ಶನಿವಾರಸAತೆ, ಜೂ. ೫: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ೧೯ ಮಂದಿ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
ಮದ್ಯ ಸೇವಿಸಿ, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದುದನ್ನು ಆಲ್ಕೊ ಮೀಟರ್‌ನಲ್ಲಿ ಪತ್ತೆ ಹಚ್ಚಿದ ಪೊಲೀಸರು ‘ಡ್ರಿಂಕ್ ಆ್ಯಂಡ್ ಡ್ರೆöÊವ್’ ಪ್ರಕರಣ ದಾಖಲಿಸಿದ್ದು, ಒಟ್ಟು ರೂ. ೧೨ ಸಾವಿರ ದಂಡ ಸಂಗ್ರಹವಾಗಿದೆ.