ಸುಂಟಿಕೊಪ್ಪ, ಜೂ. ೫: ಸುಂಟಿಕೊಪ್ಪ-ಮಡಿಕೇರಿ ರಸ್ತೆ ಬದಿಯ ಮಸೀದಿ ಕಾಂಪ್ಲೆಕ್ಸ್ ಫಿಂಗಾರ್ಸ್ ಬೇಬಿ ಬಟ್ಟೆ ಅಂಗಡಿಯ ಮಾಲೀಕರಾದ ಸಿದ್ಧಿಕ್ ಅವರು ಶುಕ್ರವಾರ ಬೆಳಿಗ್ಗೆ ಅಂಗಡಿಯ ಬಾಗಿಲು ತೆಗೆದು ಶುಚಿ ಕಾರ್ಯದಲ್ಲಿ ನಿರತರಾಗಿದ್ದಾಗ ಅಂಗಡಿ ಬಾಗಿಲಿನ ಮೆಟ್ಟಿಲಿನಲ್ಲಿ ವಿಷಪೂರಿತ ಕಟ್ಟುಹಾವಿನ ಮರಿ ಕಂಡುಬAದಿದೆ. ಅನಂತರ ಅಕ್ಕ ಪಕ್ಕದ ವರ್ತಕರ ಸಹಕಾರದಿಂದ ಕಟ್ಟ್ಟುಹಾವಿನ ಮರಿಯನ್ನು ಹಿಡಿದು ಸಮೀಪದ ಆನೆಕಾಡು ಪ್ರದೇಶಕ್ಕೆ ಪಂಚಾಯಿತಿ ಪೌರಕಾರ್ಮಿಕ ಹಾಗೂ ಉರಗ ರಕ್ಷಕ ಬಾಲು ಅವರು ಬಿಟ್ಟರು.