ಭಾಗಮಂಡಲ, ಜೂ. ೮: ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮಾವನ ಸಹಾಯದಿಂದ ತನ್ನ ಪತಿಯನ್ನು ಕೊಲೆ ಮಾಡಿ ಸಹಜ ಸಾವು ಎಂಬAತೆ ಬಿಂಬಿಸಿದ ಪ್ರಕರಣ ಅಂತ್ಯ ಕಂಡಿದೆ.

ತಣ್ಣಿಮಾನಿ ಗ್ರಾಮದ ಯುವಕ ಡ್ಯಾನಿ (೨೯) ಮೇ ೨೮ರಂದು ಸಾವಿಗೀಡಾಗಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಅಸಹಜ ಸಾವು ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಪತ್ನಿ ಅನುಪ್ರಿಯಾ (೨೫) ತಂದೆ ಸುಗುಣ (೫೩) ಹಾಗೂ ಯುವಕನೋರ್ವನನ್ನು ವಿಚಾರಣೆಗೆ ಒಳಪಡಿಸಿದ್ದರು. ತೀವ್ರ ವಿಚಾರಣೆ ಸಂದರ್ಭ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಮೇ ೨೮ರಂದು ಡ್ಯಾನಿ ಕುಡಿತದ ಅಮಲಿನಲ್ಲಿದ್ದು ಅವ್ಯಾಚ್ಯ ಶಬ್ದಗಳಿಂದ ತಂದೆ ಸುಗುಣ ಅವರನ್ನು ನಿಂದಿಸಿದ ಸಂದರ್ಭ ತಂದೆ ಮಗನ ಮೇಲೆ ಹಲ್ಲೆ ಮಾಡಿದರು. ಡ್ಯಾನಿ ಕುಸಿದುಬಿದ್ದ ಸಂದರ್ಭ ಆತನ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದಳು. ಪತಿ ವಿಪರೀತ ಕಿರುಕುಳ ನೀಡುತ್ತಿದ್ದು ಇದರಿಂದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪತ್ನಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ವಿವಾಹಕ್ಕೂ ಮುನ್ನ ಡ್ಯಾನಿ ಹಾಗೂ ಆತನ ತಂದೆ ನಡುವೆ ಕಲಹ ನಡೆಯುತ್ತಿತ್ತು. ಆ ಬಳಿಕ ಮನೆ ತೊರೆದು ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ಇದ್ದು ಐಟಿಐ ಪೂರೈಸಿ ಎ¯ಕ್ಟಿçಕಲ್ ಕೆಲಸ ನಿರ್ವಹಿಸುತ್ತಿದ್ದ. ಆಗ ಪಿಯುಸಿ ಓದುತ್ತಿದ್ದ ಅನುಪ್ರಿಯಾಳನ್ನು ಪ್ರೇಮಿಸಿ ರಿಜಿಸ್ಟರ್ ವಿವಾಹವಾಗಿದ್ದ. ಬಳಿಕ ಬಿಕಾಂ ಓದಿಸಿದ್ದ. ಒಟ್ಟಿಗೆ ಸಂಸಾರ ನಡೆಯುತ್ತಿತ್ತು. ನಂತರ ಅನುಪ್ರಿಯ ತಲಕಾವೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಆಗಿ ಕೆಲಸ ನಿರ್ವಹಿಸುತ್ತಿದ್ದಳು.

ಪೊಲೀಸರ ವಿಚಾರಣೆ ಸಂದರ್ಭ ‘ತಾನು ಶಿಕ್ಷಣ ಕೊಡಿಸಿದ್ದು, ಈಗ ನಿನ್ನ ಬಳಿ ಇರುವ ಹಣವನ್ನು ಕುಡಿತಕ್ಕಾಗಿ

(ಮೊದಲ ಪುಟದಿಂದ) ನೀಡುವಂತೆ ಗಂಡ ಕಿರುಕುಳ ನೀಡುತ್ತಿದ್ದ; ಹಣಕ್ಕಾಗಿ ಹಲ್ಲೆ ಮಾಡುತ್ತಿದ್ದ ಎಂದು ಅನುಪ್ರಿಯಾ ಹೇಳಿಕೆ ನೀಡಿದ್ದಾಳೆ. ‘ಪತಿಯನ್ನು ಕೊಲೆ ಮಾಡಿ ಅಂತ್ಯಸAಸ್ಕಾರ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡು ಹೇಗೆ ಬದುಕಲಿ ತಾನು ಸಾಗುತ್ತಿದೆ ಎಂದು ರೋಧಿಸುತ್ತಿದ್ದ ಪತ್ನಿ ಹಾಗೂ ತಂದೆ ನನ್ನಿಂದ ನಿನ್ನ ಬಾಯಿಗೆ ನೀರೂರಿಸುವಂತೆ ಆಯಿತಲ್ಲ’ ಎಂದು ದುಃಖಿಸುತ್ತಿದ್ದ ದೃಶ್ಯವು ಯಾವುದೇ ಸಂಶಯಕ್ಕೆ ಆಸ್ಪದ ನೀಡದಂತೆ ಇತ್ತು.

ಕೊಲೆಗೆ ಮೊದಲೇ ಸಂಚು : ಪತಿಯ ಕೊಲೆ ನಡೆಸಲು ಪತ್ನಿ ಭಾನುಪ್ರಿಯ ಮೊದಲೇ ಸಂಚು ಮಾಡಿದ್ದುದು ಕಂಡುಬAದಿದೆ. ಗೂಗಲ್‌ನಲ್ಲಿ ಸರ್ಚ್ ಮಾಡಿದ್ದು, ಕೊಲೆ ಮಾಡುವ ಸಂದರ್ಭ ‘ಕತ್ತು ಹಿಸುಕಿದ ವೇಳೆ ಯಾವುದೇ ಬೆರಳಚ್ಚು ಬೀಳದಂತೆ ಮಾಡುವುದು ಹೇಗೆ’ ಎಂಬುದರ ಕುರಿತು ಗೂಗಲ್‌ನಲ್ಲಿ ಹುಡುಕಿದ್ದು ಕಂಡುಬAದಿದೆ.

ಮಾವನ ಸಹಕಾರದಿಂದ ಪತಿಯನ್ನು ಹತ್ಯೆ ಮಾಡಿದ ಪ್ರಕರಣವನ್ನು ಭಾಗಮಂಡಲ ಠಾಣಾ ಪೊಲೀಸರು ಬೇಧಿಸಿದ್ದಾರೆ. ಇದೀಗ ಅನುಪ್ರಿಯಾ ಹಾಗೂ ಸುಗುಣ ಪೊಲೀಸರ ಅತಿಥಿಯಾಗಿದ್ದಾರೆ. ಮೃತ ಡ್ಯಾನಿಗೆ ಒಂದು ಗಂಡು ಮಗುವಿದೆ.