ಕೋವರ್‌ಕೊಲ್ಲಿ ಇಂದ್ರೇಶ್

ಸುಳ್ಯ, ಜೂ.೬ : ಇಲ್ಲಿನ ಬಂಟ್ವಾಳ - ಮೈಸೂರು ರಾಷ್ಟಿçÃಯ ಹೆದ್ದಾರಿಯ ಸುಳ್ಯದಲ್ಲಿ ವ್ಯಕ್ತಿಯ ಮೇಲೆ ವಾಹನವೊಂದರಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ ೧೦.೩೦ ಗಂಟೆ ಸುಮಾರಿಗೆ ನಡೆದಿದೆ. ಯುವಕನ ಹತ್ಯೆ ನಡೆಸಲೆಂದೇ ಮಾಡಿದ ಈ ದಾಳಿಯಲ್ಲಿ ಅದೃಷ್ಟವಶಾತ್ ಆತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ವ್ಯಕ್ತಿಯ ಕಾರಿಗೂ ಗುಂಡೇಟು ತಗುಲಿದೆ.

ಗುಂಡಿನ ದಾಳಿಗೆ ಒಳಗಾದ ವ್ಯಕ್ತಿಯನ್ನು ಸುಳ್ಯ ಪಟ್ಟಣ ಸಮೀಪದ ಜಯನಗರ ನಿವಾಸಿ ಮಹಮ್ಮದ್ ಸಾಯಿ (೩೯) ಎಂದು ಗುರುತಿಸ ಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಹೇಳಿಕೆಯ ಪ್ರಕಾರ ಸುಳ್ಯದ ಜ್ಯೋತಿ ಸರ್ಕಲ್ ಸಮೀಪ ಹುಂಡೈ ಕ್ರೆಟಾ ಕಾರು ನಿಲ್ಲಿಸಿ ಪಕ್ಕದಲ್ಲಿದ್ದ ತನ್ನ ತಂಗಿ ಮನೆಗೆ ತೆರಳಿ ವಾಪಸ್ಸು ಕಾರಿನ ಬಳಿ ತಲುಪುತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ.

ಮಡಿಕೇರಿ ಕಡೆಯಿಂದ ಬಂದ ಕೊಡಗು ಜಿಲ್ಲೆ ನೋಂದಣಿ ಸಂಖ್ಯೆ ಹೊಂದಿದ್ದ ಸ್ಕಾರ್ಪಿಯೋ ವಾಹನದಲ್ಲಿದ್ದವರು ಗುಂಡಿನ ಧಾಳಿ ನಡೆಸಿ ಪರಾರಿ

(ಮೊದಲ ಪುಟದಿಂದ) ಆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾರಿನ ಡೋರ್ ತೆರೆಯುತ್ತಿದ್ದ ವೇಳೆ ಜ್ಯೋತಿ ಸರ್ಕಲ್ ಕಡೆಯಿಂದ ಕೆಎ ೧೨ ನೋಂದಣಿ ಸಂಖ್ಯೆಯ ಸ್ಕಾರ್ಪಿಯೋ ಕಾರೊಂದು ಬಂದಿದೆ. ಕಾರಿನಲ್ಲಿದ್ದ ನಾಲ್ವರು ಅಪರಿಚಿತರು ಸಾಯಿಯವರನ್ನು ಹತ್ಯೆ ಮಾಡುವ ಉದ್ದೇಶದಿಂದ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಸಾಯಿ ಅವರ ಬೆನ್ನಿನ ಎಡ ಬದಿಗೆ ತಗುಲಿದೆ ಹಾಗೂ ಕಾರಿನ ಬಲ ಬದಿಯ ಎರಡು ಬಾಗಿಲುಗಳ ಮದ್ಯಕ್ಕೆ ತಗುಲಿದೆ. ಧಾಳಿ ನಡೆಸಿದ ಕೂಡಲೇ ಸ್ಕಾರ್ಪಿಯೋ ವೇಗವಾಗಿ ಹೊರಟು ಹೋಗಿದೆ ಎಂದು ಗಾಯಾಳು ತಿಳಿಸಿದ್ದಾರೆ. ತಾವು ಏಂ ೧೨ ಎಂದು ಇದ್ದುದನ್ನು ಮಾತ್ರ ಗಮನಿಸಿದ್ದಾಗಿಯೂ ನಂತರದ ಸಂಖ್ಯೆ ಗಮನಿಸಲಿಲ್ಲ ಎಂದು ಗಾಯಾಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಅವರು ಸುಳ್ಯ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೦೭, ಕಲಂ ೩೪, ೨೫ ೨೭ ಆರ್ಮ್ಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಸ್ಕಾರ್ಪಿಯೋದ ಪತ್ತೆಗೆ ವಿವಿಧ ಸಿಸಿ ಕ್ಯಾಮೆರಾಗಳನ್ನು ಶೋಧಿಸಿ ತನಿಖೆ ನಡೆದಿದೆ ಎಂದು ಹೇಳಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು. ವಾಹನದ ನೋಂದಣಿ ಸಂಖ್ಯೆ ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು. ವಾಹನದ ನೋಂದಣಿ ಸಂಖ್ಯೆ ಕೊಡಗು ಜಿಲ್ಲೆಯದ್ದಾಗಿರುವುದರಿಂದ ಆರೋಪಿಗಳು ಜಿಲ್ಲೆಯವರೇ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆದಿದೆ.