ಆಲೂರುಸಿದ್ದಾಪುರ, ಜೂ. ೮: ಸೋಮವಾರಪೇಟೆ ತಾಲೂಕಿನ ಮಾಲಂಬಿ ಗ್ರಾಮದಲ್ಲಿ ಕೊಳೆತ ಸ್ಥಿತಿಯಲ್ಲಿ ಪುರಷನ ಮೃತ ದೇಹ ಪತ್ತೆಯಾಗಿದೆ. ತಮಿಳುನಾಡು ಮೂಲದ ಮಾಲಂಬಿ ಗ್ರಾಮದ ನಿವಾಸಿ ಚಂದ್ರು (೩೫) ವಿನ ಮೃತ ದೇಹ ಎಂದು ಗುರುತಿಸಲಾಗಿದೆ.

ಚಂದ್ರು ಕುಟುಂಬ ತಮಿಳುನಾಡು ಮೂಲದವರಾಗಿದ್ದು ಹಲವಾರು ವರ್ಷಗಳಿಂದ ಮಾಲಂಬಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಚಂದ್ರು ವಿವಾಹಿತನಾಗಿದ್ದು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಇತನ ಪತ್ನಿ ತಮಿಳುನಾಡಿನಲ್ಲಿರುವ ತವರು ಮನೆಯಲ್ಲಿದ್ದರು. ಕೆಲವು ದಿನಗಳಿಂದ ಚಂದ್ರು ಒಬ್ಬಂಟಿಯಾಗಿ ಮನೆಯಲ್ಲಿದ್ದು, ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಮಂಗಳವಾರ ಸಂಜೆ ಚಂದ್ರು ವಾಸವಾಗಿದ್ದ ಮನೆಯೊಳಗಿನಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಬಾಗಿಲು ತೆಗೆದು ನೋಡಿದಾಗ ಚಂದ್ರು ಮಲಗಿದ್ದಲ್ಲೇ ಸಾವನ್ನಪ್ಪಿರುವುದು ತಿಳಿದುಬಂದಿದೆ. ಈ ಕುರಿತು ಗ್ರಾಮಸ್ಥರು ಶನಿವಾರಸಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಆಲೂರುಸಿದ್ದಾಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ಮೃತಹೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.