ಚೆಟ್ಟಳ್ಳಿ, ಜೂ. ೫: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ೧೮ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಮೂರ್ನಾಡುವಿನ ಬಾಚೆಟ್ಟೀರ ಲಾಲು ಮುದ್ದಯ್ಯ ಮೈದಾನದಲ್ಲಿ ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಅಬ್ದುಲ್ ರಶೀದ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಉದ್ಘಾಟನೆ ಪಂದ್ಯವು ಕಬಡಕ್ಕೇರಿ ಹಾಗೂ ಅಲ್ ಅಮೀನ್ ಹಳೇ ತಾಲೂಕು ತಂಡಗಳ ನಡುವೆ ನಡೆಯಿತು. ಇದರಲ್ಲಿ ಅಲ್ ಅಮೀನ್ ತಂಡವು ಗೆಲುವು ಸಾಧಿಸಿತು.
ಆತಿಥೇಯ ಎಸ್.ಆರ್.ಎಸ್ ಮೂರ್ನಾಡು ಹಾಗೂ ಬ್ಲಾö್ಯಕ್ ಬಾಯ್ಸ್ ಎಮ್ಮೆಮಾಡು ತಂಡಗಳ ನಡುವೆ ನಡೆದು ಬ್ಲಾö್ಯಕ್ ಬಾಯ್ಸ್ ಎಮ್ಮೆಮಾಡು ತಂಡ ಗೆಲುವು ಸಾಧಿಸಿತು.
ಸೌತ್ ಇಲೆವೆನ್ ಅಮ್ಮತ್ತಿ ಹಾಗೂ ಯೂತ್ ಕ್ರಿಕೆಟರ್ಸ್ ಹುಂಡಿ ತಂಡಗಳ ನಡುವೆ ನಡೆದು ಸೌತ್ ಇಲೆವೆನ್ ಕ್ರಿಕೆಟರ್ಸ್ ಜಯಗಳಿಸಿತು.
ಲಕ್ಕೀ ಬಾಯ್ಸ್ ಕುಂಜಿಲ ತಂಡವು ಎಫ್.ಸಿ.ಸಿ ಶನಿವಾರಸಂತೆ ತಂಡವನ್ನು ಮಣಿಸಿತು.
ಫ್ರೆಂಡ್ಸ್ ಕ್ರಿಕೆಟರ್ಸ್ ಹೊಸತೋಟ ತಂಡವು ರಿಯಲ್ ಫೈಟರ್ಸ್ ಹುಂಡಿ ತಂಡವನ್ನು ಸೋಲಿಸಿದರೆ, ಎಸ್.ಈ. ಎಸ್ ಬೇತ್ರಿ ತಂಡವನ್ನು ಚೆರಿಯಪರಂಬು ತಂಡ ಮಣಿಸಿತು.
ಚಾಲೆಂಜರ್ಸ್ ಮಡಿಕೇರಿ ಹಾಗೂ ಬ್ಲ್ಯಾಕ್ ಕಾಪ್ಸ್ ಕೊಳಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಬ್ಲಾö್ಯಕ್ ಕಾಪ್ಸ್ ತಂಡ ಗೆದ್ದಿತು.
ಟೀಮ್ ಬ್ಯಾರಿ ಮಡಿಕೇರಿ ಹಾಗೂ ಕಲ್ಲುಬಾಣೆ
(ಮೊದಲ ಪುಟದಿಂದ) ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಟೀಮ್ ಬ್ಯಾರಿ ಗೆಲುವು ಪಡೆದುಕೊಂಡಿತು. ಅಟೇಕರ್ಸ್ ಹಾಕತ್ತೂರು ವೀರಾಜಪೇಟೆ ಫ್ರೆಂಡ್ಸ್ ತಂಡವನ್ನು ಸೋಲಿಸಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂರ್ನಾಡು ಮುಸ್ಲಿಂ ಜಮಾಹತ್ ಅಧ್ಯಕ್ಷ ಮಜೀದ್, ಉಸ್ತಾದ್ ಹೊಟೇಲ್ ಮಾಲೀಕ ಮುಜೀಬ್ ಹಾಗೂ ರೌಫ್ ಇದ್ದರು.
-ಕೆ.ಎಂ. ಇಸ್ಮಾಯಿಲ್ ಕಂಡಕರೆ