ಮಡಿಕೇರಿ, ಜೂ. ೬: ಬೇರೆ ಬೇರೆ ಜನಾಂಗದವರಿಗೆ ಮಠ ಮಾನ್ಯಗಳು ಇರುವಂತೆ ಕೊಡವ ಜನಾಂಗದವರಿಗೆ ಕೊಡವ ಸಮಾಜಗಳು ಅಗತ್ಯವಾಗಿವೆ, ಈ ಸಮಾಜದಲ್ಲಿ ರಾಜಕೀಯ ಬರಬಾರದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಹಾಗೂ ಮಾಜಿ ಎಂಎಲ್‌ಸಿ ಮಂಡೇಪAಡ ಸುನಿಲ್ ಸುಬ್ರಮಣಿ ಅವರುಗಳು ಕರೆ ನೀಡಿದರು.
ನಿನ್ನೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಮಾಜದ ವಾರ್ಷಿಕ ಮಹಾಸಭೆ ಸಂದರ್ಭ ಸಮಾಜದಿಂದ ಸನ್ಮಾನ ಸ್ವೀಕರಿಸಿ ಇವರುಗಳು ಮಾತನಾಡಿದರು. ವೀಣಾ ಅಚ್ಚಯ್ಯ ಅವರು ಮಾತನಾಡಿ, ಕೊಡವ ಸಮಾಜ ಜನಾಂಗದ ಏಳಿಗೆಗೆ ಶ್ರಮಿಸಬೇಕು. ಕಷ್ಟ - ಸುಖಗಳನ್ನು ಸಮಾನವಾಗಿ ಒಟ್ಟಾಗಿ ಎದುರಿಸಬೇಕು. ಇದರಲ್ಲಿ ರಾಜಕೀಯ ಬೆರೆಯಬಾರ ದೆಂದರು.
ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ಕೊಡವ ಸಮಾಜಕ್ಕೆ ತನ್ನದೇ ಆದ ಮಹತ್ವವಿದೆ. ಈ ಸಮಾಜ ಹಾಗೂ ಆಡಳಿತ ಮಂಡಳಿ ಜನಾಂಗದ ಶ್ರೇಯೋಭಿ ವೃದ್ಧಿಗೆ ಶ್ರಮಿಸಬೇಕು. ರಾಜಕಾರಣಿಗಳ ಅಥವಾ ಪಕ್ಷಗಳ ಕೈಗೊಂಬೆಯಾಗ ಬಾರದು. ಒಗ್ಗಟ್ಟಿನ ಅಗತ್ಯತೆಯನ್ನು ಅರ್ಥೈಸಿಕೊಳ್ಳಬೇಕೆಂದರು.
ಎಸ್‌ಪಿಗೆ ಸನ್ಮಾನ
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಕ್ಯಾಪ್ಟನ್ ಮಲಚೀರ ಎ. ಅಯ್ಯಪ್ಪ ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅಯ್ಯಪ್ಪ ಅವರು ತವರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ದೊರೆತಿರುವುದು ಹೆಮ್ಮೆ ಎನಿಸಿದೆ. ಇದಕ್ಕೆ ಎಲ್ಲರ ಸಹಾಯ - ಸಹಕಾರಬೇಕೆಂದರು.
ಕೊಡವ ಸಮಾಜದ ನಿರ್ಗಮಿತ ಅಧ್ಯಕ್ಷ ಕೊಂಗಾAಡ ಎಸ್. ದೇವಯ್ಯ ಮಾತನಾಡಿ, ಅತಿಥಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಚೋವಂಡ ಕಾಳಪ್ಪ, ಕಾರ್ಯದರ್ಶಿ ಅರೆಯಡ ಪಿ. ರಮೇಶ್ ಹಾಗೂ ನಿರ್ದೇಶಕರುಗಳು ಹಾಜರಿದ್ದರು.