ಮಡಿಕೇರಿ ಜೂ.೮: ಕೇಂದ್ರ ಸರಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ತಾ.೯ ರ ಗುರುವಾರ ಮಧ್ಯಾಹ್ನ ೧೨:೩೦ಕ್ಕೆ ಕೊಡಗಿನ ಪಾಲಿಬೆಟ್ಟಕ್ಕೆ ನಿತಿನ್ ಗಡ್ಕರಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಚಿವರು ನಾಲ್ಕು ದಿನಗಳ ಕಾಲ ಕೊಡಗಿನಲ್ಲಿದ್ದು ಬಳಿಕ ನಾಗ್ಪುರಕ್ಕೆ ತೆರಳಲಿದ್ದಾರೆ. ಸಚಿವರ ಖಾಸಗಿ ಪ್ರವಾಸ ಇದಾಗಿದ್ದು, ಯಾವದೇ ಅಧಿಕೃತ ಕಾರ್ಯಕ್ರಮಗಳಿರುವುದಿಲ್ಲ.
ಗುರುವಾರದಿಂದ ಮುಂದಿನ ಸೋಮವಾರದವರೆಗೆ ಕೊಡಗಿನಲ್ಲೇ ಸಚಿವರು ವಾಸ್ತವ್ಯ ಹೂಡಲಿದ್ದಾರೆ. ಗುರುವಾರ ಸಚಿವ ನಿತಿನ್ ಗಡ್ಕರಿ ಅವರು ಕೊಡಗಿನ ಪಾಲಿಬೆಟ್ಟದ ಥನೀರ್ಹುಲ್ಲಾ ಬಂಗ್ಲೆಯಲ್ಲಿ ತಂಗಲಿದ್ದಾರೆ.
ಕೇAದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೊಡಗು ಪ್ರವಾಸ
(ಮೊದಲ ಪುಟದಿಂದ) ಶುಕ್ರವಾರ ಮಡಿಕೇರಿಯ ತಾಜ್ ರೆಸಾರ್ಟ್ಗೆ ಆಗಮಿಸಲಿರುವ ಸಚಿವರು ಶುಕ್ರವಾರ, ಶನಿವಾರ, ಭಾನುವಾರ ತಾಜ್ ರೆಸಾರ್ಟ್ನಲ್ಲಿ ತಂಗುತ್ತಾರೆ. ಬಳಿಕ ಸೋಮವಾರ ಮುಂಜಾನೆ ಬೆಂಗಳೂರು ಮಾರ್ಗವಾಗಿ ನಾಗ್ಪುರಕ್ಕೆ ತೆರಳಲಿದ್ದಾರೆ ಎಂದು “ಶಕ್ತಿ” ಗೆ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.