ಗೋಣಿಕೊಪ್ಪಲು, ಜೂ.೭: ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕಾಣದೆ ಹಲವು ದಶಕಗಳೇ ಕಳೆದಿರುವ ಗ್ರಾಮಾಂತರ ಪ್ರದೇಶವಾದ ಬಿರುನಾಣಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತ ಸಂಘದ ಸಮ್ಮುಖದಲ್ಲಿ ಸಭೆ ನಡೆಸಿದರು. ಸಭೆಗೆ ರೈತ ಸಂಘದ ಮುಖಾಂತರ ಚೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬರಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು.
ಬಿರುನಾಣಿ, ಪೂಕಳ, ತೆರಾಲು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ನಿರಂತರ ಸಮಸ್ಯೆ ಎದುರಾಗುತ್ತಿರುವುದನ್ನು ಮನಗಂಡ ಈ ಭಾಗದ ರೈತ ಸಂಘದ ಸದಸ್ಯರು ಒಟ್ಟಾಗಿ ಸೇರಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಭೆಗೆ ಆಗಮಿಸಿದ ಚೆಸ್ಕಾಂನ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ನೀಡಿದ ಭರವಸೆಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಕಾಡುತ್ತಿರುವುದನ್ನು ಮನಗಂಡ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಚೆಸ್ಕಾಂನ ಹಿರಿಯ ಅಧಿಕಾರಿಗಳನ್ನು ಸಭೆಗೆ ಬರಮಾಡಿಕೊಂಡು ರೈತರು ತಮ್ಮ ಭಾಗದಲ್ಲಿ ನಿರಂತರ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು. ವೈಯಕ್ತಿಕ ಅರ್ಜಿಗಳನ್ನು ಅಧಿಕಾರಿಗಳ ಮುಂದಿಟ್ಟು ಕೂಡಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಅಲ್ಲದೆ ರೈತರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಇಡಲು ಅವಕಾಶ ಕಲ್ಪಿಸಿದರು.
ನಿರಂತರ ಲೋ ವೋಲ್ಟೇಜ್, ಅತೀ ಕೆಳಮಟ್ಟದಿಂದ ವಿದ್ಯುತ್ ತಂತಿ ಹಾದು ಹೋಗಿರುವುದು, ರಾತ್ರಿಯ ವೇಳೆಯಲ್ಲಿ ಸಂಪೂರ್ಣ ವಿದ್ಯುತ್ ಕಡಿತ, ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳು, ಸೇರಿದಂತೆ ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ಕಾಣದೆ ತಿಂಗಳುಗಟ್ಟಲೆ ಗ್ರಾಮದ ಜನತೆ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಗ್ರಾಮಸ್ಥರು ಬೆಳಕು ಚೆಲ್ಲಿದರು. ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಚೆಸ್ಕಾಂನ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಇನ್ನು ಒಂದು ತಿಂಗಳ ನಿರಂತರ ಲೋ ವೋಲ್ಟೇಜ್, ಅತೀ ಕೆಳಮಟ್ಟದಿಂದ ವಿದ್ಯುತ್ ತಂತಿ ಹಾದು ಹೋಗಿರುವುದು, ರಾತ್ರಿಯ ವೇಳೆಯಲ್ಲಿ ಸಂಪೂರ್ಣ ವಿದ್ಯುತ್ ಕಡಿತ, ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳು, ಸೇರಿದಂತೆ ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ಕಾಣದೆ ತಿಂಗಳುಗಟ್ಟಲೆ ಗ್ರಾಮದ ಜನತೆ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಗ್ರಾಮಸ್ಥರು ಬೆಳಕು ಚೆಲ್ಲಿದರು. ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಚೆಸ್ಕಾಂನ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಇನ್ನು ಒಂದು ತಿಂಗಳ (ಮೊದಲ ಪುಟದಿಂದ) ಸೂಚನೆ ನೀಡಿದರು. ಒಂದು ತಿಂಗಳೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಚೆಸ್ಕಾಂನ ಸಿಬ್ಬಂದಿಗಳು ಬಿರುನಾಣಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. ಸಿಬ್ಬಂದಿಗಳು ಪ್ರತಿನಿತ್ಯ ನಿರ್ವಹಿಸುವ ಕೆಲಸದ ಮಾಹಿತಿಗಳನ್ನು ನೀಡುವಂತೆ ಸೂಚನೆ ನೀಡಿದರು. ರಾತ್ರಿ ವೇಳೆಯಲ್ಲಿ ವಿದ್ಯುತ್ ನಿಲುಗಡೆಗೊಂಡಲ್ಲಿ ಮುಂಜಾನೆಯೇ ವಿದ್ಯುತ್ ಸರಬರಾಜಾಗುತ್ತಿರುವ ಬಗ್ಗೆ ಗ್ರಾಮಸ್ಥರು ಬೆಳಕು ಚೆಲ್ಲಿದರು. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರೀಮಂಗಲದಿAದ ಬಿರುನಾಣಿವರೆಗೆ ಇರುವ ಎಕ್ಸ್ಪ್ರೆಸ್ ವಿದ್ಯುತ್ ಲೈನ್ಅನ್ನು ದುರಸ್ತಿ ಪಡಿಸುವುದು ಮೊದಲ ಆದ್ಯತೆಯಾಗಿದೆ. ಇದರಿಂದ ಇಲ್ಲಿಯ ಸಮಸ್ಯೆಗೆ ಪರಿಹಾರ ಸಿಗಲಿದೆ.ಈ ಭಾಗಕ್ಕೆಖುದ್ದಾಗಿ ಆಗಮಿಸಿ ಪರಿಶೀಲನೆ ನಡೆಸುವುದಾಗಿ ಚೆಸ್ಕಾಂ ಇಇ ಅಶೋಕ್ ಸ್ಪಷ್ಟಪಡಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಈ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಇರುವುದರಿಂದ ರೈತ ಸಂಘ ಆಯೋಜಿಸಿರುವ ಸಭೆಗೆ ಆಗಮಿಸಿ ತಮ್ಮ ಅಹವಾಲುಗಳನ್ನು ತಮ್ಮ ಅಧಿಕಾರಿಗಳ ಮುಂದೆ ಇಟ್ಟಿದ್ದಾರೆ. ಇವುಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸಬೇಕು. ತಪ್ಪಿದಲ್ಲಿ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗುವುದು. ವಿದ್ಯುತ್ ಪೂರೈಕೆಗೆ ಬೇಕಾದ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕೂಡಲೇ ಸರಬರಾಜು ಮಾಡಬೇಕು. ಅಗತ್ಯವಿದ್ದಲ್ಲಿ ಬೇರೆಡೆಯಿಂದ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನೇಮಕಗೊಳಿಸಿ ಕೆಲಸ ನಿರ್ವಹಿಸುವಂತೆ ಆಗ್ರಹಿಸಿದರು.
ರೈತ ಸಂಘದ ಬಿರುನಾಣಿ ಭಾಗದ ಅಧ್ಯಕ್ಷ ಕರ್ತಮಾಡ ಸುಜಾಪೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿನ ವಿದ್ಯುತ್ ಸಮಸ್ಯೆ ಹಲವು ದಶಕಗಳಿಂದ ಮುಂದುವರೆದಿದೆ. ಪೂರ್ಣ ಪ್ರಮಾಣದ ವಿದ್ಯುತ್ ಕಾಣದೆ ವರ್ಷಗಳೇ ಕಳೆದಿವೆ. ಇದೀಗ ರೈತ ಸಂಘದ ಮೂಲಕ ಸಭೆ ನಡೆಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ನೀಡಿದ ಭರವಸೆಯು ಹುಸಿಗೊಳ್ಳದೆ ನಿಗದಿತ ಸಮಯದಲ್ಲಿ ಕೆಲಸ ಸಂಪೂರ್ಣಗೊಳಿಸುವAತೆ ತಿಳಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮಾತನಾಡಿ ರೈತಸಂಘದ ಸಭೆಯಲ್ಲಿ ವಿಶ್ವಾಸವಿಟ್ಟು ಗ್ರಾಮಸ್ಥರು ತಮ್ಮ ನೂರಾರು ಅಹವಾಲನ್ನು ಲಿಖಿತ ರೂಪದಲ್ಲಿ ತಂದಿದ್ದಾರೆ. ಇವುಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ರೈತ ಸಂಘದ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್ ಮಾತನಾಡಿ ಈ ಭಾಗದಲ್ಲಿ ವಿದ್ಯುತ್ ನಿಲುಗಡೆಯಿಂದ ಮೊಬೈಲ್ ಟವರ್ಗಳು ಕರ್ತವ್ಯ ನಿರ್ವಹಿಸುತ್ತಿಲ್ಲ ಹೀಗಾಗಿ ಈ ಭಾಗದ ಜನತೆಗೆ ಅನೇಕ ಸಮಸ್ಯೆಗಳು ಉದ್ಭವಿಸಲು ಕಾರಣವಾಗಿದೆ ಎಂದರು. ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ರೈತ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಬಲ್ಯಮೀದೇರಿರ ಕವಿತರಾಮು ಸೇರಿದಂತೆ ಅನೇಕ ಮುಖಂಡರು ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು.
ಸಭೆಯಲ್ಲಿ ಚಟ್ಟಂಗಡ ಕಂಬ ಕಾರ್ಯಪ್ಪ, ಅಪ್ಪಚಂಗಡ ಮೋಟಯ್ಯ, ಕರ್ತಮಾಡ ಚಿತ್ರ ಪೊನ್ನಪ್ಪ, ರಾಯ್, ನಂದಸುನAದ, ಬೊಟ್ಟಂಗಡ ತಿಲಕ್, ಕುಪ್ಪಣ್ಣಮಾಡ ಪ್ರೀತಂ, ಕವಿತರಾಮು, ಅಣ್ಣಳಮಾಡ ಮುತ್ತಣ್ಣ, ಚಿಣ್ಣಪ್ಪ, ಲಾಲಾ ಅಪ್ಪಣ್ಣ, ಕಾಳಿಮಾಡ ರಸಿಕ, ಕಳ್ಳಂಗಡ ಪ್ರಕಾಶ್, ಕುಪ್ಪುಡೀರ ಪೊನ್ನು, ಜಿತ್ತು, ಮಂಡAಗಡ ಯೋಗೇಶ್, ಕಳಕಂಡ ಚೋಮಣಿ, ಅಣ್ಣಳಮಾಡ ಮಂಜು, ಬಲ್ಯಮೀದೇರಿರ ಅನಿತಾ ಮಾಚಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಚಂಗುಲAಡ ಸೂರಜ್ ಸ್ವಾಗತಿಸಿ ವಂದಿಸಿದರು.
(ವರದಿ: ಹೆಚ್.ಕೆ. ಜಗದೀಶ್)