ಮಡಿಕೇರಿ, ಜೂ. ೮: ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಸಂಪರ್ಕಿಸುವ ಕೂಟಿಯಾಲ ರಸ್ತೆ - ಸೇತುವೆ ವಿಚಾರಕ್ಕೆ ಸಂಬAಧಿಸಿದAತೆ ಹಲವು ಗೊಂದಲಗಳು ಇನ್ನೂ ಮುಗಿದಿಲ್ಲ. ಆದರೆ ಸದ್ಯದಲ್ಲಿಯೇ ಈ ಕಾಮಗಾರಿ ಮತ್ತೆ ಪ್ರಾರಂಭವಾಗಲಿದೆ ಎಂಬ ಹೇಳಿಕೆಗಳು ಇದೀಗ ಹಲವು ಪ್ರಶ್ನೆಗಳಿಗೆ ಕಾರಣವಾಗುತ್ತಿದೆ.
ಅರಣ್ಯ ಇಲಾಖೆಯ ಅಡ್ಡಿಯ ಕಾರಣದಿಂದಾಗಿ ಕಳೆದ ೨೫ ವರ್ಷಗಳಿಂದಲೂ ಈ ಯೋಜನೆ ನೆನೆಗುದಿಯಲ್ಲೇ ಇದೆ. ಉದ್ದೇಶಿತ ರಸ್ತೆ ನಿರ್ಮಾಣಕ್ಕೆ ಸಂಬAಧಿಸಿದAತೆ ಕೆಲವು ಮೀಟರ್ಗಳಷ್ಟು ಅಂತರ ಮೀಸಲು ಅರಣ್ಯದೊಳಗೆ ಬರಲಿದೆ ಎಂಬ ಕಾರಣದಿಂದಾಗಿ ಇದು ತಡೆಹಿಡಿಯಲ್ಪಟ್ಟಿದೆ. ರೂ. ೭೦ ಲಕ್ಷದ ಸೇತುವೆ ಬರಪೊಳೆಗೆ ಅಡ್ಡಲಾಗಿ ನಿರ್ಮಾಣಗೊಂಡು ಎರಡು ದಶಕಗಳೇ ಕಳೆದಿವೆ. ಆದರೆ ಇನ್ನೂ ಯಾವುದೇ ಪ್ರಗತಿಯಾಗಿಲ್ಲ. ಈ ನಡುವೆ ಕೆಲವರ ಪ್ರಯತ್ನದ ಫಲವಾಗಿ ರಾಜ್ಯ ಸರಕಾರದಿಂದ ಇತ್ತೀಚೆಗೆ ಕೂಡುರಸ್ತೆ ನಿರ್ಮಾಣಕ್ಕೆ ಎಂದು ರೂ. ೩.೦೧ ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆಯೂ ಆಗಿದೆ.
ಆದರೆ ಅರಣ್ಯ ಪ್ರದೇಶದ ವಿವಾದ ಇತ್ಯರ್ಥವಾಗದೆ ಯಾವ ರೀತಿಯಲ್ಲಿ ಇದು ಕಾರ್ಯಗತವಾಗಬಹುದು ಎಂಬದು ಈಗಿನ ಪ್ರಶ್ನೆಯಾಗಿದೆ. ಈ ಅನುದಾನ ಪ್ರಕಟಗೊಂಡ ಬೆನ್ನಲ್ಲೇ ಇದೀಗ ಕೆಲವು ಪ್ರಮುಖರು ಸದ್ಯದಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ಮೂಲ ಸಮಸ್ಯೆಯೇ ಬಗೆ ಹರಿಯದೆ ಅನುದಾನದ ಬಳಕೆ ಹೇಗೆ ಎಂಬ ಗೊಂದಲ ಎದುರಾಗಿದೆ.
ಪ್ರಸ್ತಾವನೆಯೇ ಆಗಿಲ್ಲ
ಈ ರಸ್ತೆಗೆ ಸಂಬAಧಿಸಿದAತೆ ಯೂಸರ್ ಏಜೆನ್ಸಿ (ಬಳಕೆದಾರ ಸಂಸ್ಥೆ) ಮೂಲಕ ಅರಣ್ಯ ಇಲಾಖೆಗೆ ಆನ್ಲೈನ್ ಪ್ರಸ್ತಾವನೆ ಸಲ್ಲಿಕೆಯಾಗಬೇಕಾಗಿದೆ. ಆದರೆ ಈ ತನಕವೂ ಯಾರಿಂದಲೂ ಅರಣ್ಯ ಇಲಾಖೆಗೆ ಪ್ರಸ್ತಾವನೆಯೇ ಸಲ್ಲಿಸಲ್ಪಟ್ಟಿಲ್ಲ. ಇದನ್ನು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಖಚಿತಪಡಿಸಿದ್ದಾರೆ.
ಸರಕಾರ ಪ್ರಸ್ತುತ ರಸ್ತೆ ಕೆಲಸಕ್ಕೆ ಎಂದು ಅನುದಾನ ಪ್ರಕಟಿಸಿದ್ದು, ಪಂಚಾಯತ್ ರಾಜ್ ಇಲಾಖೆಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಮೂಲಕ ಇದೀಗ ಅನಿವಾರ್ಯವೆಂಬAತೆ ಇದಕ್ಕೆ ಸಿದ್ಧತೆ ನಡೆಸಲಾಗುತ್ತಿದೆಯಾದರೂ ಇನ್ನೂ ಪ್ರಸ್ತಾವನೆ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ.
ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸುವ ಜಾಗಕ್ಕೆ ಬದಲಾಗಿ ಕಂದಾಯ ಇಲಾಖೆಯ ಮೂಲಕ ಬದಲಿ ಜಾಗವನ್ನು ಗುರುತಿಸಿ ನೀಡಬೇಕಾಗಿದೆ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯ ಮೂಲಕ ಬದಲಿ ಜಾಗವನ್ನು ಗುರುತಿಸಿ ಅದರ ಪೂರ್ಣ ವಿವರ
(ಮೊದಲ ಪುಟದಿಂದ) ಸಹಿತವಾಗಿ ಆನ್ಲೈನ್ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಪೂರ್ಣ ವಿವರ ಇಲ್ಲದಿದ್ದಲ್ಲಿ ಪ್ರಸ್ತಾವನೆ ತಿರಸ್ಕೃತಗೊಳ್ಳಲಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ವಾಸ್ತವ ಹೀಗಿರುವಾಗ ನಿಯಮ ಪಾಲನೆಯಾಗದೆ ಅಥವಾ ವಿವಾದ ಇತ್ಯರ್ಥವಾಗದೆ ಕೆಲಸ ಪ್ರಾರಂಭವಾಗಲಿದೆ ಎಂಬ ಹೇಳಿಕೆಗಳಲ್ಲಿನ ಸತ್ಯಾಂಶವೆಷ್ಟು ಎಂಬದು ಚರ್ಚೆಗೆ ಗ್ರಾಸವಾಗುತ್ತಿದೆ. ೧೯೯೬ರಿಂದಲೇ ಈ ಯೋಜನೆ ಅರಣ್ಯದೊಳಗೆ ಪಾಳುಬಿದ್ದಂತಾಗಿದೆ ಈ ತನಕ ಯಾವುದೇ ಪ್ರಯತ್ನಗಳು ಯಶಸ್ಸು ಕಂಡಿಲ್ಲ. ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.
‘ಶಕ್ತಿ’ಗೆ ತಿಳಿದು ಬಂದAತೆ ರಾಜ್ಯದಲ್ಲಿ ಅರಣ್ಯ ಪ್ರದೇಶದಲ್ಲಿನ ಕಾಮಗಾರಿಗೆ ಸಂಬAಧಿಸಿದAತೆ ಸುಮಾರು ೨೩ ಯೋಜನೆಗಳ ಪ್ರಸ್ತಾಪ ಇದ್ದು, ಇದರಲ್ಲಿ ಕೂಟಿಯಾಲದ ವಿಚಾರವೇ ಇಲ್ಲ. ಕೆಲವು ಮೂಲಗಳ ಪ್ರಕಾರ ಈ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆಗಳೇ ಇಲ್ಲ ಎಂದೂ ಹೇಳಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಈ ಹಿಂದೆ ಅರಣ್ಯ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಸಾರ್ವಜನಿಕ ಉದ್ದೇಶಕ್ಕೆ ಅಲ್ಲ. ಬದಲಿಗೆ ಅರಣ್ಯ ಸಂರಕ್ಷಣೆಗೆ ಇಲಾಖೆಗೆ ಗಸ್ತು ನಡೆಸಲು ಇದಕ್ಕೆ ಅವಕಾಶ ನೀಡಿರುವದಾಗಿಯೂ ಹೇಳಲಾಗುತ್ತಿದೆ.
ಏನೇ ಇದ್ದರೂ ಸುಮಾರು ರೂ. ೮೦ ಲಕ್ಷದ ಸೇತುವೆ ಮಾತ್ರ ಅರಣ್ಯದೊಳಗೆ ಪಾಳುಬಿದ್ದಿದೆ. ಪ್ರಸ್ತುತದ ಕಾನೂನಿನ ತೊಡಕು ನಿವಾರಣೆಯಾಗದೆ ಇದು ಪೂರ್ಣಗೊಳ್ಳುವುದು ಸದ್ಯಕ್ಕಂತೂ ಕನಸಿನ ಮಾತು ಎಂಬದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ನಡೆಯುತ್ತಿರುವ ಪ್ರಯತ್ನಗಳು ಯಶಸ್ಸು ಕಾಣಲಿದೆಯೇ ಎಂಬದನ್ನು ಕಾದುನೋಡಬೇಕಷ್ಟೆ ಹೊರತು ಯೋಜನೆಗೆ ಹಸಿರು ನಿಶಾನೆಯಂತೂ ಸದ್ಯಕ್ಕೆ ದೊರೆತಿಲ್ಲ ಎಂಬದು ಸುಸ್ಪಷ್ಟ.