ಭಾಗಮಂಡಲ, ಜೂ. ೫: ಗ್ರಾಮದ ಕುದುಕುಳಿ ಸುಗುಣ ಅವರ ಪುತ್ರ ಡ್ಯಾನಿ ಮೇ ೨೮ರಂದು ಸಾವಿಗೀಡಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಅಸಹಜ ಸಾವು ಎಂದು ತಿಳಿದು ಬಂದಿದ್ದು, ಮೃತರ ಪತ್ನಿ, ತಂದೆ ಹಾಗೂ ಯುವಕನೋರ್ವನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿದ್ಯಾರ್ಥಿಯಾಗಿದ್ದಾಗಲೇ ಕೌಟುಂಬಿಕ ವಿಚಾರದಲ್ಲಿ ಜಗಳವಾಗಿ ಮನೆಯಿಂದ ಹೊರಬಂದು ಒಬ್ಬಂಟಿ ಯಾಗಿ ಓದುತ್ತಿದ್ದ. ಅದೇ ವೇಳೆ ಕಾಲೇಜಿಗೆ ಬರುತ್ತಿದ್ದ ಯುವತಿಯನ್ನು ಪ್ರೇಮ ವಿವಾಹವಾಗಿ ಭಾಗಮಂಡಲ ದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಾಗಿದ್ದರು. ಡ್ಯಾನಿ ಎಲೆಕ್ಟಿçÃಷಿ ಯನ್ ಕೆಲಸ ಮಾಡಿಕೊಂಡಿ ದ್ದರು ಹಾಗೂ ಪತ್ನಿ ತಲಕಾವೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾ ಗಿದ್ದು, ೩ ವರ್ಷದ ಗಂಡು ಮಗುವಿದೆ. ಇತ್ತೀಚೆಗೆ ಡ್ಯಾನಿ ತನ್ನ ತಂದೆಯ ಮನೆಯ ಪಕ್ಕದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದರು.

ಘಟನೆ ನಡೆದ ದಿನದಂದು ಮಧ್ಯಾಹ್ನದ ವೇಳೆ ಪತ್ನಿ ಡ್ಯಾನಿಯ ಚಿಕ್ಕಪ್ಪ ಹಾಗೂ ಮಾವನಿಗೆ ಕರೆಮಾಡಿ ಪತಿ ಕುಸಿದುಬಿದ್ದ ಬಗ್ಗೆ ವಿಷಯ ತಿಳಿಸಿದ್ದು, ಚಿಕ್ಕಪ್ಪ ಹಾಗೂ ಮಾವ ಕೂಡಲೇ ಸ್ಥಳಕ್ಕೆ ಆಗಮಿಸಿ ಭಾಗಮಂಡಲ ಆಸ್ಪತ್ರೆಗೆ ರವಾನಿಸಿದ ಸಂದರ್ಭ ಡ್ಯಾನಿ ಸ್ಪಂದಿಸದ ಕಾರಣ ಮಡಿಕೇರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆತರಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಇದು ಸಹಜ ಸಾವಲ್ಲ ಎಂದು ಅದೇ ದಿನ ಸಂಶಯ ವ್ಯಕ್ತವಾಗಿತ್ತು. ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿ ಇದು ಅಸಹಜ ಸಾವು ಎಂದು ದೃಢಪಟ್ಟು, ಇದೀಗ ಮೂರು ಜನರನ್ನು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಷ್ಟೇ ಹೊರಬರಲಿದೆ.

-ಸುನಿಲ್ ಕುಯ್ಯಮುಡಿ.