*ಗೋಣಿಕೊಪ್ಪ, ಜೂ. ೪: ಪೊನ್ನಂಪೇಟೆ ತಾಲೂಕು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಗೋಣಿಕೊಪ್ಪ ಪಶು ಆಸ್ಪತ್ರೆ, ಮಡಿಕೇರಿ ಪ್ರಾಣಿ ದಯಾ ಸಂಘ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪಾಲಿಬೆಟ್ಟ ಕೆನೆಲ್ ಕ್ಲಬ್ ಸಹಯೋಗದಲ್ಲಿ ತಾ. ೬ ರಂದು ಮಾಯಮುಡಿ ಗ್ರಾಮದ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಆವರಣದಲ್ಲಿ ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨ ಗಂಟೆವರೆಗೆ ನಡೆಯಲಿದೆ. ರೇಬಿಸ್ ಜಾಗೃತಿ ಶಿಬಿರ (ಹುಚ್ಚು ನಾಯಿ ರೋಗ) ಜಾಗೃತಿ, ಲಸಿಕೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಅರಿವು ಮೂಡಿಸಲಾಗುತ್ತದೆ. ಸುತ್ತಲಿನ ಗ್ರಾಮಸ್ಥರು ಸಾಕು ನಾಯಿಗಳನ್ನು ತಂದು ಲಸಿಕೆ ನೀಡಬಹುದಾಗಿದೆ.