ಮಡಿಕೇರಿ ಜೂ.೬ : ಕೊಡಗು ಕರ್ನಾಟಕ ರಾಜ್ಯದಲ್ಲಿ ವಿಲೀನವಾದ ನಂತರ ಕೊಡವ ಬುಡಕಟ್ಟು ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ, ಕಲ್ಯಾಣ ರಾಜ್ಯ ಗಗನ ಕುಸುಮವಾಗಿದೆ ಎಂದು ಆರೋಪಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ಸಂವಿಧಾನ ಪರಾಮರ್ಶೆ ಆಯೋಗ ವರದಿಯನ್ವಯ ಕೊಡವ ಭೂರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿತು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರಮುಖರು ಸಂವಿಧಾನದ ೩೩೮ ನೇ ವಿಧಿಯನ್ನು ಆವಾಹಿಸಲು ರಾಷ್ಟಿçÃಯ ಬುಡಕಟ್ಟು ಆಯೋಗಕ್ಕೆ ನಿರ್ದೇಶಿಸ ಬೇಕು ಎಂದು ಒತ್ತಾಯಿಸಿ ದರು.
೨೦೦೨ ರಲ್ಲಿ ಭಾರತದ ಸಂವಿಧಾನ ಪರಿಶೀಲನಾ ಆಯೋಗ ಶಿಫಾರಸ್ಸು ಮಾಡಿರುವಂತೆ ಸಂವಿಧಾನದ ೩೭೧ ನೇ ವಿಧಿಯಡಿಯಲ್ಲಿ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ಯನ್ನು ನೀಡುವ ಮೂಲಕ ಕೊಡವರಿಗೆ ಭದ್ರತೆ ಕಲ್ಪಿಸಬೇಕು. ಸಂವಿಧಾನದ ೨೫ ಮತ್ತು ೨೬ ನೇ ವಿಧಿಯಂತೆ ಸಿಖ್ಖರ ಕಿರ್ಪಾನ್‌ಗೆ ಸಮಾನವಾಗಿ "ಕೊಡವ ಜನಾಂಗೀಯ ಸಂಸ್ಕಾರ ಗನ್" ನ್ನು ಸೇರಿಸಬೇಕು. ಸಂವಿಧಾನದ ೩೭೧, ೫ ನೇ ಮತ್ತು ೬ ನೇ ಶೆಡ್ಯೂಲ್‌ಗಳಡಿಯಲ್ಲಿ ಲೇಹ್ ಮತ್ತು ಲಡಾಖ್ ಸ್ವಾಯತ್ತ ಪ್ರದೇಶಗಳಿಗೆ ಸಮಾನವಾದ ರಾಜಕೀಯ ಸ್ವಾಯತ್ತತೆ ನೀಡಬೇಕು. ವಿಶಿಷ್ಟವಾಗಿರುವ ಕೊಡವ ಜನಾಂಗ ಅಳಿವಿನಂಚಿನಲ್ಲಿದ್ದು, ಸಂವಿಧಾನದಲ್ಲಿ ಕೊಡವರನ್ನು ಅಧಿಕೃತವಾಗಿ ಬುಡಕಟ್ಟು ಜನರೆಂದು ಘೋಷಿಸುವ ಮೂಲಕ ಶಾಸನಬದ್ಧ ಖಾತ್ರಿಯನ್ನು ನೀಡಬೇಕು. ಎಸ್‌ಟಿ ಪಟ್ಟಿಯಲ್ಲಿ ಸೇರಿಸಲು ಅನುಕೂಲವಾಗುವಂತೆ “ಎಮಿಕ್” ವಿಧಾನದೊಂದಿಗೆ ಕೊಡವ ಜನಾಂಗದ ಕುರಿತು ಸಮಗ್ರ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು.
ಶೇ.೯೮ ರಷ್ಟು ಕೊಡವರು ಜನಾಂಗದ ಸ್ವಾಭಿಮಾನವನ್ನು ಕಾಪಾಡುವ ಬದ್ಧತೆಯನ್ನು ಹೊಂದಿದ್ದಾರೆ. ಈ ಮಂದಿ ಎಲ್ಲಾ ರೀತಿಯ ಉದ್ಯೋಗ ಮೀಸಲಾತಿ ಮತ್ತು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶೇ.೨ ರಷ್ಟು ಮಂದಿಗೆ ಯಾವುದೇ ಸಾಂವಿಧಾನಿಕ ಪೋಷಣೆ ಅಥವಾ ಶಾಸನಬದ್ಧ ಸಬಲೀಕರಣದ ಅಗತ್ಯವಿಲ್ಲ. ಇದು ಅಧಿಕಾರಿಗಳು ವ್ಯವಸ್ಥಿತವಾಗಿ ರೂಪಿಸಿದ ಕುತಂತ್ರವೂ ಆಗಿದೆ ಎಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರ ಮೂಲಕ ಸರಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಸಿಎನ್‌ಸಿ ಪ್ರಮುಖರಾದ ಬೊಟ್ಟಂಗಡ ಸವಿತಾ ಗಿರೀಶ್, ಅಜ್ಜಿನಿಕಂಡ ಇನಿತಾ ಮಾಚಯ್ಯ, ಪಟ್ಟಮಾಡ ಲಲಿತಾ ಗಣಪತಿ, ಅರೆಯಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಕಾಟುಮಣಿಯಂಡ ಶರಿನ್, ಕಾಟುಮಣಿಯಂಡ ಉಮೇಶ್, ಮಂದಪAಡ ಮನೋಜ್, ಮಣೋಟೀರ ಚಿನ್ನಪ್ಪ, ಪುಟ್ಟಿಚಂಡ ದೇವಯ್ಯ, ಮೇದೂರ ಕಂಟಿ ನಾಣಿಯಪ್ಪ, ಪುದಿಯೊಕ್ಕಡ ಕಾಶಿ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಬೊಟ್ಟಂಗಡ ಬೋಪಣ್ಣ, ಮಂದಪ್ಪAಡ ದೀಪು, ಕಿರಿಯಮಾಡ ಶೆರಿನ್ ಬೊಟ್ಟಂಗಡ ಗಿರೀಶ್, ಅಜ್ಜಿಕುಟ್ಟೀರ ಲೋಕೇಶ್, ಚಂಬAಡ ಜನತ್ ಹಾಗೂ ಬಾಚರಣಿಯಂಡ ಚಿಪ್ಪಣ್ಣ ಧರಣಿಯಲ್ಲಿ ಪಾಲ್ಗೊಂಡು ಹಕ್ಕೊತ್ತಾಯಗಳ ಪ್ರತಿಪಾದನೆಯ ಪ್ರಮಾಣವಚನವನ್ನು ಸ್ವೀಕರಿಸಿದರು.