್ವತ್ಥ್, ಪ್ರಣೀತ್, ರಕ್ಷಿತ್, ಸೋಮಶೇಖರ್ ಪೂಜಾರಿ ಇನ್ನಿತರ ಕಾರ್ಯಕರ್ತರು ಹಾಜರಿದ್ದರು. ಪೊನ್ನಂಪೇಟೆಯಲ್ಲೂ ಆಚರಣೆ ನಡೆಯಿತು.