ಮಡಿಕೇರಿ, ಜೂ. ೬: ಉಮ್ಮತ್ ಒನ್. ಕೊಡಗು ಸಂಸ್ಥೆಯ ವತಿಯಿಂದ ಇಂದು ವೃತ್ತಿ ಮಾರ್ಗದರ್ಶನ ಶಿಬಿರ ಏರ್ಪಡಿಸಿದ್ದು, ತರಬೇತಿ ತಜ್ಞ, ಸಿಗ್ಮಾ ಸಂಸ್ಥೆಯ ಸ್ಥಾಪಕ ಅಮೀನ್ ಮುದಸ್ಸರ್ ಮಾರ್ಗದರ್ಶನ ನೀಡಿದರು. ಉತ್ತಮ ವಾಘ್ಜರಿ ಮತ್ತು ಸೂಕ್ತ ವಿಚಾರಗಳೊಂದಿಗೆ ಮನತಟ್ಟುವ ಮಾತನಾಡಿದ ಅಮೀನ್ ಅವರ ತರಬೇತಿಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ನಾಲ್ಕುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂ ಡರು. ಹತ್ತು ಮತ್ತು ಮೇಲ್ದರ್ಜೆಯ ವಿದ್ಯಾರ್ಥಿಗಳು ಮುಂದೆ ಹಾಕಬಹುದಾದ ಹೆಜ್ಜೆ, ಒದಗುವ ಸೌಲಭ್ಯ, ಸಿಗುವ ಅವಕಾಶಗಳ ಕುರಿತು ಮಾರ್ಗ ದರ್ಶನ ನೀಡಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಸುಂಟಿಕೊಪ್ಪ ದವರಾದ ಹನೀಫ್, ಹಮೀದ್ ಮದನಿ, ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಹನೀಫ್, ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಗ್ರೀನ್ ಸಿಟಿ ಫೋರಂನ ಚೆಯ್ಯಂಡ ಸತ್ಯ, ಲೀ ಕೂರ್ಗ್ ಬಶೀರ್ ಎಂ.ಬಿ., ಖಾಲಿದ್ ಹಾಕತ್ತೂರು, ಚೊಕ್ಕಂಡಳ್ಳಿ ಅಶ್ರಫ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ಜೀವನದಲ್ಲಿ ಛಲ, ಗುರಿ ಇದ್ದಲ್ಲಿ ಯಶಸ್ಸು ಸಾಧ್ಯ ಎಂದರು.