ಮಡಿಕೇರಿ, ಜೂ. ೮: ಸಾಮಾಜಿಕ ಅರಣ್ಯ ವಲಯದ ಹೊದ್ದೂರು-ವಾಟೆಕಾಡು ಇಲಾಖಾ ಸಸ್ಯ ಕ್ಷೇತ್ರದಲ್ಲಿ ೨೦೨೨-೨೩ನೇ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣು-ಹಂಪಲು ಹಾಗೂ ಕಾಡು ಜಾತಿಯ ಸಸಿಗಳನ್ನು ಬೆಳೆಸಲಾಗಿದ್ದು, ಮಹಾಗನಿ, ಶ್ರೀಗಂಧ, ರಕ್ತ ಚಂದನ, ಶಿವಾನೆ, ಸಿಲ್ವರ್, ತೇಗ, ಬೀಟೆ, ಮಳೆಮರ, ನೇರಳೆ, ಹೊನ್ನೆ, ಸುಬಾಬುಲ್, ಕಾಡುಬಾದಮಿ, ಹಲಸು, ಗಜ್ಜಿಗ, ಮತ್ತಿ, ಬಸವನಪಾದ, ಧೂಪ, ಹೆಬ್ಬಲಸು, ಗಸಗಸೆ, ನೆಲ್ಲಿ, ಹೆಬ್ಬಿದಿರು, ಗಸಗಸೆ, ಕಾಡುಮಾವು, ನಂದಿ, ಪುನರ್ಪುಳಿ, ಆಲ, ಅರಳಿ, ಮುಂತಾದ ಸಸಿಗಳು ಲಭ್ಯವಿದ್ದು, ರೈತ ಫಲಾನುಭವಿಗಳಿಗೆ ರೂ. ೧ ಹಾಗೂ ರೂ. ೩ ಪ್ರತಿ ಸಸಿಗೆ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.
ರೈತರು ತಮ್ಮ ಆಧಾರ್ ಪ್ರತಿ, ರಾಷ್ಟಿçÃಕೃತ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ತಮ್ಮ ಜಮೀನಿನ ಆರ್ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮಯೂರ್ ಕಾರವೇಕರ್, ವಲಯ ಅರಣ್ಯಾಧಿಕಾರಿ ೭೮೨೯೩೦೧೧೨೭, ದರ್ಶಿನಿ, ಉಪ ವಲಯ ಅರಣ್ಯಾಧಿಕಾರಿ ೯೭೪೩೭೨೨೬೪೬, ಚಂದ್ರಾವತಿ, ಅರಣ್ಯ ರಕ್ಷಕಿ ೭೯೭೫೯೫೨೩೮೮ನ್ನು ಸಂಪರ್ಕಿಸಬಹುದು ಎಂದು ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.